ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ 400ಕ್ಕೂ ಹೆಚ್ಚು ಯುವ ಸ್ಪರ್ಧಿಗಳನ್ನು ರಾಷ್ಟ್ರವ್ಯಾಪಿ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯ ಮೂಲಕ 'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026'ಕ್ಕೆ ಆಯ್ಕೆ ಮಾಡಲಾಯಿತು
ಜೂನ್ 4 ರಿಂದ 30 ರವರೆಗೆ ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ 74 'ರೋಮಾಂಚಕ ಗಡಿ ಗ್ರಾ'ಮಗಳೊಂದಿಗೆ ಯುವಕರನ್ನು ಸಂಪರ್ಕಿಸುವ ರಾಷ್ಟ್ರವ್ಯಾಪಿ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯ ಮೂಲಕ 'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ ಅನ್ನು ಆಯೋಜಿಸಲಾಗಿತ್ತು
ಈ ಕಾರ್ಯಕ್ರಮವು ಇದರಲ್ಲಿ ಭಾಗವಹಿಸಿದವರಿಗೆ ಭಾರತದ ಗಡಿ ಪ್ರದೇಶಗಳ ಸಾಮಾಜಿಕ-ಆರ್ಥಿಕ ಪರಿಸರ, ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳ ಬಗ್ಗೆ ನೇರ ಪರಿಚಯ ಒದಗಿಸಿತು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26 ಜುಲೈ 2026 ರಂದು ಸಂಜೆ 4:30ಕ್ಕೆ 'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ದಲ್ಲಿ ಭಾಗವಹಿಸಿದವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.

'ಮೈ ಭಾರತ್' ಮೂಲಕ ಜಾರಿಗೆ ತರಲಾದ 'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ'ವನ್ನು ಭಾರತದ ಗಡಿ ಗ್ರಾಮಗಳನ್ನು ರಾಷ್ಟ್ರದ ಮೊದಲ ಗ್ರಾಮಗಳೆಂದು ಪರಿಗಣಿಸುವ ಮತ್ತು ವಿಕಸಿತ ಭಾರತದ ಪ್ರಯಾಣದಲ್ಲಿ ಅವುಗಳನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ರೂಪಿಸಲಾಗಿದೆ.

'ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ-2026’ ಅನ್ನು 2026ರ ಜೂನ್ 4 ರಿಂದ 30ರವರೆಗೆ ಎರಡು ಹಂತಗಳಲ್ಲಿ ಆಯೋಜಿಸಲಾಗಿತ್ತು. ಇದು ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ 74 ರೋಮಾಂಚಕ ಗ್ರಾಮಗಳನ್ನು ಒಳಗೊಂಡಿದೆ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸುವ 400 ಕ್ಕೂ ಹೆಚ್ಚು ಯುವ ಸ್ಪರ್ಧಿಗಳನ್ನು ರಾಷ್ಟ್ರವ್ಯಾಪಿ ಆನ್‌ಲೈನ್‌ ರಸಪ್ರಶ್ನೆ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಯಿತು, ಇದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಭಾಗವಾಗಿ, ಇದರಲ್ಲಿ ಭಾಗವಹಿಸಿದವರು ಸ್ಥಳೀಯ ಸಮುದಾಯಗಳೊಂದಿಗೆ ನೆಲೆಸಿದ್ದರು ಮತ್ತು ಸ್ವಚ್ಛತಾ ಅಭಿಯಾನಗಳು, ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಅಭಿಯಾನಗಳು, ಯುವ ಸಮ್ಮೇಳನಗಳು, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು, ಮರ ನೆಡುವ ಅಭಿಯಾನಗಳು, ಮಿನಿ ಮಾದರಿ ಪಂಚಾಯತ್ ಅಣಕುಗಳು, ಸ್ಥಳೀಯ ಕುಶಲಕರ್ಮಿಗಳೊಂದಿಗೆ ಸಂವಾದಗಳಲ್ಲಿ ಭಾಗವಹಿಸಿದರು. ಜೊತೆಗೆ, ಕಾರ್ಯತಂತ್ರದ ಪ್ರಾಮುಖ್ಯತೆಯ ಸಂಸ್ಥೆಗಳಿಗೆ ಭೇಟಿ ನೀಡುವಂತಹ ಚಟುವಟಿಕೆಗಳನ್ನು ಕೈಗೊಂಡರು. ಈ ಕಾರ್ಯಕ್ರಮವು ಇದರಲ್ಲಿ ಭಾಗವಹಿಸಿದವರಿಗೆ ಆ ಗ್ರಾಮಗಳ ಸಾಮಾಜಿಕ-ಆರ್ಥಿಕ ಪರಿಸರ, ಸಾಂಸ್ಕೃತಿಕ ಪರಂಪರೆ ಮತ್ತು ಭಾರತದ ಗಡಿ ಪ್ರದೇಶಗಳ ಅಭಿವೃದ್ಧಿಯ ಆಕಾಂಕ್ಷೆಗಳ ಬಗ್ಗೆ ನೇರ ಪರಿಚಯವನ್ನು ಒದಗಿಸಿತು. ಇದೇವೆಳೆ, ಸಮುದಾಯದ ಭಾಗವಹಿಸುವಿಕೆ, ರಾಷ್ಟ್ರೀಯ ಏಕೀಕರಣ ಮತ್ತು ಗಡಿ ಗ್ರಾಮಗಳ ಕಾರ್ಯತಂತ್ರದ ಪ್ರಾಮುಖ್ಯತೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಒದಗಿಸಿತು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's $13 billion semiconductor mission: Boosting domestic chip manufacturing and design

Media Coverage

India's $13 billion semiconductor mission: Boosting domestic chip manufacturing and design
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಸೆಪ್ಟೆಂಬರ್ 2026
September 08, 2026

Viksit Bharat, Many Engines: Defence, Diplomacy, Growth & Green Power Under PM Modi