ಘನತೆವೆತ್ತವರೇ

ಗೌರವಾನ್ವಿತರೇ

ನಿಮ್ಮ ಮೌಲ್ಯಯುತ ಚಿಂತನೆಗಳು ಮತ್ತು ಸಲಹೆಗಳಿಗೆ ಕೃತಜ್ಞನಾಗಿದ್ದೇನೆ. ನೀವೆಲ್ಲರೂ ನಮ್ಮ ಸಾಮಾನ್ಯ ಕಳವಳ ಮತ್ತು ನಿರೀಕ್ಷೆಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ನಿಮ್ಮ ಅಭಿಪ್ರಾಯಗಳಿಂದ ಜಾಗತಿಕ ದಕ್ಷಿಣ ವಲಯ ಏಕತೆಯಿಂದ ಇದೆ ಎಂಬುದು ಸ್ಪಷ್ಟವಾಗಿದೆ. ನಿಮ್ಮ ಸಲಹೆಗಳು ನಮ್ಮ ಸಮಗ್ರ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸಿದೆ. ಇಂದು ನಮ್ಮ ಚರ್ಚೆಗಳು ನಾವು ಪರಸ್ಪರ ಅರ್ಥಮಾಡಿಕೊಂಡು ಮುನ್ನಡೆಯಲು ಶಿಲಾನ್ಯಾಸ ನೆರವೇರಿಸಿದಂತಾಗಿದೆ. ನಮ್ಮ ಸಾಮಾನ್ಯ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಇದು ತಮಗೆಲ್ಲರಿಗೂ ದೊರೆತ ಅವಕಾಶವಾಗಿದೆ ಎಂಬ ವಿಶ್ವಾಸ ತಮ್ಮದಾಗಿದೆ.

ಸ್ನೇಹಿತರೇ,

ನಿಮ್ಮೆಲ್ಲರ ಅಭಿಪ್ರಾಯಗಳನ್ನು ಆಲಿಸಿದ ನಂತರ ಭಾರತದ ಪರವಾಗಿ ತಾವು ಸಮಗ್ರ “ಜಾಗತಿಕ ಅಭಿವೃದ್ಧಿ ಒಕ್ಕೂಟ” – “ಗ್ಲೋಬಲ್‌ ಡವಲಪ್ಮೆಂಟ್‌ ಕಾಂಪಾಕ್ಟ್”‌ ರಚಿಸಲು ಪ್ರಸ್ತಾಪಿಸುತ್ತಿದ್ದೇನೆ. ಈ ಒಕ್ಕೂಟ ಭಾರತದ ಅಭಿವೃದ್ಧಿ ಯಾನದ ಆಧಾರ ಸ್ತಂಭದ ಮೇಲೆ ರೂಪುಗೊಳ್ಳಲಿದೆ. ಈ ಕೂಟ ಜಾಗತಿಕ ದಕ್ಷಿಣ ವಲಯದಲ್ಲಿ ರಾಷ್ಟ್ರಗಳ ಅಭಿವೃದ್ಧಿ ಆದ್ಯತೆಗಳನ್ನು ತಾನೇ ರೂಪಿಸಿಕೊಳ್ಳಲು ಸ್ಫೂರ್ತಿಯಾಗಲಿವೆ. ಇದು ಮಾನವ ಕೇಂದ್ರಿತವಾಗಿದ್ದು, ಬಹು ಆಯಾಮದ ಮತ್ತು ಬಹು ವಲಯವಾರು ಅಭಿವೃದ್ಧಿ ವಿಧಾನವನ್ನು ಉತ್ತೇಜಿಸಲಿದೆ.

ಇದು ಅಭಿವೃದ್ಧಿ ಹಣಕಾಸು ಹೆಸರಿನಲ್ಲಿ ಅಗತ್ಯವಿರುವ ದೇಶಗಳನ್ನು ಸಾಲದ ಹೊರೆಗೆ ಒಳಪಡಿಸುವುದಿಲ್ಲ. ಇದು ಪಾಲುದಾರ ರಾಷ್ಟ್ರಗಳ ಸಮತೋಲಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಲಿದೆ.

ಸ್ನೇಹಿತರೇ,

ಈ ಅಭಿವೃದ್ಧಿ ಕೂಟದಲ್ಲಿ ಅಭಿವೃದ್ಧಿಗಾಗಿ ವ್ಯಾಪಾರವನ್ನು ಕೇಂದ್ರೀಕರಿಸಿಕೊಳ್ಳುವ ಜೊತೆಗೆ ಸುಸ್ಥಿರ ಅಭಿವೃದ್ಧಿ, ತಂತ್ರಜ್ಞಾನ ಹಂಚಿಕೆ, ನಿರ್ದಿಷ್ಟ ಯೋಜನೆ, ಅಗತ್ಯವಿರುವ ಹಣಕಾಸು ಮತ್ತು ಅನುದಾನದ ಸಾಮರ್ಥ್ಯವನ್ನು ವೃದ್ಧಿಸಲಿದೆ. ವ್ಯಾಪಾರ ಚಟುವಟಿಕೆಯನ್ನು ಉತ್ತೇಜಿಸಲು ಪುಷ್ಟಿ ನೀಡುವ ಜೊತೆಗೆ ಭಾರತ 2.5 ದಶಲಕ್ಷ ಡಾಲರ್‌ ವಿಶೇಷ ನಿಧಿಯನ್ನು ಆರಂಭಿಸಲಿದೆ. ವ್ಯಾಪಾರ ನೀತಿ ಮತ್ತು ವ್ಯಾಪಾರ ಸಂಧಾನ ಸಾಮರ್ಥ್ಯ ನಿರ್ಮಿಸಲು ತರಬೇತಿ ಒದಗಿಸಲಿದೆ. ಇದಕ್ಕಾಗಿ ಒಂದು ದಶಲಕ್ಷ ಡಾಲರ್‌ ನಿಧಿಯನ್ನು ಒದಗಿಸಲಾಗುವುದು. ಜಾಗತಿಕ ದಕ್ಷಿಣದ ದೇಶಗಳಲ್ಲಿ ಆರ್ಥಿಕ ಒತ್ತಡ ಮತ್ತು ಅಭಿವೃದ್ಧಿ ಧನಸಹಾಯಕ್ಕಾಗಿ ಎಸ್.ಡಿ.ಜಿ ಉತ್ತೇಜಿತ ನಾಯಕರ ಗುಂಪಿಗೆ ಭಾರತ ಕೊಡುಗೆ ನೀಡುತ್ತಿದೆ. ಜಾಗತಿಕ ದಕ್ಷಿಣಕ್ಕೆ ಕೈಗೆಟುಕುವ ಮತ್ತು ಪರಿಣಾಮಕಾರಿ ಜೆನೆರಿಕ್ ಔಷಧಿಗಳು ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತೇವೆ. ಔಷಧ ನಿಯಂತ್ರಕರ ತರಬೇತಿಗೆ ನಾವು ಬೆಂಬಲವನ್ನು ಸಹ ನೀಡುತ್ತೇವೆ. ಕೃಷಿ ಕ್ಷೇತ್ರದಲ್ಲಿ, ಅದರಲ್ಲೂ 'ನೈಸರ್ಗಿಕ ಕೃಷಿ'ಯಲ್ಲಿ ನಮ್ಮ ಅನುಭವಗಳು ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಸ್ನೇಹಿತರೇ,

ನೀವು ಉದ್ವಿಗ್ನ ಮತ್ತು ಸಂಘರ್ಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೀರಿ. ಇದು ನಮಗೆಲ್ಲರಿಗೂ ಗಂಭೀರ ವಿಷಯವಾಗಿದೆ. ಈ ಕಳವಳಗಳಿಗೆ ಕೇವಲ ಮತ್ತು ಎಲ್ಲವನ್ನೊಳಗೊಂಡ ಜಾಗತಿಕ ಆಡಳಿತ ಪರಿಹಾರವಾಗಿದ್ದು, ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಜವಾಬ್ದಾರಿಗಳು ಮತ್ತು ಬದ್ಧತೆಗಳನ್ನು ಪೂರೈಸುವ ಮೂಲಕ ಜಾಗತಿಕ ದಕ್ಷಿಣಕ್ಕೆ ಆದ್ಯತೆ ನೀಡುವ ಅಂತಹ ಸಂಸ್ಥೆಗಳು, ಜಾಗತಿಕ ಉತ್ತರ ಮತ್ತು ಜಾಗತಿಕ ದಕ್ಷಿಣದ ನಡುವಿನ ಅಂತರವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮುಂದಿನ ತಿಂಗಳು ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಭವಿಷ್ಯದ ಶೃಂಗಸಭೆ ಈ ಎಲ್ಲದಕ್ಕೂ ಒಂದು ಪ್ರಮುಖ ಮೈಲಿಗಲ್ಲಾಗಬಹುದು.

ಘನತೆವೆತ್ತವರೇ,

ಗೌರವಾನ್ವಿತರೇ,

ನಿಮ್ಮ ಅಮೂಲ್ಯ ಚಿಂತನೆಗಳು ಮತ್ತು ಉಪಸ್ಥಿತಿಗೆ ನಾನು ಮತ್ತೊಮ್ಮೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಜಾಗತಿಕ ದಕ್ಷಿಣದ ಪ್ರಗತಿಗಾಗಿ ನಾವು ನಮ್ಮ ಧ್ವನಿ ಎತ್ತುವುದನ್ನು ಮತ್ತು ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ.

ನಮ್ಮ ತಂಡಗಳು ಇಂದು ದಿನವಿಡೀ ಎಲ್ಲಾ ವಿಷಯಗಳನ್ನು ಆಳವಾಗಿ ಚರ್ಚಿಸುತ್ತವೆ, ಮತ್ತು ನಿಮ್ಮೆಲ್ಲರ ಬೆಂಬಲದೊಂದಿಗೆ ಮುಂಬರುವ ದಿನಗಳಲ್ಲಿ ನಾವು ಈ ವೇದಿಕೆಯನ್ನು ಮುಂದೆ ಕೊಂಡೊಯ್ಯುವುದನ್ನು ಮುಂದುವರಿಸುತ್ತೇವೆ.

ತುಂಬ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಡಿಸೆಂಬರ್ 2025
December 20, 2025

Empowering Roots, Elevating Horizons: PM Modi's Leadership in Diplomacy, Economy, and Ecology