ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರ್ಕಳದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್‌ನ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಸಂವಾದದ ವೇಳೆ, ಸಾಮಾಜಿಕ ಸೇವೆ, ಶಿಕ್ಷಣ, ಆಧ್ಯಾತ್ಮಿಕತೆ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಸ್ವಾಮೀಜಿಯವರು ಕೈಗೊಂಡಿರುವ ಸಮರ್ಪಿತ ಕಾರ್ಯಗಳನ್ನು ಪ್ರಧಾನಮಂತ್ರಿ ಶ್ರೀ ಮೋದಿಯವರು ಶ್ಲಾಘಿಸಿದರು. ಅವರ ಪ್ರಯತ್ನಗಳು ಭಾರತದ ಸಾಮಾಜಿಕ ರಚನೆಗೆ ದೀರ್ಘಕಾಲಿಕ ಕೊಡುಗೆ ನೀಡಿವೆ ಎಂದು ಹೇಳಿದರು.

ಶ್ರೀ ನಾರಾಯಣ ಗುರುಗಳ ಶಾಶ್ವತ ಆದರ್ಶಗಳಲ್ಲಿ ಬೇರುಬಿಟ್ಟಿರುವ ಈ ಟ್ರಸ್ಟ್‌ನ ಮುಂದಾಳತ್ವಗಳು ಸಮಾಜದಾದ್ಯಂತ ಸಮಾನತೆ, ಸೌಹಾರ್ದತೆ ಮತ್ತು ಗೌರವವನ್ನು ಮುಂದುವರಿಸಿ ಉತ್ತೇಜಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ;  

''ವಾರ್ಕಳದ ಶಿವಗಿರಿ ಮಠದಲ್ಲಿರುವ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್‌ಗೆ ಸಂಬಂಧಿಸಿದ ಸ್ವಾಮೀಜಿಯವರನ್ನು ಭೇಟಿ ಮಾಡಿದೆನು. ಸಾಮಾಜಿಕ ಸೇವೆ, ಶಿಕ್ಷಣ, ಆಧ್ಯಾತ್ಮಿಕತೆ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಅವರ ಸಮರ್ಪಿತ ಕಾರ್ಯಗಳು ನಮ್ಮ ಸಾಮಾಜಿಕ ರಚನೆ ಮೇಲೆ ದೀರ್ಘಕಾಲಿಕ ಕೊಡುಗೆ ನೀಡಿವೆ.

ಶ್ರೀ ನಾರಾಯಣ ಗುರುಗಳ ಶಾಶ್ವತ ಆದರ್ಶಗಳಲ್ಲಿ ಬೇರುಬಿಟ್ಟಿರುವ ಅವರ ಪ್ರಯತ್ನಗಳು ಸಮಾಜದಾದ್ಯಂತ ಸಮಾನತೆ, ಸೌಹಾರ್ದತೆ ಮತ್ತು ಗೌರವವನ್ನು ಮುಂದುವರಿಸಿ ಉತ್ತೇಜಿಸುತ್ತಿವೆ.”

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ISRO Successfully Tests CE20 Cryogenic Engine At Uprated 220 KN Thrust For C32 Stage Of Upcoming LVM3 Mission

Media Coverage

ISRO Successfully Tests CE20 Cryogenic Engine At Uprated 220 KN Thrust For C32 Stage Of Upcoming LVM3 Mission
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಸೆಪ್ಟೆಂಬರ್ 2026
September 11, 2026

Seva Pakhwada to Superpower Status: Why Citizens Are Hailing PM Modi’s Relentless Push