ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2026ರ ಮೇ 17ರಂದು ಸ್ವೀಡನ್‌ನ ರಾಣಿ ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ ಮತ್ತು ಸ್ವೀಡನ್ ಪ್ರಧಾನಮಂತ್ರಿ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಅವರೊಂದಿಗೆ  ಆಯ್ದ ಸ್ವೀಡಿಷ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಭಾರತ ಮತ್ತು ಸ್ವೀಡನ್ ಪ್ರಜಾಪ್ರಭುತ್ವ, ಪಾರದರ್ಶಕತೆ, ನಾವೀನ್ಯತೆ ಮತ್ತು ಸುಸ್ಥಿರತೆಯ ಹಂಚಿಕೆಯ ಮೌಲ್ಯಗಳಿಂದ ಬಲವಾದ ಸಂಬಂಧ ಹೊಂದಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಇದು ಮಹತ್ವಾಕಾಂಕ್ಷೆಯ ಮತ್ತು ಮುನ್ನೋಟದ ಆರ್ಥಿಕ ಪಾಲುದಾರಿಕೆಗೆ ಭದ್ರ ಬುನಾದಿಯನ್ನು ಹಾಕುತ್ತದೆ ಎಂದ ಅವರು,ಇಂದು ಭಾರತ-ಸ್ವೀಡನ್ ಪಾಲುದಾರಿಕೆ ಕೇವಲ ಆರ್ಥಿಕ ಸಂಬಂಧವಾಗಿಲ್ಲ, ಆದರೆ ಕಲ್ಪನೆಗಳು, ತಂತ್ರಜ್ಞಾನ, ನಾವೀನ್ಯತೆ ಮತ್ತು ಸಹ-ಸೃಷ್ಟಿಯ ಪಾಲುದಾರಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಬೆಳವಣಿಗೆಗೆ ಸ್ವೀಡಿಷ್ ಕಂಪನಿಗಳ ದೀರ್ಘಕಾಲೀನ ಕೊಡುಗೆಯನ್ನು ಅವರು ಸ್ವಾಗತಿಸಿದರು ಮತ್ತು ಸಂಶೋಧನೆ, ನಾವೀನ್ಯತೆ, ಹಸಿರು ಪರಿವರ್ತನೆ ಮತ್ತು ಉತ್ಪಾದನಾ ವಲಯದಲ್ಲಿ ಗಾಢವಾದ ಸಹಯೋಗಕ್ಕೆ ಉತ್ತೇಜನ ನೀಡಿದರು.

ಸುಧಾರಣೆ, ಬಲವಾದ ದೇಶೀಯ ಬೇಡಿಕೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ,ಉತ್ಪಾದನಾ ವಿಸ್ತರಣೆ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯ ಅಭಿವೃದ್ಧಿಯಿಂದ ನಡೆಸಲ್ಪಡುವ ಭಾರತದ ತ್ವರಿತ ಆರ್ಥಿಕ ಪರಿವರ್ತನೆಯನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಮೇಕ್ ಇನ್ ಇಂಡಿಯಾ, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಮತ್ತು ಶುದ್ಧ ಇಂಧನ, ರಕ್ಷಣೆ, ಸೆಮಿಕಂಡಕ್ಡರ್‌ ಮತ್ತು ಮುಂದುವರಿದ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳನ್ನು ವಿಸ್ತರಿಸುವಂತಹ ಉಪಕ್ರಮಗಳ ಅಡಿಯಲ್ಲಿ ಭಾರತದಲ್ಲಿ ತಮ್ಮ ಇರುವಿಕೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ  ಸ್ವೀಡಿಷ್ ಕಂಪನಿಗಳನ್ನು ಆಹ್ವಾನಿಸಿದರು.

ಚರ್ಚೆಯಲ್ಲಿ ಪ್ರಮುಖವಾಗಿ ಸ್ಥಿತಿಸ್ಥಾಪಕ ಪೂರೈಕೆ ಸರಣಿಗಳು, ಹಸಿರು ಪರಿವರ್ತನೆ, ಸುಸ್ಥಿರ ಚಲನಶೀಲತೆ, ಜೀವ ವಿಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಬಲಪಡಿಸುವತ್ತ ಗಮನಹರಿಸಲಾಯಿತು. 21ನೇ ಶತಮಾನಕ್ಕೆ ಪರಿಹಾರಗಳನ್ನು ಸಹ-ಸೃಷ್ಟಿಸಲು ಸ್ವೀಡನ್‌ನ ನಾವೀನ್ಯತೆ ಮತ್ತು ಸುಸ್ಥಿರತೆಯ ಸಾಮರ್ಥ್ಯಗಳನ್ನು ಭಾರತದ ವ್ಯಾಪ್ತಿ, ಅಗಾಧ ಪ್ರತಿಭೆ ಮತ್ತು ಬೆಳವಣಿಗೆಯ ಆವೇಗದೊಂದಿಗೆ ಸಂಯೋಜಿಸುವ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From VB-G RAM G to Delhi EV policy: Key changes taking effect from July 1

Media Coverage

From VB-G RAM G to Delhi EV policy: Key changes taking effect from July 1
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಜುಲೈ 2026
July 01, 2026

PM Modi's Vision: Driving Digital Empowerment, Inclusive Development and India's Global Rise