ಶೇರ್
 
Comments

ನಿಮ್ಮ ಸ್ಪೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು..! ಇದು ನಿಜಕ್ಕೂ ಅನಿಸಿಕೆ ಮತ್ತು ಆಲೋಚನೆಗಳ ಉಪಯುಕ್ತ ವಿನಿಮಯವಾಗಿದೆ. ಇದು ಜಾಗತಿಕ ದಕ್ಷಿಣದ ಸಾಮಾನ್ಯ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ.

ಜಗತ್ತು ಎದುರಿಸುತ್ತಿರುವ ಹಲವಾರು ಪ್ರಮುಖ ಸಮಸ್ಯೆಗಳ ಬಗ್ಗೆ ಅಭಿವೃದ್ಧಿಶೀಲ ರಾಷ್ಟ್ರಗಳು ಒಂದೇ ರೀತಿಯ ದೃಷ್ಟಿಕೋನಗಳನ್ನು ಹೊಂದಿವೆ ಎಂಬುದು ಸ್ಪಷ್ಟವಾಗಿದೆ.

ಇದು ಕೇವಲ ಇಂದು ರಾತ್ರಿಯ ಚರ್ಚೆಗಳಲ್ಲಿ ಮಾತ್ರವಲ್ಲ, ಈ 'ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆ’ಯ ಕಳೆದ ಎರಡು ದಿನಗಳಲ್ಲಿಯೂ ಕಂಡುಬಂದಿದೆ.

ಜಗತ್ತಿನ ದಕ್ಷಿಣ ಭಾಗದಲ್ಲಿರುವ ಎಲ್ಲಾ ದೇಶಗಳಿಗೆ ಮುಖ್ಯವಾದ ಈ ಕೆಲವು ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಲು ನಾನು ಪ್ರಯತ್ನಿಸುತ್ತೇನೆ.

ನಾವೆಲ್ಲರೂ ದಕ್ಷಿಣ-ದಕ್ಷಿಣ ಸಹಕಾರದ ಪ್ರಾಮುಖ್ಯತೆಯನ್ನು ಒಪ್ಪುತ್ತೇವೆ ಮತ್ತು ಜಾಗತಿಕ ಕಾರ್ಯಸೂಚಿಯನ್ನು ಒಟ್ಟಾಗಿ ರೂಪಿಸುತ್ತೇವೆ.

ಆರೋಗ್ಯ ಕ್ಷೇತ್ರದಲ್ಲಿ, ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸಲು, ಆರೋಗ್ಯ ರಕ್ಷಣೆಗಾಗಿ ಪ್ರಾದೇಶಿಕ ತಾಣಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರೋಗ್ಯ ವೃತ್ತಿಪರರ  ಸಂಚಾರವನ್ನು ಸುಧಾರಿಸಲು ನಾವು ಒತ್ತು ನೀಡುತ್ತೇವೆ. ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಜರೂರಾಗಿ ನಿಯೋಜಿಸುವ ಸಾಮರ್ಥ್ಯದ ಬಗ್ಗೆಯೂ ನಾವು ಜಾಗೃತರಾಗಿದ್ದೇವೆ.

ಶಿಕ್ಷಣದ ಕ್ಷೇತ್ರದಲ್ಲಿ, ವೃತ್ತಿಪರ ತರಬೇತಿಯಲ್ಲಿ ನಮ್ಮ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದರಿಂದ ನಾವೆಲ್ಲರೂ ಪ್ರಯೋಜನ ಪಡೆಯಬಹುದು ಮತ್ತು ದೂರ ಶಿಕ್ಷಣವನ್ನು ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಒದಗಿಸಲು ತಂತ್ರಜ್ಞಾನದ ಬಳಕೆ ಮಾಡಬೇಕಾಗಿದೆ. 

ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ, ಡಿಜಿಟಲ್ ಸಾರ್ವಜನಿಕ ಸರಕುಗಳ ನಿಯೋಜನೆಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಹಣಕಾಸಿನ ಸೇರ್ಪಡೆಯನ್ನು ಹೆಚ್ಚಿಸಬಹುದು. ಭಾರತದ ಸ್ವಂತ ಅನುಭವವು ಇದನ್ನು ಸಾಬೀತು ಮಾಡಿ ತೋರಿಸಿದೆ.

ಸಂಪರ್ಕ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಪ್ರಾಮುಖ್ಯತೆಯನ್ನು ನಾವೆಲ್ಲರೂ ಒಪ್ಪುತ್ತೇವೆ. ನಾವು ಜಾಗತಿಕ ಪೂರೈಕೆ ಸರಳಿಗಳನ್ನು ವೈವಿಧ್ಯಗೊಳಿಸಬೇಕಾಗಿದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಈ ಮೌಲ್ಯ ಸರಪಳಿಗಳಿಗೆ ಸಂಯೋಜಿಸುವ ಮಾರ್ಗಗಳನ್ನು ಕಂಡುಹಿಡಿಯಬೇಕು.

ಅಭಿವೃದ್ಧಿಶೀಲ ರಾಷ್ಟ್ರಗಳು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನದ ಮೇಲಿನ ತಮ್ಮ ಜವಾಬ್ದಾರಿಗಳನ್ನು ಪೂರೈಸಿಲ್ಲ ಎಂದು ನಂಬುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಒಂದಾಗಿವೆ.

ಉತ್ಪಾದನೆಯಲ್ಲಿ ಹೊರಸೂಸುವಿಕೆಯನ್ನು ನಿಯಂತ್ರಿಸುವುದರ ಹೊರತಾಗಿ, ಹೆಚ್ಚು ಪರಿಸರ ಸ್ನೇಹಿ ಸುಸ್ಥಿರ ಜೀವನಶೈಲಿಯ ಕಡೆಗೆ 'ಯೂಸ್ ಅಂಡ್ ಥ್ರೋ’ (ಬಳಕೆ ಮತ್ತು ಬಿಸಾಡುವುದು) ಬಳಕೆಯಿಂದ ದೂರ ಸರಿಯುವುದು ಅಷ್ಟೇ ಮುಖ್ಯ ಎಂದು ನಾವು ಒಪ್ಪುತ್ತೇವೆ.

ಇದು ಭಾರತದ 'ಪರಿಸರಕ್ಕಾಗಿ ಜೀವನಶೈಲಿ' ಅಥವಾ ಲೈಫ್ ಉಪಕ್ರಮದ ಹಿಂದಿನ ಪ್ರಮುಖ ತತ್ವವಾಗಿದೆ - ಇದು ಜಾಗರೂಕ ಬಳಕೆ ಮತ್ತು ಆರ್ಥಿಕತೆಯ ಚಲಾವಣೆ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಗೌರವಾನ್ವಿತರೇ,

ವಿಶಾಲವಾದ ಗ್ಲೋಬಲ್ ಸೌತ್‌ನಿಂದ ಹಂಚಿಕೊಳ್ಳಲಾದ ಈ ಎಲ್ಲಾ ವಿಚಾರಗಳು, ಜಿ-20ರ ಕಾರ್ಯಸೂಚಿಯನ್ನು ರೂಪಿಸಲು ಪ್ರಯತ್ನಿಸುವುದಕ್ಕೆ ಸ್ಫೂರ್ತಿ ನೀಡುತ್ತದೆ,  ಜತೆಗೆ ನಿಮ್ಮ ಎಲ್ಲಾ ರಾಷ್ಟ್ರಗಳೊಂದಿಗೆ ನಮ್ಮ ಸ್ವಂತ ಅಭಿವೃದ್ಧಿ ಪಾಲುದಾರಿಕೆಯನ್ನು ಹೊಂದಲಾಗಿದೆ. 

ಮತ್ತೊಮ್ಮೆ, ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಇಂದಿನ ಸಮಾರೋಪ ಗೋಷ್ಠಿಯಲ್ಲಿ  ನಿಮ್ಮ ಘನ ಉಪಸ್ಥಿತಿಗಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ.
 
ಧನ್ಯವಾದಗಳು. ತುಂಬಾ ಧನ್ಯವಾದಗಳು.  

 

 

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
India's forex reserves rise $5.98 billion to $578.78 billion

Media Coverage

India's forex reserves rise $5.98 billion to $578.78 billion
...

Nm on the go

Always be the first to hear from the PM. Get the App Now!
...
PM takes part in Combined Commanders’ Conference in Bhopal, Madhya Pradesh
April 01, 2023
ಶೇರ್
 
Comments

The Prime Minister, Shri Narendra Modi participated in Combined Commanders’ Conference in Bhopal, Madhya Pradesh today.

The three-day conference of Military Commanders had the theme ‘Ready, Resurgent, Relevant’. During the Conference, deliberations were held over a varied spectrum of issues pertaining to national security, including jointness and theaterisation in the Armed Forces. Preparation of the Armed Forces and progress in defence ecosystem towards attaining ‘Aatmanirbharta’ was also reviewed.

The conference witnessed participation of commanders from the three armed forces and senior officers from the Ministry of Defence. Inclusive and informal interaction was also held with soldiers, sailors and airmen from Army, Navy and Air Force who contributed to the deliberations.

The Prime Minister tweeted;

“Earlier today in Bhopal, took part in the Combined Commanders’ Conference. We had extensive discussions on ways to augment India’s security apparatus.”

 

More details at https://pib.gov.in/PressReleseDetailm.aspx?PRID=1912891