ಭಾರತ ಆಯೋಜಿಸಿದ್ದ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ, ಕಝಾಕಿಸ್ತಾನ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಓಲ್ಜಾಸ್ ಬೆಕ್ಟೆನೋವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭೇಟಿಯಾದರು.
ಸಾಮಾಜಿಕ ಒಳಿತಿಗಾಗಿ ಮತ್ತು ಆರ್ಥಿಕ ಬೆಳವಣಿಗೆಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಎರಡೂ ರಾಷ್ಟ್ರಗಳ ಹಂಚಿಕೆಯ ಬದ್ಧತೆಯನ್ನು ಉಲ್ಲೇಖಿಸುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಬೆಕ್ಟೆನೋವ್ ಅವರ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಶ್ಲಾಘಿಸಿದರು. ರಾಜಕೀಯ, ವ್ಯಾಪಾರ, ರಕ್ಷಣೆ ಮತ್ತು ಭದ್ರತೆ, ಸಂಪರ್ಕ, ಇಂಧನ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು.
ಎಕ್ಸ್‌ನ ಪ್ರತ್ಯೇಕ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ:
"ಇಂದು ಮುಂಜಾನೆ, ನಾನು ಪ್ರಧಾನಮಂತ್ರಿ ಓಲ್ಜಾಸ್ ಬೆಕ್ಟೆನೋವ್ ಅವರನ್ನು ಭೇಟಿಯಾದೆ. ಅವರ ಭೇಟಿಯು ಭಾರತ ಮತ್ತು ಕಝಾಕಿಸ್ತಾನ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವ್ಯಾಪಾರ, ಇಂಧನ, ನಿರ್ಣಾಯಕ ಖನಿಜಗಳು, ಅಪರೂಪದ ಭೂಮಿಯ ಅಂಶಗಳು, ರಕ್ಷಣೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಸಂಪರ್ಕ ಮತ್ತು ಬಾಹ್ಯಾಕಾಶದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೆಚ್ಚಿನ ಅವಕಾಶವಿದೆ. ನಮ್ಮ ಸ್ನೇಹವನ್ನು ಹೊಸ ಆಯಾಮಕ್ಕೆ ಕೊಂಡೊಯ್ಯಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.
@PrimeMinisterEn”
Prime Minister Olzhas Bektenov and I met earlier today. His visit will further deepen India-Kazakhstan Strategic Partnership. There is immense scope for bilateral cooperation in trade, energy, critical minerals, rare earths, defence, connectivity and space. We will keep working… pic.twitter.com/jbB8ESBh4x
— Narendra Modi (@narendramodi) February 18, 2026
“Бүгін ертерек Премьер-министр Олжас Бектенов мырзамен кездестім. Оның сапары Үндістан мен Қазақстан арасындағы стратегиялық серіктестікті одан әрі тереңдете түседі. Сауда, энергетика, маңызды минералдар, сирек жер элементтері, қорғаныс, көлік-логистика байланысы және ғарыш салаларында екіжақты ынтымақтастықты дамытуға зор мүмкіндік бар. Достығымызды жаңа белестерге көтеру үшін бірлесіп жұмыс істеуді жалғастырамыз.
@PrimeMinisterEn”
Бүгін ертерек Премьер-министр Олжас Бектенов мырзамен кездестім. Оның сапары Үндістан мен Қазақстан арасындағы стратегиялық серіктестікті одан әрі тереңдете түседі. Сауда, энергетика, маңызды минералдар, сирек жер элементтері, қорғаныс, көлік-логистика байланысы және ғарыш… pic.twitter.com/AIc4nG7JVU
— Narendra Modi (@narendramodi) February 18, 2026


