ದೇಶದಾದ್ಯಂತ ವಂದೇ ಮಾತರಂ ನ ಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಲಿದೆ
ಈ ವಿಶೇಷ ಸಂದರ್ಭದ ಸಂಕೇತವಾಗಿ ಅಂಚೆಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 7, 2025 ರಂದು ಬೆಳಿಗ್ಗೆ 9:30ರ ಸುಮಾರಿಗೆ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗೀತೆ "ವಂದೇ ಮಾತರಂ" ನ ವರ್ಷಪೂರ್ತಿ ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ವಿಶೇಷ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಭಾರತದ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಹುಟ್ಟುಹಾಕುತ್ತಿರುವ ಗಾಯನದ ಸಂಯೋಜನೆಯ 150 ವರ್ಷಗಳನ್ನು ಆಚರಿಸುವುದಾಗಿದೆ, ಹಾಗೂ ಈ  ಮೂಲಕ 2025ರ ನವೆಂಬರ್ 7 ರಿಂದ 2026ರ ನವೆಂಬರ್ 7 ರವರೆಗೆ ವರ್ಷಪೂರ್ತಿ ರಾಷ್ಟ್ರವ್ಯಾಪಿ ಸ್ಮರಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಔಪಚಾರಿಕ ಚಾಲನೆಯನ್ನು ನೀಡುತ್ತದೆ.

ಈ ಆಚರಣೆಯ ಸಂದರ್ಭದಲ್ಲಿ ಬೆಳಿಗ್ಗೆ 9:50ರ ಸುಮಾರಿಗೆ ಸಾರ್ವಜನಿಕ ಸ್ಥಳಗಳಲ್ಲಿ "ವಂದೇ ಮಾತರಂ" ನ ಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಲಿದೆ, ಈ ಮುಖ್ಯ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ವರ್ಗಗಳ ನಾಗರಿಕರು ಮುಕ್ತವಾಗಿ ಭಾಗವಹಿಸಲಿದ್ದಾರೆ.

2025ನೇ ವರ್ಷವು ವಂದೇ ಮಾತರಂನ 150 ವರ್ಷತುಂಬಿರುವುದನ್ನು ಸೂಚಿಸುತ್ತದೆ. ನಮ್ಮ ರಾಷ್ಟ್ರೀಯ ಗೀತೆ "ವಂದೇ ಮಾತರಂ" ಅನ್ನು 1875ರ ನವೆಂಬರ್ 7 ರಂದು ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಶ್ರೀ ಬಂಕಿಮಚಂದ್ರ ಚಟರ್ಜಿ ಅವರು ಬರೆದಿದ್ದಾರೆ. ಸಾಹಿತ್ಯ ಪತ್ರಿಕೆ “ಬಂಗದರ್ಶನ್” ನಲ್ಲಿ ಪ್ರಕಟವಾದ ಶ್ರೀ ಬಂಕಿಮಚಂದ್ರ ಚಟರ್ಜಿ ಅವರ ಕಾದಂಬರಿ “ಆನಂದಮಠ”ದ ಭಾಗವಾಗಿ ಮೊತ್ತಮೊದಲು "ವಂದೇ ಮಾತರಂ" ಕಾಣಿಸಿಕೊಂಡಿತು. ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಸಾಕಾರವಾಗಿ ಮಾತೃಭೂಮಿಯನ್ನು ಆಹ್ವಾನಿಸುವ ಈ ಹಾಡು, ಭಾರತದ ಏಕತೆ ಮತ್ತು ಸ್ವಾಭಿಮಾನದ ಜಾಗೃತಿ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ನೀಡಿತು. ಇದು ಶೀಘ್ರದಲ್ಲೇ ರಾಷ್ಟ್ರದ ಭಕ್ತಿಯ ಶಾಶ್ವತ ಸಂಕೇತವಾಯಿತು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Padma Awards 2026: Five from Assam, strong Northeast presence on honours list

Media Coverage

Padma Awards 2026: Five from Assam, strong Northeast presence on honours list
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of Republic Day
January 26, 2026

The Prime Minister, Shri Narendra Modi said that Republic Day is a powerful symbol of India’s freedom, Constitution and democratic values. He noted that the occasion inspires the nation with renewed energy and motivation to move forward together with a firm resolve towards nation-building.

The Prime Minister shared a Sanskrit Subhashitam on the occasion-
“पारतन्त्र्याभिभूतस्य देशस्याभ्युदयः कुतः। अतः स्वातन्त्र्यमाप्तव्यमैक्यं स्वातन्त्र्यसाधनम्॥”

The Subhashitam conveys that a nation that is dependent or under subjugation cannot progress. Therefore, only by adopting freedom and unity as our guiding principles can the progress of the nation be ensured.

The Prime Minister wrote on X;

“गणतंत्र दिवस हमारी स्वतंत्रता, संविधान और लोकतांत्रिक मूल्यों का सशक्त प्रतीक है। यह पर्व हमें एकजुट होकर राष्ट्र निर्माण के संकल्प के साथ आगे बढ़ने की नई ऊर्जा और प्रेरणा देता है।

पारतन्त्र्याभिभूतस्य देशस्याभ्युदयः कुतः।

अतः स्वातन्त्र्यमाप्तव्यमैक्यं स्वातन्त्र्यसाधनम्॥”