ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ ನ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಮೋದಿ ಅವರು ಪ್ರತ್ಯೇಕ ಎಕ್ಸ್ ಪೋಸ್ಟ್‌ ಗಳಲ್ಲಿ ಹೀಗೆ ಬರೆದಿದ್ದಾರೆ:

“ನಮ್ಮ ನಾಗರಿಕತೆಯ ಶೌರ್ಯದ ಹೆಮ್ಮೆಯ ಸಂಕೇತವಾದ ಸೋಮನಾಥ ದೇಗುಲಕ್ಕೆ ಭೇಟಿ ನೀಡಿ ಧನ್ಯನಾದೆ. 

1026ರಲ್ಲಿ ಸೋಮನಾಥ ದೇವಾಲಯದ ಮೇಲೆ ಮೊದಲ ದಾಳಿ ನಡೆದು ಒಂದು ಸಾವಿರ ವರ್ಷಗಳು ಕಳೆದಿದ್ದು ಇಡೀ ರಾಷ್ಟ್ರವು ಒಟ್ಟಾಗಿ  #SomnathSwabhimanParv ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ.

ಆತ್ಮೀಯ ಸ್ವಾಗತ ನೀಡಿದ ಜನರಿಗೆ ನಾನು ಕೃತಜ್ಞ.”

 

“ಜೈ ಸೋಮನಾಥ! 

ಇಂದಿನ ಸ್ವಾಗತ ಅತ್ಯಂತ ವಿಶೇಷವಾಗಿತ್ತು.”

 

“ಸೋಮನಾಥದಲ್ಲಿ ಶ್ರೀ ಸೋಮನಾಥ ಟ್ರಸ್ಟ್ ಸಭೆಯ ಅಧ್ಯಕ್ಷತೆ ವಹಿಸಿದ್ದೆ. ದೇವಾಲಯ ಸಂಕೀರ್ಣದಲ್ಲಿನ ಮೂಲಸೌಕರ್ಯಗಳ ಮೇಲ್ದರ್ಜೆಗೇರಿಸುವಿಕೆ ಮತ್ತು ಸೋಮನಾಥ ತೀರ್ಥಯಾತ್ರೆಯನ್ನು ಇನ್ನಷ್ಟು ಸ್ಮರಣೀಯವಾಗಿಸುವ ಮಾರ್ಗಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ನಾವು ಪರಿಶೀಲಿಸಿದೆವು.”

 

“ॐ हमारे वेदों का, शास्त्रों का, पुराणों का, उपनिषदों और वेदांत का सार है। 

ॐ ही ध्यान का मूल है, और योग का आधार है। 

ॐ ही साधना में साध्य है। 

ॐ ही शब्द ब्रह्म का स्वरूप है। 

ॐ से ही हमारे मंत्र प्रारंभ एवं पूर्ण होते हैं।

आज सोमनाथ स्वाभिमान पर्व में 1000 सेकंड्स तक ओंकार नाद के सामूहिक उच्चार का सौभाग्य मिला। उसकी ऊर्जा से अंतर्मन स्पंदित और आनंदित हो रहा है।

ॐ तत् सत्!!”

 

“सोमनाथ स्वाभिमान पर्व के सुअवसर पर सोमनाथ मंदिर परिसर में भव्यता और दिव्यता से भरा ड्रोन शो देखने का सौभाग्य मिला। इस अद्भुत शो में हमारी प्राचीन आस्था के साथ आधुनिक टेक्नोलॉजी का तालमेल हर किसी को मंत्रमुग्ध कर गया। सोमनाथ की पावन धरा से निकला यह प्रकाशपुंज पूरे विश्व को भारत की सांस्कृतिक शक्ति का संदेश दे रहा है।”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
WEF Davos: Industry leaders, policymakers highlight India's transformation, future potential

Media Coverage

WEF Davos: Industry leaders, policymakers highlight India's transformation, future potential
NM on the go

Nm on the go

Always be the first to hear from the PM. Get the App Now!
...
ಬೋಡೋ ಒಪ್ಪಂದ ಬೋಡೋ ಜನರಿಗೆ ಹೊಸ ಶಕೆ ಅಸ್ಸಾಂನ ಏಕತೆ ಮತ್ತು ಸಮಗ್ರತೆ ಬಲವರ್ಧನೆ : ಪ್ರಧಾನಿ
January 30, 2020
Bodo Agreement inspired by the mantra of 'Sabka Saath, Sabka Vikas & Sabka Vishwas' and spirit of 'Ek Bharat-Shresth Bharat' : PM
Development of Bodo areas foremost priority of Government; Work has begun on Rs. 1500 crore development package: PM

ಬೋಡೋ ಒಪ್ಪಂದ ಅಸ್ಸಾಂನ ಶಾಂತಿ ಮತ್ತು ಅಭಿವೃದ್ಧಿಯ ಐತಿಹಾಸಿಕ ಅಧ್ಯಾಯ ಎಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು,   'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಹಾಗು 'ಏಕ್ ಭಾರತ್–ಶ್ರೇಷ್ಠ ಭಾರತ್' ನ  ಸ್ಫೂರ್ತಿಯಿಂದ ಪ್ರೇರಿತವಾಗಿದೆ ಎಂದು ಬೋಡೋ ಒಪ್ಪಂದವನ್ನು ಶ್ಲಾಘಿಸಿದರು.

ತಮ್ಮ ಟ್ವೀಟ್‌ಗಳಲ್ಲಿ, ಪ್ರಧಾನಮಂತ್ರಿಯವರು, “ಭಾರತ ಪೂಜ್ಯ ಬಾಪುರವರನ್ನು ಅವರ ಪುಣ್ಯ ತಿಥಿಯಲ್ಲಿ ನೆನಪಿಸಿಕೊಳ್ಳುವ ಸಂದರ್ಭದಲ್ಲಿ, ಅಸ್ಸಾಂ ಶಾಂತಿ ಮತ್ತು ಅಭಿವೃದ್ಧಿಯ ಒಂದು ಐತಿಹಾಸಿಕ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. 50 ವರ್ಷಗಳ ಕಾಯುವಿಕೆಯ ನಂತರ, ನಮ್ಮ ಬೋಡೋ ಸ್ನೇಹಿತರೊಂದಿಗಿನ ಒಪ್ಪಂದವು ಹೊಸ ಶಕೆಯನ್ನು ಆರಂಭಿಸಿದೆ.  ಇದು ಅಸ್ಸಾಂನ ಐಕ್ಯತೆಯನ್ನು ಬಲಪಡಿಸುತ್ತದೆ, ಅಭಿವೃದ್ಧಿಯನ್ನು ತರುತ್ತದೆ ಮತ್ತು ಉಜ್ವಲ ಭವಿಷ್ಯವನ್ನು ನೀಡುತ್ತದೆ“ ಎಂದು ಟ್ಟೀಟ್ ಮಾಡಿದ್ದಾರೆ.

ಬೋಡೋ  ಸಂಘಟನೆಗಳೊಂದಿಗೆ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ನಮ್ಮ ಸರ್ಕಾರದ ಪ್ರಮುಖ ಆದ್ಯತೆಯೆಂದರೆ ಬೋಡೋ ಪ್ರದೇಶಗಳ ಅಭಿವೃದ್ಧಿ.  1500 ಕೋಟಿ ರೂ.ಗಳ ಪ್ಯಾಕೇಜ್‌ನ ಸಮಗ್ರ ಕಾಮಗಾರಿ ಕಾರ್ಯವು ಪ್ರಾರಂಭವಾಗಿದೆ.  ನಮ್ಮ ವಿಶೇಷ ಗಮನವು ಜೀವನದ ಗುಣಮಟ್ಟ ಸುಧಾರಣೆ ಮಾಡುವುದಾಗಿದೆ ಮತ್ತು ಬೋಡೋ ಜನರು ಸರ್ಕಾರಿ ಯೋಜನೆಗಳಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯುವುದನ್ನು ಖಾತ್ರಿಪಡಿಸುವುದಾಗಿದೆ.

 

ಬೋಡೋ ಸ್ನೇಹಿತರು ನಮ್ಮೊಂದಿಗೆ ಶಾಂತಿಯ ಹಾದಿಯಲ್ಲಿ ಜೊತೆಯಾಗಿರುವುದು, ಹಿಂಸಾಚಾರದ ಹಾದಿಯನ್ನು ತೊರೆದಾಗ ಮತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯನ್ನು ಇಟ್ಟಾಗ ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎನ್ನುವ ಸಂದೇಶವನ್ನು  ಸಾರುತ್ತದೆ.   ನನ್ನ ಬೋಡೋ ಸ್ನೇಹಿತರನ್ನು ಮುಖ್ಯವಾಹಿನಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಬೋಡೋ ಪ್ರದೇಶಗಳ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾವು ಸದಾ ಬದ್ಧರಾಗಿದ್ದೇವೆ.

ಐದು ದಶಕಗಳಷ್ಟು ಹಳೆಯದಾದ ಬೋಡೋ ವಿವಾದವು ಇಂದು ಪೂಜ್ಯ ಬಾಪುವಿನ ಪುಣ್ಯತಿಥಿಯಂದು ಪರಿಹಾರ ಕಂಡುಕೊಂಡಿದೆ. ಬೋಡೋ ಸಂಘಟನೆಗಳು ಮತ್ತು ಸರ್ಕಾರದ ನಡುವಿನ ಒಪ್ಪಂದವು ಅಸ್ಸಾಂನ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸುತ್ತದೆ. ಹಿಂಸಾಚಾರವನ್ನು ತೊರೆಯಲು ಮತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ನನ್ನ ಬೋಡೋ ಸ್ನೇಹಿತರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ.

ನಮ್ಮ ಬೋಡೋ ಸ್ನೇಹಿತರೊಂದಿಗಿನ ಒಪ್ಪಂದವು ಅಸ್ಸಾಂ ಮತ್ತು ದೇಶದ ಇತರ ಹಿಂಸಾಚಾರ ಭಾದಿತ ಭಾಗಗಳಿಗೆ ಒಂದು ಸಂದೇಶವಾಗಿದೆ. ಹಿಂಸಾಚಾರ ಮತ್ತು ನಿರ್ಭಯವಾದ  ವಾತಾವರಣದಲ್ಲಿ ಮಾತ್ರ ರಾಷ್ಟ್ರದ ಅಭಿವೃದ್ಧಿಗೆ ವೇಗವನ್ನು ನೀಡಬಹುದು.  ನಮ್ಮ ಬೋಡೋ ಸ್ನೇಹಿತರ ಸಂಪೂರ್ಣ ಸಾಮರ್ಥ್ಯವು,  ಅಸ್ಸಾಂನ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡುತ್ತದೆ  ಎನ್ನುವುದು  ನನಗೆ ಸಂತೋಷವಾಗಿದೆ.

ಅಸ್ಸಾಂನ ಇತರ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡಲು  ನಮ್ಮ ಬೋಡೋ ಸ್ನೇಹಿತರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಇದು ಎಲ್ಲರಿಗೂ ಸಂದ ಜಯ, ಇದು ಮಾನವೀಯತೆಯ ಗೆಲುವು. ಇದು 'ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್' ಎನ್ನುವ ಮಂತ್ರದಿಂದ ಮತ್ತು 'ಏಕ್ ಭಾರತ್–ಶ್ರೇಷ್ಠ ಭಾರತ್' ಎನ್ನುವ ಮನೋಭಾವದಿಂದ ಪ್ರೇರಿತವಾಗಿದೆ.