"ಆರ್ಥಿಕ ಬೆಳವಣಿಗೆಯ ಸುಸ್ಥಿರಗೊಳಿಸುವಿಕೆ ಮತ್ತು ಬಲವರ್ಧನೆ" ಎಂಬ ವಿಷಯದ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ 2026ರ ಮಾರ್ಚ್ 3 ರಂದು ಬೆಳಗ್ಗೆ 11:15 ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಮಂತ್ರಿ ಮಾತನಾಡಲಿದ್ದಾರೆ.
ಈ ವಿಷಯವಾಗಿ (i) ಉತ್ಪಾದನೆ, ಕೈಗಾರಿಕಾ ಮೇಲ್ದರ್ಜೀಕರಣ ಮತ್ತು ಕಾರ್ಯತಂತ್ರದ ವಲಯಗಳು (ii) ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಹಣಕಾಸು ಮತ್ತು ಮಾರುಕಟ್ಟೆ ಪ್ರವೇಶ (iii) ನಗರ ಆರ್ಥಿಕ ಪ್ರದೇಶಗಳು ಮತ್ತು (iv) ಮೂಲಸೌಕರ್ಯ, ಸಾಗಣೆ ಮತ್ತು ಸರಕು ಸಾಗಣೆ ಸೇರಿದಂತೆ ವಿವಿಧ ವಲಯಗಳನ್ನು ಒಳಗೊಂಡ ನಾಲ್ಕು ವಿವಿಧ ವೆಬಿನಾರ್ ಗಳಿರಲಿವೆ.
ಕೈಗಾರಿಕಾ ಪರಿಮಾಣವನ್ನು ವಿಸ್ತರಿಸಲು, ತಾಂತ್ರಿಕ ನಾಯಕತ್ವವನ್ನು ಆಳಗೊಳಿಸಲು ಮತ್ತು ನಿರ್ಣಾಯಕ ವಲಯಗಳ ಅಡಿಪಾಯವನ್ನು ಬಲಪಡಿಸಲು ಭವಿಷ್ಯದ ಮುನ್ನೋಟದ ಸುಧಾರಣಾ ಕ್ರಮಗಳನ್ನು ಬಜೆಟ್ ನಂತರದ ವೆಬಿನಾರ್ ವಿವರಿಸಲಿದೆ. ವಾಸ್ತವದ ಅನುಭವವುಳ್ಳ ಉದ್ದಿಮೆ ಭಾಗೀದಾರರ ಒಳನೋಟ ಸಹಿತ ಮಾರ್ಗದರ್ಶನದೊಂದಿಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಬೆಂಬಲ ನೀಡಬಲ್ಲ ಆದ್ಯತೆಗಳನ್ನು ಸಮರ್ಪಕ ಕ್ರಿಯೆಯಾಗಿ ಕಾರ್ಯಗತಗೊಳಿಸುವ ಬಗ್ಗೆ ಈ ಚರ್ಚೆಗಳು ಗಮನಹರಿಸಲಿವೆ.


