ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಎರಡು ದಿನಗಳ ಭೇಟಿಯ ಎರಡನೇ ದಿನ ತುಂಗಿಪುರದಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಇದರೊಂದಿಗೆ ಬಂಗಬಂಧು ಸಮಾಧಿ ಸ್ಥಳದಲ್ಲಿ ಗೌರವನಮನ ಸಲ್ಲಿಸಿದ ಪ್ರಥಮ ವಿದೇಶೀ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರೆನಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಐತಿಹಾಸಿಕ ಕ್ಷಣದ ನೆನಪಿಗಾಗಿ ಬಕುಲ ಗಿಡವನ್ನು ನೆಟ್ಟರು. ಅವರ ಸಹವರ್ತಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಅವರ ಸೋದರಿ ಶೇಖ್ ರೆಹನಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಪ್ರಧಾನಮಂತ್ರಿ ಮೋದಿ ಅವರು, ಸಮಾಧಿ ಸ್ಥಳದಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಮಾಡಿದರು. "ಬಂಗಬಂಧು ಅವರ ಜೀವನವು ಬಾಂಗ್ಲಾದೇಶದ ಜನರ ಅಸ್ಮಿತೆ ಮತ್ತು ಅವರ ಅಂತರ್ಗತ ಸಂಸ್ಕೃತಿಯ ರಕ್ಷಣೆಗಾಗಿ, ಬಾಂಗ್ಲಾದೇಶದ ಜನರ ಸ್ವಾತಂತ್ರ್ಯದ ಉಳಿವಿನ ಹೋರಾಟವನ್ನು ನಿರೂಪಿಸುತ್ತದೆ.” ಎಂದು ಬರೆದರು.

 

 

 

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Over 44 crore vaccine doses administered in India so far: Health ministry

Media Coverage

Over 44 crore vaccine doses administered in India so far: Health ministry
...

Nm on the go

Always be the first to hear from the PM. Get the App Now!
...
ಸಿ.ಆರ್.ಪಿ.ಎಫ್. ಯೋಧರಿಗೆ ಸ್ಥಾಪನಾ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ
July 27, 2021
ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿ.ಆರ್.ಪಿ.ಎಫ್. ಯೋಧರಿಗೆ ಸ್ಥಾಪನಾ ದಿನದಂದು ಶುಭ ಕೋರಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಎಲ್ಲ ಧೈರ್ಯಶಾಲಿ @crpfindia ಸಿಬ್ಬಂದಿಗೆ ಮತ್ತು ಅವರ ಕುಟುಂಬದವರಿಗೆ ಪಡೆಯ ಸ್ಥಾಪನಾ ದಿನದ ಶುಭಾಶಯಗಳು. ಸಿ.ಆರ್.ಪಿ.ಎಫ್. ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರಾಗಿದೆ. ಅದು ಭಾರತದ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರಾಷ್ಟ್ರೀಯ ಏಕತೆ ಹೆಚ್ಚುವುದರಲ್ಲಿ  ಅವರ ಕೊಡುಗೆ ಶ್ಲಾಘನಾರ್ಹವಾಗಿದೆ." ಎಂದು ತಿಳಿಸಿದ್ದಾರೆ.