ಈದ್ ಶುಭಾಸಯ ಕೋರಿದ ಪ್ರಧಾನಮಂತ್ರಿ, ಇಂಧನ ಮೂಲಸೌಕರ್ಯ ಮೇಲಿನ ದಾಳಿಗೆ ಖಂಡನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿದರು, ಅವರು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಪ್ರಾದೇಶಿಕ ಭದ್ರತಾ ಕಾಳಜಿಗಳ ಕುರಿತು ಸಮಾಲೋಚಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ಅವರಿಗೆ ಮತ್ತು ಕತಾರ್ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸಿದರು. ಚರ್ಚೆಯ ವೇಳೆ, ಪ್ರಧಾನಮಂತ್ರಿ ಅವರು ಕತಾರ್‌ನೊಂದಿಗೆ ಭಾರತದ ಒಗ್ಗಟ್ಟನ್ನು ಪುನರುಚ್ಚರಿಸಿದರು ಮತ್ತು ಅವರ ಪ್ರದೇಶದ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ತೋರಿಸಲಾದ ಆರೈಕೆ ಮತ್ತು ಬೆಂಬಲಕ್ಕಾಗಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಕೃತಜ್ಞತೆ ಸಲ್ಲಿಸಿದರು ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮೇಲುಗೈ ಸಾಧಿಸುವ ಭರವಸೆ ಹಂಚಿಕೊಂಡರು. ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರಕ್ಕಾಗಿ ಇಬ್ಬರೂ ನಾಯಕರು ತಮ್ಮ ಹಂಚಿಕೆಯ ನಿಲುವನ್ನು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ  X  ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ನನ್ನ ಸಹೋದರ ಕತಾರ್‌ನ ಅಮೀರ್ ಗೌರವಾನ್ವಿತ ​​ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಸಮಾಲೋಚನೆ ನಡೆಸಿದೆ ಮತ್ತು ಅವರಿಗೆ ಮತ್ತು ಕತಾರ್ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸಿದೆನು.

ನಾವು ಕತಾರ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಅವರ ಪ್ರದೇಶದ ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ ಎಂದು ಪುನರುಚ್ಚರಿಸಿದೆನು.

ಭಾರತೀಯ ಸಮುದಾಯಕ್ಕೆ ತೋರಿಸಲಾದ ಕಾಳಜಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮೇಲುಗೈ ಸಾಧಿಸಬೇಕೆಂದು ಆಶಿಸುತ್ತೇನೆ.

ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ನಾವು ಬೆಂಬಲಿಸುತ್ತೇವೆ.’’

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi hails India’s ‘Mission Drishti’ launch as ‘world’s first OptoSAR satellite’ enters orbit

Media Coverage

PM Modi hails India’s ‘Mission Drishti’ launch as ‘world’s first OptoSAR satellite’ enters orbit
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಮೇ 2026
May 04, 2026

Green Roads, Smart Tolls, Trillion-Dollar Dreams: How PM Modi's Policies are Supercharging a Modern India