ಕೆನಡಾದ ಕನನಾಸ್ಕಿಸ್‌ನಲ್ಲಿ 2025ರ ಜೂನ್ 17 ರಂದು ನಡೆದ 51ನೇ ಜಿ 7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್ ಕಿಂಗ್‌ಡಂನ ಪ್ರಧಾನಮಂತ್ರಿ ಮಾನ್ಯ ಶ್ರೀ ಕೀರ್ ಸ್ಟಾರ್ಮರ್ ಅವರೊಂದಿಗೆ ಸಂವಾದ ನಡೆಸಿದರು. ಭಾರತ ಮತ್ತು ಯುಕೆ ನಡುವಿನ ಬಾಂಧವ್ಯ ಬಲಗೊಳ್ಳುತ್ತಿವೆ ಎಂಬುದನ್ನು ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ವಾಸ್ತವಿಕತೆಯಯು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರೊಂದಿಗೆ ಅತ್ಯುತ್ತಮ ಸಂಭಾಷಣೆ! ಭಾರತ ಮತ್ತು ಯುಕೆ ಸಂಬಂಧಗಳು ಬಲಗೊಳ್ಳುತ್ತಿದ್ದು ವ್ಯಾಪಾರ ಮತ್ತು ವಾಣಿಜ್ಯದಂತಹ ಕ್ಷೇತ್ರಗಳಲ್ಲಿ ವಾಸ್ತವ ನೆಲೆಯು ಇದನ್ನು ಪ್ರತಿಬಿಂಬಿಸುತ್ತದೆ. ಈ ಅದ್ಭುತ ಸ್ನೇಹಕ್ಕೆ ಇನ್ನಷ್ಟು ಆವೇಗವನ್ನು ನೀಡಲು ನಾವು ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ. @Keir_Starmer"
An exceptional conversation with Prime Minister Keir Starmer! India and UK ties are getting stronger, reflecting in the ground we’ve covered in areas like trade and commerce. We will keep working together to add even more momentum to this wonderful friendship.@Keir_Starmer pic.twitter.com/rXTSWjn5KE
— Narendra Modi (@narendramodi) June 17, 2025


