ಪ್ರಧಾನಮಂತ್ರಿ ಅವರಿಂದ ಜಲ ಜೀವನ್ ಮಿಷನ್ ಆಪ್ ಮತ್ತು ರಾಷ್ಟ್ರೀಯ ಜಲ ಜೀವನ್ ಕೋಶಕ್ಕೆ ಚಾಲನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 2ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮ ಪಂಚಾಯ್ತಿಗಳು ಮತ್ತು ಜಲಜೀವನ್ ಮಿಷನ್ ನ ಜಲ ಸಮಿತಿ/ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲೂಎಸ್ ಸಿ)ಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಅಲ್ಲದೆ ಪ್ರಧಾನಮಂತ್ರಿ ಅವರು, ಯೋಜನೆಯ ಪಾಲುದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಯೋಜನೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲು ರೂಪಿಸಿರುವ ಜಲ ಜೀವನ್ ಮಿಷನ್ ಆಪ್ ಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಜಲಜೀವನ್ ಕೋಶಕ್ಕೂ ಚಾಲನೆ ನೀಡುವರು, ಅದರಲ್ಲಿ ಭಾರತ ಅಥವಾ ವಿದೇಶದಲ್ಲಿರುವ ಯಾವುದೇ ವ್ಯಕ್ತಿ, ಸಂಸ್ಥೆ, ಕಾರ್ಪೋರೇಟ್ ಅಥವಾ ಪರೋಪಕಾರಿಗಳು ಪ್ರತಿ ಗ್ರಾಮೀಣ ಕುಟುಂಬಗಳಿಗೆ, ಶಾಲೆ, ಅಂಗನವಾಡಿ ಕೇಂದ್ರ, ಆಶ್ರಮ ಶಾಲಾ ಮತ್ತು ಇತರೆ ಸಾರ್ವಜನಿಕ ಸಂಸ್ಥೆಗಳಿಗೆ ಕೊಳಾಯಿ ನೀರು ಸಂಪರ್ಕ ಕೊಡಿಸಲು ಕೊಡುಗೆ ಅಥವಾ ಸಹಾಯ ಮಾಡಬಹುದು.

ಇದೇ ಸಮಯದಲ್ಲಿ ದೇಶವ್ಯಾಪಿ ಜಲಜೀವನ್ ಮಿಷನ್ ಕುರಿತಂತೆ ಗ್ರಾಮಸಭೆಗಳೂ ಸಹ ನಡೆಯಲಿವೆ. ಗ್ರಾಮಸಭೆಗಳು ಹಳ್ಳಿಗಳ ನೀರು ಸರಬರಾಜು ವ್ಯವಸ್ಥೆಗಳ ಯೋಜನೆ ಮತ್ತು ನಿರ್ವಹಣೆಯ ಬಗ್ಗೆ ಚರ್ಚಸುತ್ತವೆ ಮತ್ತು ದೀರ್ಘಾವಧಿಯಲ್ಲಿ ನೀರಿನ ಭದ್ರತೆಗೆ ಕೆಲಸ ಮಾಡುತ್ತವೆ.

ಜಲಸಮಿತಿ/ವಿಡಬ್ಲೂಎಸ್ ಸಿ ಕುರಿತು

ಜಲಸಮಿತಿಗಳು, ಗ್ರಾಮಗಳ ನೀರು ಸರಬರಾಜು ವ್ಯವಸ್ಥೆಗಳ ಯೋಜನೆ, ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ, ಆ ಮೂಲಕ ಪ್ರತಿ ಮನೆಗೂ ನಿಯಮಿತವಾಗಿ ಮತ್ತು ದೀರ್ಘಾವಧಿಯಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತವೆ.  

ಸುಮಾರು 6 ಲಕ್ಷ ಗ್ರಾಮಗಳ ಪೈಕಿ ದೇಶದ ಸುಮಾರು 3.5 ಲಕ್ಷ ಗ್ರಾಮಗಳಲ್ಲಿ  ಜಲಸಮಿತಿಗಳು/ ವಿಡಬ್ಲೂ ಎಸ್ ಸಿಗಳು ರಚನೆಯಾಗಿವೆ. 7.1ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಕ್ಷೇತ್ರ ಪರೀಕ್ಷಾ ಕಿಟ್ ಬಳಸಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲು ತರಬೇತಿಯನ್ನು ನೀಡಲಾಗಿದೆ.

ಜಲಜೀವನ್ ಮಿಷನ್ ಕುರಿತು

2019ರ ಆಗಸ್ಟ್ 15ರಂದು ಪ್ರಧಾನಮಂತ್ರಿ ಅವರು, ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯನ್ನು ಪ್ರಕಟಿಸಿದ್ದರು. ಯೋಜನೆ ಆರಂಭವಾಗುವಾಗ, ಗ್ರಾಮೀಣ ಪ್ರದೇಶದಲ್ಲಿ ಕೇವಲ 3.23 ಕೋಟಿ (ಶೇ.17ರಷ್ಟು) ಮನೆಗಳಿಗೆ ಮಾತ್ರ ಶುದ್ಧ ನಲ್ಲಿ ನೀರು ಪೂರೈಕೆ ಸಂಪರ್ಕವಿತ್ತು.

ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕಳೆದ ಎರಡು ವರ್ಷಗಳಿಂದೀಚೆಗೆ ಹೊಸದಾಗಿ 5 ಕೋಟಿಗೂ ಅಧಿಕ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ. ಈವರೆಗೆ ಸುಮಾರು 8.26 ಕೋಟಿ (ಶೇ.43ರಷ್ಟು ) ಗ್ರಾಮೀಣ ಮನೆಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 78 ಜಿಲ್ಲೆಗಳ 58ಸಾವಿರದ ಗ್ರಾಮ ಪಂಚಾಯ್ತಿಗಳ ಮತ್ತು 1.16 ಲಕ್ಷ ಗ್ರಾಮಗಳ ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ ನೀರು ಪೂರೈಕೆಯಾಗುತ್ತಿದೆ. ಈವರೆಗೆ 7.72 ಲಕ್ಷ (ಶೇ.76ರಷ್ಟು ) ಶಾಲೆಗಳು ಮತ್ತು 7.48 ಲಕ್ಷ (ಶೇ.67.5ರಷ್ಟು) ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ.

ಪ್ರಧಾನಮಂತ್ರಿ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಕನಸು ಸಾಕಾರಕ್ಕೆ ಮತ್ತು  ತಳಮಟ್ಟದವರೆಗೂ ಕಾರ್ಯಕ್ರಮ ಜಾರಿಯಾಗಬೇಕೆಂಬ ವಿಧಾನವನ್ನು ಪಾಲಿಸಲು 3.60ಲಕ್ಷ ಕೋಟಿ ರೂ. ಬಜೆಟ್ ನೆರವಿನಲ್ಲಿ ರಾಜ್ಯಗಳ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ, 2021-22ರಿಂದ 2025-26ರ ನಡುವಿನ ಅವಧಿಯಲ್ಲಿ ಗ್ರಾಮಗಳ ನೀರು ಮತ್ತು ನೈರ್ಮಲ್ಯಕ್ಕೆ 15ನೇ ಹಣಕಾಸು ಯೋಜನೆಯಡಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ 1.42 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ.  

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions