ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತಿಯಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಸ್ಫೂರ್ತಿದಾಯಕ ಎಂದು ಬಣ್ಣಿಸಿರುವ ಪ್ರಧಾನಿ, ಆಜಾದ್ ಅವರನ್ನು ಕ್ರಾಂತಿಕಾರಿ ಚಿಂತಕ ಮತ್ತು ಬುದ್ದಿಜೀವಿ ಎಂದು ಕರೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ಕ್ರಾಂತಿಕಾರಿ ಚಿಂತಕ ಮತ್ತು ಬುದ್ಧಿಜೀವಿಯಾದ ಆಜಾದ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರ ಸ್ಫೂರ್ತಿದಾಯಕವಾಗಿದೆ. ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಉತ್ಸುಕರಾಗಿದ್ದರು ಮತ್ತು ಸಮಾಜದಲ್ಲಿ ಮತ್ತಷ್ಟು ಸಹೋದರತ್ವವನ್ನು ಬೆಳೆಸಲು ಕೆಲಸ ಮಾಡಿದರು.” ಎಂದಿದ್ದಾರೆ.
Tributes to Maulana Abul Kalam Azad on his Jayanti. A pathbreaking thinker and intellectual, his role in the freedom struggle is inspiring. He was passionate about the education sector and worked to further brotherhood in society.
— Narendra Modi (@narendramodi) November 11, 2021


