ವಿಶ್ವ ಪರಿಸರ ದಿನದ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಕ್ ಪೆಡ್ ಮಾ ಕೆ ನಾಮ್ ಉಪಕ್ರಮವನ್ನು ಬಲಪಡಿಸುವ ಸಲುವಾಗಿ ಸಸಿ ನೆಟ್ಟಿದ್ದಾರೆ.

 

ಅರಾವಳಿ ಹಸಿರು ಗೋಡೆ ಯೋಜನೆಯಡಿಯಲ್ಲಿ ಅರಾವಳಿ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸುವ ಮಹತ್ವವನ್ನು ಶ್ರೀ ಮೋದಿ ಅವರು ಎತ್ತಿ ತೋರಿಸಿದ್ದಾರೆ.

ಭೂಗ್ರಹದ ಅತ್ಯಂತ ಹಳೆಯ ಶ್ರೇಣಿಗಳಲ್ಲಿ ಒಂದಾದ ಅರಾವಳಿ ವಲಯವು ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದಿಲ್ಲಿಯನ್ನು ವ್ಯಾಪಿಸಿದೆ ಎಂಬುದರತ್ತ  ಪ್ರಧಾನಿ ಗಮನ ಸೆಳೆದರು.

ಈ ಪ್ರದೇಶವು ಹಲವಾರು ಪರಿಸರ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಅವುಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ಅರಾವಳಿ ಶ್ರೇಣಿ ಮತ್ತು ಅದರಾಚೆಗೆ, ಸಾಂಪ್ರದಾಯಿಕ ಗಿಡ ನೆಡುವ ವಿಧಾನಗಳ ಜೊತೆಗೆ, ವಿಶೇಷವಾಗಿ ಸ್ಥಳಾವಕಾಶದ ಮಿತಿಗಳಿರುವ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಾವು ಹೊಸ ತಂತ್ರಗಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಶ್ರೀ ಮೋದಿ ಹೇಳಿದರು. ಮೇರಿ ಲೈಫ್ ಪೋರ್ಟಲ್‌ನಲ್ಲಿ ತೋಟಗಾರಿಕೆ/ಪ್ಲಾಂಟೇಶನ್ ಚಟುವಟಿಕೆಗಳನ್ನು ಜಿಯೋ-ಟ್ಯಾಗ್ ಮಾಡಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದೂ ಶ್ರೀ ಮೋದಿ ಹೇಳಿದರು.

 

ದೇಶದ ಯುವಜನರು ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಭೂಗ್ರಹದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಕೊಡುಗೆ ನೀಡಬೇಕೆಂದು ಪ್ರಧಾನಿ ಆಗ್ರಹಿಸಿದರು.

 

ಈ ಬಗ್ಗೆ X ಥ್ರೆಡ್‌ನಲ್ಲಿ ಪ್ರಧಾನಿ ಹೀಗೆ ಹೇಳಿದ್ದಾರೆ;

"ಇಂದು, #ವಿಶ್ವ ಪರಿಸರ ದಿನದಂದು(#WorldEnvironmentDay), ನಾವು ವಿಶೇಷ ಗಿಡ ನೆಡುವ ಅಭಿಯಾನದೊಂದಿಗೆ #EkPedMaaKeNaam ಉಪಕ್ರಮವನ್ನು ಬಲಪಡಿಸಿದ್ದೇವೆ. ದಿಲ್ಲಿಯ ಭಗವಾನ್ ಮಹಾವೀರ್ ವನಸ್ಥಲಿ ಉದ್ಯಾನವನದಲ್ಲಿ ನಾನು ಸಸಿ ನೆಟ್ಟಿದ್ದೇನೆ. ಇದು ಅರಾವಳಿ ಶ್ರೇಣಿಯನ್ನು - ಅರಾವಳಿ ಹಸಿರು ಗೋಡೆ ಯೋಜನೆಯಲ್ಲಿ ಮರು ಅರಣ್ಯೀಕರಣಗೊಳಿಸುವ ನಮ್ಮ ಪ್ರಯತ್ನದ ಒಂದು ಭಾಗವಾಗಿದೆ."

"ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದಿಲ್ಲಿಯನ್ನು ಒಳಗೊಂಡ ಅರಾವಳಿ ಶ್ರೇಣಿಯು ನಮ್ಮ ಭೂಗ್ರಹದ ಅತ್ಯಂತ ಹಳೆಯ ಶ್ರೇಣಿಯಾಗಿದೆ ಎಂದು ವ್ಯಾಪಕವಾಗಿ ತಿಳಿಯಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಶ್ರೇಣಿಗೆ ಸಂಬಂಧಿಸಿದ ಹಲವಾರು ಪರಿಸರ ಸವಾಲುಗಳು ಮುನ್ನೆಲೆಗೆ ಬಂದಿವೆ, ಇವುಗಳನ್ನು ತಗ್ಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಶ್ರೇಣಿಯೊಂದಿಗೆ ಸಂಪರ್ಕ ಹೊಂದಿದ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದರತ್ತ  ನಾವು  ಗಮನ ಹರಿಸಿದ್ದೇವೆ. ನಾವು ಆಯಾ ಸ್ಥಳೀಯ ಆಡಳಿತಗಳೊಂದಿಗೆ ಕೆಲಸ ಮಾಡಲಿದ್ದೇವೆ ಮತ್ತು ನೀರಿನ ವ್ಯವಸ್ಥೆಗಳನ್ನು ಸುಧಾರಿಸುವುದು, ಧೂಳಿನ ಬಿರುಗಾಳಿಗಳನ್ನು ನಿಗ್ರಹಿಸುವುದು, ಥಾರ್ ಮರುಭೂಮಿಯು ಪೂರ್ವಕ್ಕೆ ವಿಸ್ತರಣೆಗೊಳ್ಳುವುದನ್ನು ನಿಲ್ಲಿಸುವುದು ಸೇರಿದಂತೆ  ಇನ್ನೂ ಹೆಚ್ಚಿನ ವಿಷಯಗಳಿಗೆ ಒತ್ತು ನೀಡಲಿದ್ದೇವೆ."

"ಅರಾವಳಿ ಶ್ರೇಣಿ ಮತ್ತು ಅದರಾಚೆಗೆ, ಸಾಂಪ್ರದಾಯಿಕ ಗಿಡ ನೆಡುವ ವಿಧಾನಗಳ ಜೊತೆಗೆ, ವಿಶೇಷವಾಗಿ ಸ್ಥಳಾವಕಾಶದ ಮಿತಿಯಿರುವ ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ನಾವು ಹೊಸ ತಂತ್ರಗಳನ್ನು ಪ್ರೋತ್ಸಾಹಿಸುತ್ತೇವೆ. ಮೇರಿ ಲೈಫ್ ಪೋರ್ಟಲ್‌ನಲ್ಲಿ ತೋಟಗಾರಿಕೆ/ಪ್ಲಾಂಟೇಶನ್ ಚಟುವಟಿಕೆಗಳನ್ನು ಜಿಯೋ-ಟ್ಯಾಗ್ ಮಾಡಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ. ನಮ್ಮ ದೇಶದ ಯುವಜನರು ಈ ಆಂದೋಲನದಲ್ಲಿ ಭಾಗವಹಿಸಲು ಮತ್ತು ನಮ್ಮ ಗ್ರಹದ ಹಸಿರು ಹೊದಿಕೆಯನ್ನು ಹೆಚ್ಚಿಸಲು ನಾನು ಕರೆ ನೀಡುತ್ತೇನೆ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's 28 big listed realty firms clock ₹1.95 trn pre-sales in FY26

Media Coverage

India's 28 big listed realty firms clock ₹1.95 trn pre-sales in FY26
NM on the go

Nm on the go

Always be the first to hear from the PM. Get the App Now!
...
Prime Minister condoles the loss of lives in mishap in Kolkata
June 25, 2026
PM announces ex-gratia from PMNRF

The Prime Minister, Shri Narendra Modi has condoled the loss of lives due to a mishap in Kolkata.

Shri Modi assured that the state government is working round the clock to ensure that those affected receive all possible assistance.

The Prime Minister announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

Shri Modi posted on X;

The mishap in Kolkata yesterday is saddening. An ex-gratia of Rs. 2 lakh each will be given from PMNRF to the next of kin of those who lost their lives in the mishap. The injured would be given Rs. 50,000. The state government is working round the clock to ensure that those affected receive all possible assistance: PM @narendramodi