ಅಸ್ಸಾಂನ ಅಹೋಮ್‌ ಸಾಮ್ರಾಜ್ಯದ ಸೇನಾ ಮುಖ್ಯಸ್ಥನಾಗಿದ್ದ ಲಚಿತ್‌ ಬರ್ಫುಕನ್‌ 1671ರಲ್ಲಿ ನಡೆದ ಸರೈಘಾಟ್‌ ಯುದ್ದದಲ್ಲಿ ಮೊಘಲರನ್ನು ಹೀನಾಯವಾಗಿ ಪರಾಭಗೊಳಿಸಿದ್ದ ವೀರ ಸೇನಾನಿ

ನ. 25ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಲಚಿತ್‌ ಬರ್ಫುಕನ್‌ನ 400ನೇ ಜನ್ಮ ದಿನಾಚರಣೆ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ.

ಅಜ್ಞಾತವಾಗಿ ಉಳಿದ ಸಾಧಕರು, ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಕಾರ್ಯವನ್ನು ಪ್ರಧಾನ ಮಂತ್ರಿಯವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅದರಂತೆ 2022ನೇ ಸಾಲಿನಲ್ಲಿ ದೇವು ಲಚಿತ್‌ ಬರ್ಫುಕನ್‌ ಅವರ 400ನೇ ಜನ್ಮ ದಿನವನ್ನು ವರ್ಷವಿಡೀ ಆಚರಿಸಲಾಗುತ್ತಿದೆ. ಈ ಜನ್ಮದಿನಾಚರಣೆಯ ವಾರ್ಷಿಕ ಆಚರಣೆಯನ್ನು ಕಳೆದ ಫೆಬ್ರವರಿಯಲ್ಲಿ ನಿಟಕಪೂರ್ವ ರಾಷ್ಟ್ರಪತಿಗಳಾದ ರಾಮನಾಥ್‌ ಕೋವಿಂದ್‌ ಅವರು ಗುವಾಹಟಿಯಲ್ಲಿ ಉದ್ಘಾಟಿಸಿದ್ದನ್ನು ಸ್ಮರಿಸಬಹುದು.

ಲಚಿತ್‌ ಬರ್ಫುಕನ್‌ (1622ರ ನ. 24ರಿಂದ 1672 ಏ. 25) ಅಸ್ಸಾಂನ ಅಹೋಮ್‌ ಸಾಮ್ರಾಜ್ಯದ ಜನಪ್ರಿಯ ಸೇನಾ ಮುಖ್ಯಸ್ಥರಾಗಿದ್ದರು. ಮುಘಲರನ್ನು ಸೋಲಿಸುವ ಮೂಲಕ ಮೊಘಲರ ಸಾಮ್ರಾಟ ಔರಂಗಜೇಬನ ಸಾಮ್ರಾಜ್ಯ ವಿಸ್ತರಣೆಗೆ ತಡೆಯೊಡ್ಡುವಲ್ಲಿ ಯಶಸ್ವಿಯಾದ ಮಹಾನ್‌ ಯೋಧ. 1671ರಲ್ಲಿ ನಡೆದ ಸರೈಘಾಟ್‌ ಯುದ್ದದಲ್ಲಿ ಅಸ್ಸಾಮಿ ಸೈನಿಕರಿಗೆ ಸ್ಫೂರ್ತಿ ತುಂಬಿ ಹೋರಾಟ ನಡೆಸಿದ ಲಚಿತ್‌ ಬರ್ಫುಕನ್‌ ಮೊಘಲರ ಹೀನಾಯ, ಅವಮಾನಕರ ಸೋಲಿಗೆ ಕಾರಣರಾಗಿದ್ದರು. ಲಚಿತ್‌ ಬರ್ಫುಕನ್‌ ಹಾಗೂ ಅವನ ಸೈನ್ಯದ ವಿರೋಚಿತ ಹೋರಾಟವು ದೇಶದ ಪ್ರತಿರೋಧದ ಹೋರಾಟದಲ್ಲಿ ಸ್ಫೂರ್ತಿದಾಯಕ ಸೇನಾ ಸಾಹಸಗಾಥೆಯಾಗಿ ಇತಿಹಾಸದಲ್ಲಿ ಉಳಿದಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP To Grow 7% In FY26: Crisil Revises Growth Forecast Upward

Media Coverage

India’s GDP To Grow 7% In FY26: Crisil Revises Growth Forecast Upward
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಡಿಸೆಂಬರ್ 2025
December 16, 2025

Global Respect and Self-Reliant Strides: The Modi Effect in Jordan and Beyond