ಮಾರ್ಚ್ 6, 2026 ರಂದು ಬೆಳಿಗ್ಗೆ 11:15ಕ್ಕೆ “ಕೃಷಿ ಮತ್ತು ಗ್ರಾಮೀಣ ಪರಿವರ್ತನೆ” ಎಂಬ ವಿಷಯದ ಕುರಿತು ಬಜೆಟ್ ನಂತರದ ಮೌಲ್ಯವರ್ಧಿತ ವಿಶ್ಲೇಷಣೆ ಸಂವಾದಗಳ ವಿಶೇಷ ವೆಬಿನಾರ್ ಸರಣಿಕೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ ಮೂಲಕ ಭಾಷಣ ಮಾಡಲಿದ್ದಾರೆ.
ಈ ವಿಷಯದಡಿಯಲ್ಲಿ, ನಾಲ್ಕು ಪ್ರಮುಖ ವಲಯಗಳನ್ನು ಒಳಗೊಂಡ ಎಂಟು ವಿಭಿನ್ನ ಸರಣಿ ವೆಬಿನಾರ್ ಅವಧಿಗಳನ್ನು ನಡೆಸಲಾಗುತ್ತಿದೆ: (i) ಕೃಷಿ (ii) ಪಶುಸಂಗೋಪನೆ ಮತ್ತು ಹೈನುಗಾರಿಕೆ (iii) ಮೀನುಗಾರಿಕೆ (iv) ಗ್ರಾಮೀಣ ಜೀವನೋಪಾಯ.
ಬಜೆಟ್ ನಂತರದ ವೆಬಿನಾರ್ ವಿಶೇಷ ಸರಣಿಯಲ್ಲಿ ಗೋಡಂಬಿ, ತೆಂಗಿನಕಾಯಿ, ಶ್ರೀಗಂಧ, ರಾಳಮರ(ಅಗರ್‌ವುಡ್), ಬಾದಾಮಿ, ಅಕ್ರೋಟು (ವಾಲ್‌ನಟ್ಸ್ ) ಮತ್ತು ಪೈನ್ ಬೀಜಗಳಂತಹ ಬೆಳೆಗಳ ಸಾಮರ್ಥ್ಯವನ್ನು ವಿವರಿಸುವ ಮೂಲಕ ಹೆಚ್ಚಿನ ಮೌಲ್ಯದ ಕೃಷಿಯನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ. ಕೃಷಿಗಾಗಿ ಎಐ- ಚಾಲಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಗಳನ್ನು "ಭಾರತ್ ವಿಸ್ತಾರ್" ಯೋಜನೆ ಮೂಲಕ ನೀಡುವ ಅವಕಾಶಗಳ ಬಗ್ಗೆಯೂ ಇದು ಚರ್ಚಿಸುತ್ತದೆ. ಪಶುಸಂಗೋಪನಾ ಮೌಲ್ಯ ಸರಪಳಿಯಲ್ಲಿ ಖಾಸಗಿ ವಲಯದ ಹೂಡಿಕೆ ಮತ್ತು ಉದ್ಯಮಶೀಲತೆ, ಮೀನುಗಾರಿಕೆಗಾಗಿ ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ, ಕರಾವಳಿ ಮೀನುಗಾರಿಕೆ ಮೌಲ್ಯ ಸರಪಳಿಗಳನ್ನು ಬಲಪಡಿಸುವುದು ಮತ್ತು ಸ್ವಸಹಾಯ ಉದ್ಯಮಿಗಳು-ಗ್ರಾಮೀಣ ಪರಿವರ್ತನೆಗಾಗಿ ಮಾರುಕಟ್ಟೆ ಮಾರ್ಗಗಳು ( ಶೀ- ಮಾರ್ಟ್) ಮೂಲಕ ಗ್ರಾಮೀಣ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ಬಗ್ಗೆಯೂ ಈ ಅಧಿವೇಶನಗಳು ಚರ್ಚಿಸುತ್ತವೆ.


