ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನವು ಮೂರು ಗಿನ್ನೆಸ್ ವಿಶ್ವ ದಾಖಲೆ™ ಪ್ರಶಸ್ತಿಗಳನ್ನು ಸೃಷ್ಟಿಸಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಈ ಸಾಧನೆಯ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, ಇಂತಹ ಉಪಕ್ರಮಗಳು ಬಹಳ ಶ್ಲಾಘನೀಯ ಎಂದು ಹೇಳಿದ್ದಾರೆ. ಈ ರೀತಿಯ ಸಾಮೂಹಿಕ ಚಳುವಳಿಗಳು ಮಹಿಳಾ ಸಬಲೀಕರಣ ಪ್ರಯತ್ನಕ್ಕೆ ಮತ್ತಷ್ಟು ಪ್ರಚೋದನೆಯನ್ನು ನೀಡಿ, ನಾರಿ ಶಕ್ತಿಯ ಜೀವನದ ಮೇಲೆ ಪರಿವರ್ತನಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;
“ಇದು ತುಂಬಾ ಶ್ಲಾಘನೀಯ! ಇಂತಹ ಸಾಮೂಹಿಕ ಚಳುವಳಿಗಳು ನಮ್ಮ ಮಹಿಳಾ ಸಬಲೀಕರಣ ಪ್ರಯತ್ನಗಳಿಗೆ ಪ್ರಚೋದನೆಯನ್ನು ನೀಡಿ ನಮ್ಮ ನಾರಿ ಶಕ್ತಿಯ ಜೀವನದ ಮೇಲೆ ಪರಿವರ್ತನಾತ್ಮಕ ಪರಿಣಾಮ ಬೀರುತ್ತವೆ”.
This is very commendable! Such mass movements add impetus to our women empowerment efforts and have a transformative impact on the lives of our Nari Shakti. https://t.co/Hb2rSSOIXv
— Narendra Modi (@narendramodi) November 1, 2025


