ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದ ಲೋಪೋಲಿ ಮೆಲೊ ಅವರ ' ಸಂಸತ್ತು ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಒಂದು ದಿನ ' ಎಂಬ ಶೀರ್ಷಿಕೆಯ ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರತಿಭಾವಂತ ಯುವಕರನ್ನು ಭೇಟಿ ಮಾಡುವ ಅವಕಾಶವನ್ನು ನೀಡಿದ ಇಂತಹ ಉಪಕ್ರಮವನ್ನು ಕೈಗೊಂಡಿದ್ದಕ್ಕಾಗಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ;
"ಅರುಣಾಚಲ ಪ್ರದೇಶದ ಲೋಪೋಲಿ ಮೆಲೊ ಅವರ ಈ ವೈಯಕ್ತಿಕ ವೃತ್ತಾಂತವನ್ನು ಓದುವುದನ್ನು ನೀವು ಆನಂದಿಸುತ್ತೀರಿ. ಪ್ರತಿಭಾವಂತ ಯುವಕರನ್ನು ಭೇಟಿ ಮಾಡುವ ಅವಕಾಶವನ್ನು ನನಗೆ ನೀಡಿದ ಇಂತಹ ಉಪಕ್ರಮದ ನೇತೃತ್ವ ವಹಿಸಿದ್ದಕ್ಕಾಗಿ ಸ್ಪೀಕರ್ ಓಂ ಬಿರ್ಲಾ ಜೀ ಅವರನ್ನು ನಾನು ಶ್ಲಾಘಿಸಲು ಬಯಸುತ್ತೇನೆ,’’ ಎಂದು ಹೇಳಿದ್ದಾರೆ.
You will enjoy reading this very personal account of Lopoli Melo from Arunachal Pradesh. I would like to laud Speaker Om Birla Ji for taking the lead for such an initiative which also gave me the opportunity to meet bright youngsters. @ombirlakota https://t.co/QROY7It41c
— Narendra Modi (@narendramodi) February 9, 2023