ದ್ವಾರಕಾ ಎಕ್ಸ್ ಪ್ರೆಸ್ ವೇಯ ದೆಹಲಿ ವಿಭಾಗವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಎನ್.ಸಿ.ಆರ್ ನಲ್ಲಿ ನಗರ ವಿಸ್ತರಣಾ ರಸ್ತೆ-2 ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಯೋಜನೆಗಳು ಬಹು ಮಾದರಿ ಸಂಪರ್ಕವನ್ನು ಒದಗಿಸಲು ಮತ್ತು ದೆಹಲಿಯ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 17ರಂದು ಮಧ್ಯಾಹ್ನ 12:30ರ ಸುಮಾರಿಗೆ ದೆಹಲಿಯ ರೋಹಿಣಿಯಲ್ಲಿ ಸುಮಾರು 11,000 ಕೋಟಿ ರೂ.ಗಳ ಸಂಯೋಜಿತ ವೆಚ್ಚದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ  ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ದ್ವಾರಕಾ ಎಕ್ಸ್ ಪ್ರೆಸ್ ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ -2 (ಯು.ಇ.ಆರ್ -2) ಯೋಜನೆಗಳನ್ನು ರಾಜಧಾನಿಯ ದಟ್ಟಣೆಯನ್ನು ಕಡಿಮೆ ಮಾಡುವ ಸರ್ಕಾರದ ಸಮಗ್ರ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸಂಪರ್ಕವನ್ನು ಹೆಚ್ಚು ಸುಧಾರಿಸುವ, ಪ್ರಯಾಣದ ಸಮಯವನ್ನು ಕಡಿತಗೊಳಿಸುವ ಮತ್ತು ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರವನ್ನು ಕಡಿಮೆ ಮಾಡುವ ಉದ್ದೇಶದಿಂದ. ಈ ಉಪಕ್ರಮಗಳು ಜೀವನವನ್ನು ಸುಲಭಗೊಳಿಸುವ ಮತ್ತು ತಡೆರಹಿತ ಚಲನಶೀಲತೆಯನ್ನು ಖಚಿತಪಡಿಸುವ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ರಚಿಸುವ ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.

ದ್ವಾರಕಾ ಎಕ್ಸ್ ಪ್ರೆಸ್ ವೇಯ 10.1 ಕಿ.ಮೀ ಉದ್ದದ ದೆಹಲಿ ವಿಭಾಗವನ್ನು ಸುಮಾರು 5,360 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗವು ಯಶೋಭೂಮಿ, ಡಿ.ಎಂ.ಆರ್.ಸಿ ಬ್ಲೂ ಲೈನ್ ಮತ್ತು ಆರೆಂಜ್ ಲೈನ್, ಮುಂಬರುವ ಬಿಜ್ವಾಸನ್ ರೈಲ್ವೆ ನಿಲ್ದಾಣ ಮತ್ತು ದ್ವಾರಕಾ ಕ್ಲಸ್ಟರ್ ಬಸ್ ಡಿಪೋಗೆ ಬಹು ಮಾದರಿ ಸಂಪರ್ಕವನ್ನು ಒದಗಿಸುತ್ತದೆ. ಈ ವಿಭಾಗವು ಇವುಗಳನ್ನು ಒಳಗೊಂಡಿದೆ:

• ಪ್ಯಾಕೇಜ್ 1: ಶಿವಮೂರ್ತಿ ಜಂಕ್ಷನ್ ನಿಂದ ದ್ವಾರಕಾ ಸೆಕ್ಟರ್ -21ರ ರೋಡ್ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ವರೆಗೆ 5.9 ಕಿ.ಮೀ.
• ಪ್ಯಾಕೇಜ್ 2: ದ್ವಾರಕಾ ಸೆಕ್ಟರ್ -21 ಆರ್.ಯು.ಬಿಯಿಂದ ದೆಹಲಿ-ಹರಿಯಾಣ ಗಡಿಯವರೆಗೆ 4.2 ಕಿ.ಮೀ, ನಗರ ವಿಸ್ತರಣಾ ರಸ್ತೆ -2 ಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ದ್ವಾರಕಾ ಎಕ್ಸ್ ಪ್ರೆಸ್ ವೇಯ 19 ಕಿ.ಮೀ ಉದ್ದದ ಹರಿಯಾಣ ವಿಭಾಗವನ್ನು ಈ ಹಿಂದೆ ಮಾರ್ಚ್ 2024 ರಲ್ಲಿ ಪ್ರಧಾನಮಂತ್ರಿ ಉದ್ಘಾಟಿಸಿದರು.

ಪ್ರಧಾನಮಂತ್ರಿ ಅವರು ಸುಮಾರು 5,580 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಬಹದ್ದೂರ್ಘರ್ ಮತ್ತು ಸೋನಿಪತ್ ಗೆ ಹೊಸ ಸಂಪರ್ಕ ಕಲ್ಪಿಸುವ ನಗರ ವಿಸ್ತರಣಾ ರಸ್ತೆ-2ರ ಅಲಿಪುರದಿಂದ ಡಿಚಾನ್ ಕಲಾನ್ ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ. ಇದು ದೆಹಲಿಯ ಒಳ ಮತ್ತು ಹೊರ ವರ್ತುಲ ರಸ್ತೆಗಳು ಮತ್ತು ಜನನಿಬಿಡ ಸ್ಥಳಗಳಾದ ಮುಕರ್ಬಾ ಚೌಕ್, ಧೌಲಾ ಕುವಾನ್ ಮತ್ತು ಎನ್.ಎಚ್-09 ರಲ್ಲಿ ಸಂಚಾರವನ್ನು ಸರಾಗಗೊಳಿಸುತ್ತದೆ. ಹೊಸ ಸ್ಪರ್ಸ್ ಬಹದ್ದೂರ್ಘರ್ ಮತ್ತು ಸೋನಿಪತ್ ಗೆ ನೇರ ಪ್ರವೇಶವನ್ನು ನೀಡುತ್ತದೆ, ಕೈಗಾರಿಕಾ ಸಂಪರ್ಕವನ್ನು ಸುಧಾರಿಸುತ್ತದೆ, ನಗರ ಸಂಚಾರವನ್ನು ಕಡಿತಗೊಳಿಸುತ್ತದೆ ಮತ್ತು ಎನ್.ಸಿ.ಆರ್ ನಲ್ಲಿ ಸರಕು ಸಾಗಣೆಯನ್ನು ವೇಗಗೊಳಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSMEs’ contribution to GDP rises, exports triple, and NPA levels drop

Media Coverage

MSMEs’ contribution to GDP rises, exports triple, and NPA levels drop
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of grasping the essence of knowledge
January 20, 2026

The Prime Minister, Shri Narendra Modi today shared a profound Sanskrit Subhashitam that underscores the timeless wisdom of focusing on the essence amid vast knowledge and limited time.

The sanskrit verse-
अनन्तशास्त्रं बहुलाश्च विद्याः अल्पश्च कालो बहुविघ्नता च।
यत्सारभूतं तदुपासनीयं हंसो यथा क्षीरमिवाम्बुमध्यात्॥

conveys that while there are innumerable scriptures and diverse branches of knowledge for attaining wisdom, human life is constrained by limited time and numerous obstacles. Therefore, one should emulate the swan, which is believed to separate milk from water, by discerning and grasping only the essence- the ultimate truth.

Shri Modi posted on X;

“अनन्तशास्त्रं बहुलाश्च विद्याः अल्पश्च कालो बहुविघ्नता च।

यत्सारभूतं तदुपासनीयं हंसो यथा क्षीरमिवाम्बुमध्यात्॥”