ಭಾರತೀಯ ಸೇನೆಯು ದೃಢನಿಶ್ಚಯ, ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ: ಪ್ರಧಾನಮಂತ್ರಿ
ನಮ್ಮ ಸರ್ಕಾರವು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ: ಪ್ರಧಾನಮಂತ್ರಿ

ಸೇನಾ ದಿನವಾದ ಇಂದು ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. “ಭಾರತೀಯ ಸೇನೆಯು ದೃಢನಿಶ್ಚಯ, ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. "ನಮ್ಮ ಸರ್ಕಾರವು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ, ನಾವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ಆಧುನೀಕರಣದ ಮೇಲೆ ಕೇಂದ್ರೀಕರಿಸಿದ್ದೇವೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ‘ಎಕ್ಸ್’ ತಾಣದ ತಮ್ಮ ಸಂದೇಶದಲ್ಲಿ ಈ ರೀತಿ ಮಾಹಿತಿ ಹಂಚಿಕೊಂಡಿದ್ದಾರೆ;

"ಸೇನಾ ದಿನವಾದ ಇಂದು, ನಮ್ಮ ರಾಷ್ಟ್ರದ ಭದ್ರತೆಯ ಕಾವಲುಗಾರರಾಗಿ ನಿಂತಿರುವ ಭಾರತೀಯ ಸೇನೆಯ ಅಚಲ ಧೈರ್ಯಕ್ಕೆ ನಾವು ನಮಿಸುತ್ತೇವೆ. ಪ್ರತಿದಿನ ಕೋಟ್ಯಂತರ ಭಾರತೀಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಧೈರ್ಯಶಾಲಿಗಳು ಮಾಡಿದ ತ್ಯಾಗಗಳನ್ನು ಸಹ ನಾವು ಸ್ಮರಿಸುತ್ತೇವೆ."

 

 

"ಭಾರತೀಯ ಸೇನೆಯು ದೃಢನಿಶ್ಚಯ, ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಗಡಿಗಳನ್ನು ರಕ್ಷಿಸುವುದರ ಜೊತೆಗೆ, ನಮ್ಮ ಸೇನೆಯು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮಾನವೀಯ ಸಹಾಯವನ್ನು ನೀಡುವಲ್ಲಿ ಒಂದು ವಿಶೇಷವಾದ ಛಾಪನ್ನು ಮೂಡಿಸಿದೆ."

 

"ನಮ್ಮ ಸರ್ಕಾರ ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ, ನಾವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ಆಧುನೀಕರಣದತ್ತ ಗಮನಹರಿಸಿದ್ದೇವೆ. ಇದು ಮುಂಬರುವ ಸಮಯಗಳಲ್ಲಿಯೂ ಕೂಡಾ ಮುಂದುವರಿಯುತ್ತದೆ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From Macron To Busch, What European Leaders' Big Presence At AI Impact Summit 2026 Means For India

Media Coverage

From Macron To Busch, What European Leaders' Big Presence At AI Impact Summit 2026 Means For India
NM on the go

Nm on the go

Always be the first to hear from the PM. Get the App Now!
...
CEO of OpenAI meets Prime Minister Narendra Modi 20th February Twenty Twenty Six
February 20, 2026