ಶೇರ್
 
Comments
“ನಿಮ್ಮಂತಹ ಆಟಗಾರರ ಉತ್ಸಾಹ ಹೆಚ್ಚಾಗಿದೆ: ತರಬೇತಿಯೂ ಉತ್ತಮವಾಗಿದೆ ಮತ್ತು ಕ್ರೀಡೆಯ ಬಗ್ಗೆ ದೇಶದ ವಾತಾವರಣವೂ ಅದ್ಭುತವಾಗಿದೆ”
“ತ್ರಿವರ್ಣ ಧ್ವಜ ಎತ್ತದಲ್ಲಿ ಹಾರಾಡುವುದನ್ನು ನೋಡುವುದು, ರಾಷ್ಟ್ರಗೀತೆ ನುಡಿಸುವುದನ್ನು ಕೇಳುವುದು ನಮ್ಮ ಗುರಿ”
“ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಅಥ್ಲೀಟ್ ಗಳು ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದಾರೆ”
“ನೀವು ಎಲ್ಲರೂ ಉತ್ತಮವಾಗಿ ತರಬೇತಿ ಪಡೆದಿದ್ದೀರಿ, ಜಗತ್ತಿನ ಉತ್ತಮ ಸೌಲಭ್ಯಗಳ ಮೂಲಕ ತರಬೇತಿ ಪಡೆದುಕೊಂಡಿದ್ದೀರಿ. ಆ ತರಬೇತಿ ಮತ್ತು ನಿಮ್ಮ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳುವ ಸಮಯ ಇದಾಗಿದೆ”
“ ನೀವು ಈವರೆಗೆ ಸಾಧಿಸಿರುವುದು ಸ್ಫೂರ್ತಿದಾಯಕ. ಆದರೆ ಈಗ ನೀವು ಹೊಸ ದಾಖಲೆಗಳತ್ತ ಹೊಸದಾಗಿ ನೋಡಬೇಕು”

ಕಾಮನ್ ವೆಲ್ತ್ ಕ್ರೀಡಾಕೂಟ [ಸಿ.ಡಬ್ಲ್ಯೂ.ಜಿ] 2022 ದಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡದೊಂದಿಗೆ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದರು. ಸಂವಾದದಲ್ಲಿ ಅಥ್ಲೀಟ್ ಗಳಷ್ಟೇ ಅಲ್ಲದೇ ತರಬೇತುದಾರರು ಸಹ ಪಾಲ್ಗೊಂಡಿದ್ದರು. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಅವರು ಪಾಲ್ಗೊಂಡಿದ್ದರು.  

ಅಂತರರಾಷ್ಟ್ರೀಯ ಚೆಸ್ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಕಾಮನ್ ವೆಲ್ತ್ ಕ್ರೀಡಾಕೂಟದ ಭಾರತ ತಂಡಕ್ಕೆ ಶುಭ ಕೋರಿದರು. ತಮಿಳುನಾಡಿನಲ್ಲಿ ಜುಲೈ 28 ರಿಂದ ಚೆಸ್ ಒಲಿಂಪಿಯಾಡ್ ಕೂಡ ನಡೆಯುತ್ತಿದೆ. ತಮ್ಮ ಹಿಂದಿನ ಕ್ರೀಡಾಪಟುಗಳಂತೆ ಭಾರತವನ್ನು ಹೆಮ್ಮೆಪಡುವಂತೆ ನೀವೆಲ್ಲಾ ಪ್ರಯತ್ನಿಸಬೇಕು ಎಂದು ಹಾರೈಸಿದರು. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಥ್ಲೀಟ್ ಗಳು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಇವರೆಲ್ಲರೂ ಮಹತ್ತರವಾದ ಪ್ರಭಾವ ಬೀರಲಿ ಎಂದು ಶುಭ ಕೋರಿದರು. “ನಿವೆಲ್ಲರೂ ಹೃದಯದಿಂದ ಆಟ ಆಡಿ, ಕಠಿಣವಾಗಿ ಸ್ಪರ್ಧೆ ನೀಡಿ, ಎಲ್ಲಾ ಶಕ್ತಿಯೊಂದಿಗೆ ಮುನ್ನುಗ್ಗಿ ಮತ್ತು ಯಾವುದೇ ಒತ್ತಡವಿಲ್ಲದೇ ಭಾಗವಹಿಸಿ” ಎಂದು ಸಲಹೆ ಮಾಡಿದರು.

ಸಂವಾದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದ ಅಥ್ಲೀಟ್ ಶ್ರೀ ಅವಿನಾಶ್ ಸಬ್ಲೆ ಅವರ ಬಗ್ಗೆ ವಿಚಾರಿಸಿದರು, ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಅವರು, ಮಹಾರಾಷ್ಟ್ರದವರು. ಸಿಯಾಚಿನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ, 4 ವರ್ಷಗಳ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಶ್ರೀ ಅವಿನಾಶ‍್ ಸಬ್ಲೆ ಪ್ರಧಾನಮಂತ್ರಿ ಅವರಿಗೆ ಹೇಳಿದರು. ಭಾರತೀಯ ಸೇನೆಯಿಂದ ಪಡೆದ ಶಿಸ್ತು ಮತ್ತು ತರಬೇತಿ ಯಾವ ಕ್ಷೇತ್ರಕ್ಕೆ ಹೋದರೂ ಪ್ರಜ್ವಲಿಸಲು ಸಹಕಾರಿಯಾಗುತ್ತಿದೆ ಎಂದರು. ಸಿಯಾಚಿನ್ ನಲ್ಲಿ ಕೆಲಸ ಮಾಡುವ ನೀವು ಸ್ಟೀಪಲ್ ಚೇಸ್ ವಲಯವನ್ನು ಆಯ್ಕೆ ಮಾಡಿಕೊಂಡಿರುವ ಕಾರಣವನ್ನು ಪ್ರಧಾನಮಂತ್ರಿ ಅವರು ಕೇಳಿದರು. ಸ್ಟೀಪಲ್ ಚೇಸ್ ಅಡೆತಡೆಗಳನ್ನು ದಾಟಿ ಸಾಗುವ ಕ್ರೀಡೆ ಮತ್ತು ಇದೇ ರೀತಿಯ ತರಬೇತಿಯನ್ನು ಸೇನೆಯಲ್ಲಿ ಪಡೆದುಕೊಂಡಿರುವುದಾಗಿ ಹೇಳಿದರು. ತ್ವರಿತವಾಗಿ ತೂಕ ಕಳೆದುಕೊಳ್ಳಲು ಕಾರಣವಾದ ಅನುಭವದ ಬಗ್ಗೆ ಪ್ರಧಾನಮಂತ್ರಿ ಅವರು ಕೇಳಿದಾಗ ಸೇನೆಯಲ್ಲಿ ತಮಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ದೊರೆಯಿತು ಮತ್ತು ತರಬೇತಿ ಪಡೆಯಲು ಹೆಚ್ಚಿನ ಸಮಯವೂ ಲಬಿಸಿತು. ಇದರಿಂದ ತೂಕ ಇಳಿಸಿಕೊಳ‍್ಳಲು ಸಹಕಾರಿಯಾಯಿತು ಎಂದು ಹೇಳಿದರು.  

ನಂತರ ಪ್ರಧಾನಮಂತ್ರಿ ಅವರು ಪಶ್ಚಿಮ ಬಂಗಾಳದ 73 ಕೆ.ಜಿ. ವಿಭಾಗದ ವೇಯ್ಟ್ ಲಿಪ್ಟರ್ ಅಚಿಂತ ಶೆಯುಲಿ ಅವರ ಜೊತೆ ಸಂವಾದ ನಡೆಸಿದರು. ಶಾಂತಿಯುತ ಸ್ವಭಾವ ಮತ್ತು ವೇಯ್ಟ್ ಲಿಪ್ಟಿಂಗ್ ಕ್ರೀಡೆಯ ಶಕ್ತಿಯ ಬಗ್ಗೆ ಪ್ರಶ್ನಿಸಿದರು. ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ ಎಂದು ಅಚಿಂತ ಉತ್ತರಿಸಿದರು. ಪ್ರಧಾನಮಂತ್ರಿ ಅವರು ಅವರ ಕುಟುಂಬದ ಬಗ್ಗೆ ವಿಚಾರಿಸಿದಾಗ ಅಚಿಂತ ತಾವು ತಾಯಿ ಮತ್ತು ಹಿರಿಯ ಸಹೋದರರನ್ನು ಹೊಂದಿದ್ದು, ಅವರು ತಮ್ಮ ಬದುಕಿನ ಎಲ್ಲಾ ಏರಿಳಿತಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು. ಕ್ರೀಡೆಯಲ್ಲಿ ನೀವು ಗಾಯಗೊಂಡಾಗ ಅದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಪ್ರಧಾನಮಂತ್ರಿ ಅವರು ಕೇಳಿದರು. ಕ್ರೀಡೆಯಲ್ಲಿ ಗಾಯ ಒಂದು ಭಾಗವಾಗಿದೆ ಮತ್ತು ಗಾಯಕ್ಕೆ ಸೂಕ್ತ ರೀತಿಯಲ್ಲಿ ಶುಶ್ರೂಷೆ ಮಾಡುವುದಾಗಿ ಅಚಿಂತ ತಿಳಿಸಿದರು. ಗಾಯಗೊಳ್ಳಲು ಕಾರಣವಾದ ತಪ್ಪುಗಳ ಬಗ್ಗೆ ಅವಲೋಕನ ಮಾಡುವ ಮತ್ತು ಭವಿಷ್ಯದಲ್ಲಿ ಇಂತಹ ಲೋಪಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿಯೂ ಹೇಳಿದರು. ಅಚಿಂತ ಅವರ ಪ್ರಯತ್ನಗಳಿಗೆ ಶುಭ ಹಾರೈಸಿದರು ಮತ್ತು ವಿಶೇಷವಾಗಿ ಅಚಿಂತ ಅವರ ಅಗತ್ಯಗಳನ್ನು ಪೂರೈಸಿದ ಅವರ ತಾಯಿ ಮತ್ತು ಸಹೋದರರನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.   

ಕೇರಳದ ಬ್ಯಾಡ್ಮಿಂಟನ್ ಆಟಗಾರ್ತಿ ತ್ರೀಶಾ ಜೊಲ್ಲಿ ಅವರ ಜೊತೆ ಪ್ರಧಾನಮಂತ್ರಿ ಅವರು ಸಂವಾದ ನಡೆಸಿದರು. ಫುಟ್ಬಾಲ್ ಮತ್ತು ಕೃಷಿಗೆ ಹೆಸರಾದ ಕನ್ನೂರ್ ನಿಂದ ಬಂದಿರುವ ನೀವು ಹೇಗೆ ಬ್ಯಾಡ್ಮಿಂಟನ್ ಆಟಗಾರರಾದಿರಿ ಎಂದು ವಿಚಾರಿಸಿದರು. ತಮ್ಮ ತಂದೆ ಬ್ಯಾಡ್ಮಿಂಟನ್ ಆಟಗಾರರಾಗಲು ಪ್ರೇರಣೆ ನೀಡಿದ್ದಾಗಿ ಹೇಳಿದರು. ಗಾಯತ್ರಿ ಗೋಪಿಚಂದ್ ಅವರೊಂದಿಗೆ ಸ್ನೇಹ ಮತ್ತು ಅಂಗಳದಲ್ಲಿ ಅವರ ಸಹಭಾಗಿತ್ವ ಕುರಿತು ಪ್ರಧಾನಮಂತ್ರಿ ಅವರು ಪ್ರಶ್ನಿಸಿದಾಗ, ಅಂಗಳದಲ್ಲಿ ತಮ್ಮ ಜೊತೆಗಾತಿಯಾಗಿರುವ ಅವರಿಂದ ಕ್ರೀಡೆಯಲ್ಲೂ ಸಾಕಷ್ಟು ನೆರವಾಗಿದೆ ಎಂದರು. ವಾಪಸ್ ಬರುವಾಗ ಸಂಭ್ರಮಾಚರಣೆ ಕುರಿತಂತೆಯೂ ಪ್ರಧಾನಮಂತ್ರಿ ಅವರು ವಿಚಾರಿಸಿದರು.     

   ಜಾರ್ಖಂಡ್ ನ ಹಾಕಿ ಆಟಗಾರ್ತಿ ಸಲಿಮಾ ತೆತೆ ಅವರೊಂದಿಗೆ ಪ್ರಧಾನಮಂತ್ರಿ ಅವರು ಸಂವಾದ ಮಾಡಿದರು. ಹಾಕಿ ಕ್ಷೇತ್ರದಲ್ಲಿ ಆಕೆ ಮತ್ತು ಆಕೆಯ ತಂದೆಯ ಪ್ರಯಾಣದ ಬಗ್ಗೆ ವಿಚಾರಿಸಿದರು. ತಮ್ಮ ತಂದೆ ಹಾಕಿ ಆಟವನ್ನು ನೋಡಿ ತಾವು ಸ್ಫೂರ್ತಿ ಪಡೆದು ಈ ಕ್ರೀಡೆಯಲ್ಲಿ ತೊಡಗಿಸಿಕೊಂಡೆ ಎಂದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿನ ಅನುಭವ ಹಂಚಿಕೊಳ್ಳುವಂತೆ ಕೇಳಿದರು. ಟೋಕಿಯೋಗೆ ತೆರಳುವ ಮುನ್ನ ತಾವು ಪ್ರಧಾನಮಂತ್ರಿ ಅವರೊಂದಿಗೆ ಸಂವಾದ ನಡೆಸಿದ್ದು ತಮಗೆ ಪ್ರೇರಣೆಯಾಯಿತು ಎಂಧು ತಿಳಿಸಿದರು.  

   ಹರ್ಯಾಣದ ಶಾಟ್ ಪಟ್ ನ ಪ್ಯಾರಾ ಅಥ್ಲೀಟ್ ಶರ್ಮಿಲಾ ಅವರೊಂದಿಗೆ ನಡೆಸಿದ ಸಂವಾದ ಮಾಡಿದರು. 34 ನೇ ವರ್ಷದಲ್ಲಿ ಈ ಕ್ರೀಡೆಯಲ್ಲಿ ತೊಡಗಿಕೊಳ‍್ಳುವ ಹಾಗೂ ಎರಡು ವರ್ಷಗಳಲ್ಲಿ ಚಿನ್ನದ ಪದಕ ಪಡೆಯಲು ಏನು ಸ್ಫೂರ್ತಿ ಏನು ಎಂದು ಕೇಳಿದರು. ತಮಗೆ ಸಣ್ಣ ವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಇತ್ತು. ಆದರೆ ಕುಟುಂಬದ ಹಣಕಾಸು ಪರಿಸ್ಥಿತಿಯಿಂದಾಗಿ ಬೇಗನೇ ಮದುವೆ ಮಾಡಿಕೊಳ್ಳಬೇಕಾಯಿತು ಮತ್ತು ಗಂಡನ ಕೈಯಲ್ಲಿ ಕಿರುಕುಳ ಅನುಭವಿಸಬೇಕಾಯಿತು ಎಂದರು. ಬಳಕೆ ಈಕೆ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಆರು ವರ್ಷಗಳ ಕಾಲ ಹೆತ್ತವರನ್ನು ಅವಲಂಬಿಸಬೇಕಾಯಿತು. ಆಕೆಯ ಸಂಬಂಧಿ ತೇಕಚಂದ್ ಭಾಯ್ ಆಕೆಯನ್ನು ಬೆಂಬಲಿಸಿದರು ಮತ್ತು ದಿನಕ್ಕೆ ಎಂಟು ಗಂಟೆಗಳ ಕಾಲ ಹುರುಪಿನಿಂದ ತರಬೇತಿ ನೀಡಿದರು. ಪ್ರಧಾನಿ ಅವರು ಆಕೆಯ ಹೆಣ್ಣು ಮಕ್ಕಳ ಬಗ್ಗೆ ವಿಚಾರಿಸಿದಲ್ಲದೇ ಇವರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ದೇಶಕ್ಕೆ ಕೊಡುಗೆ ನೀಡಬೇಕು ಎಂಬುದು ತಮ್ಮ ಉದ್ದೇಶ ಎಂದು ಶರ್ಮಿಲಾ ಹೇಳಿದರು. ಅವರ ತರಬೇತುದಾರ ಮತ್ತು ಮಾಜಿ ಪ್ಯಾರಾ ಒಲಿಂಪಿಯನ್ ತೇಕ್ ಚಂದ್ ಜಿ ಅವರ ಬಗ್ಗೆ ಪ್ರಧಾನಮಂತ್ರಿ ಅವರು ಹೆಚ್ಚಿನ ಮಾಹಿತಿ ಕೇಳಿದರು. ತಮ್ಮ ಕ್ರೀಡಾ ಬದುಕಿನುದ್ದಕ್ಕೂ ಅವರು ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಸ್ಪರ್ಧಿಸಲು ತಮಗೆ ತರಬೇತಿ ನೀಡುವಲ್ಲಿ ಅವರು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದರು. ಆಕೆ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ ವಯಸ್ಸಿನಲ್ಲಿ ಇತರರು ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ. ಇವರ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಪ್ರಧಾನಮಂತ್ರಿ ಅವರು ಶುಭ ಹಾರೈಸಿದರು.  

   ಅಂಡಮಾನ್ ಮತ್ತು ನಿಕೋಬಾರ್ ನ ಬೈಸಿಕಲ್ ಪಟು ಡೇವಿಡ್ ಬೇಕಂ ಅವರೊಂದಿಗೆ ಸಂವಾದ ನಡೆಸಿದರು. ಫುಟ್ಬಾಲ್ ದಂತಕಥೆಗಳ ಹೆಸರುಗಳನ್ನು ಹಂಚಿಕೊಳ್ಳುವ ಅವರನ್ನು ತಮಗೆ ಫುಟ್ಬಾಲ್ ಬಗ್ಗೆ ಉತ್ಸಾಹವಿದೆಯೇ ಎಂದು ಪ್ರಧಾನಿ ಕೇಳಿದರು. ತಮಗೆ ಫುಟ್ಬಾಲ್ ಬಗ್ಗೆ ಆಸಕ್ತಿ ಇತ್ತು. ಆದರೆ ಅಂಡಮಾನ್ ನಲ್ಲಿ ಮೂಲ ಸೌಕರ್ಯದ ಕೊರತೆಯಿಂದ ಫುಟ್ಬಾಲ್ ಮುಂದವರೆಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಇಷ್ಟು ದಿನ ಕ್ರೀಡೆಯನ್ನು ಮುಂದುವರೆಸಲು ಹೇಗೆ ಪ್ರೇರಣೆಯಾಯಿತು. ಖೇಲೋ ಇಂಡಿಯಾ ಹೇಗೆ ಸಹಾಯ ಮಾಡಿದೆ ಎಂದು ಪ್ರಧಾನಮಂತ್ರಿ ಅವರು ಪ್ರಶ್ನಿಸಿದರು. ಖೇಲೋ ಇಂಡಿಯಾ ಮೂಲಕ ತಮ್ಮ ಕ್ರೀಡಾ ಯಾನ ಆರಂಭವಾಯಿತು ಮತ್ತು ಮನ್ ಬಾತ್ ನಲ್ಲಿ ಪ್ರಧಾನಮಂತ್ರಿ ಅವರು ತಮ್ಮ ಬಗ್ಗೆ ಮಾತನಾಡಿದ್ದು ತಮಗೆ ಉತ್ತೇಜನ ನೀಡಿತು ಎಂದರು. ಸುನಾಯಿಯಿಂದ ತಂದೆಯನ್ನು ಕಳೆದುಕೊಂಡ ಹಾಗೂ ನಂತರ ಸ್ಪಲ್ಪ ಸಮಯದಲ್ಲೇ ತಾಯಿಯೂ ಅಗಲಿದರು. ಹೀಗಾಗಿ ಈತನ ಬಗ್ಗೆ ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.  

ಸಂವಾದದ ನಂತರ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ತಾವು ಸಂಸತ್ ಅಧಿವೇಶನದಲ್ಲಿ ನಿರತರಾಗಿದ್ದರಿಂದ ನಿಮ್ಮನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಕ್ರೀಡಾಕೂಟದಿಂದ ವಾಪಸ್ ಬಂದ ನಂತರ ನಿಮ್ಮನ್ನು ಭೇಟಿಯಾಗುತ್ತೇನೆ ಮತ್ತು ವಿಜಯೋತ್ಸವವನ್ನು ಒಟ್ಟಿಗೆ ಆಚರಿಸೋಣ ಎಂದು ಹೇಳಿದರು.

ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದು ಅತ್ಯಂತ ಮಹತ್ವದ ಅವಧಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಿಮ್ಮಂತಹ ಆಟಗಾರರ ಉತ್ಸಾಹ ಹೆಚ್ಚಾಗಿದೆ: ತರಬೇತಿಯೂ ಉತ್ತಮವಾಗಿದೆ ಮತ್ತು ಕ್ರೀಡೆಯ ಬಗ್ಗೆ ದೇಶದ ವಾತಾವರಣವೂ ಅದ್ಭುತವಾಗಿದೆ. ನೀವೆಲ್ಲರೂ ಹೊಸ ಶಿಖರ ಏರುತ್ತಿದ್ದೀರಿ ಮತ್ತು ಹೊಸ ಎತ್ತರಕ್ಕೆ ತಲುಪುತ್ತಿದ್ದೀರಿ ಎಂದರು. ಮೊದಲ ಬಾರಿಗೆ ದೊಡ್ಡ ಅಂತರರಾಷ್ಟ್ರೀಯ ರಂಗ ಪ್ರವೇಶಿಸುತ್ತಿರುವವರಿಗೆ ಅಖಾಡ ಮಾತ್ರ ಬದಲಾಗಿದೆ. ಆದರೆ ಯಶಸ್ಸಿನ ಉತ್ಸಾಹ ಮತ್ತು ಹಠವಲ್ಲ ಎಂದು ಹೇಳಿದರು. ““ತ್ರಿವರ್ಣ ಧ್ವಜ ಎತ್ತದಲ್ಲಿ ಹಾರಾಡುವುದನ್ನು ನೋಡುವುದು, ರಾಷ್ಟ್ರಗೀತೆ ನುಡಿಸುವುದನ್ನು ಕೇಳುವುದು ನಮ್ಮ ಗುರಿ. ಹೀಗಾಗಿ ಯಾರೂ ಒತ್ತಡಕ್ಕೆ ಒಳಗಾಗಬೇಡಿ, ಉತ್ತಮ ಮತ್ತು ಬಲಿಷ್ಠವಾಗಿ ಪರಿಣಾಮ ಬೀರುವಂತೆ ಆಟ ಆಡಿ” ಎಂದು ಹೇಳಿದರು.  

“ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಅಥ್ಲೀಟ್ ಗಳು ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ ಮತ್ತು ಅಥ್ಲೀಟ್ ಗಳು ಅತ್ಯುತ್ತಮ ಸಾಮರ್ಥ್ಯದಿಂದ ದೇಶಕ್ಕೆ ಕೊಡುಗೆ ನೀಡಬೇಕು. ಎದುರಾಳಿ ಯಾರು ಎಂಬುದು ಮುಖ್ಯವಾಗಬಾರದು. “ನೀವು ಎಲ್ಲರೂ ಉತ್ತಮವಾಗಿ ತರಬೇತಿ ಪಡೆದಿದ್ದೀರಿ, ಜಗತ್ತಿನ ಉತ್ತಮ ಸೌಲಭ್ಯಗಳ ಮೂಲಕ ತರಬೇತಿ ಪಡೆದುಕೊಂಡಿದ್ದೀರಿ. ಆ ತರಬೇತಿ ಮತ್ತು ನಿಮ್ಮ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳುವ ಸಮಯ ಇದಾಗಿದೆ. ಅಥ್ಲೀಟ್ ಗಳು ಸಾಧಿಸಿರುವುದು ನಿಜವಾಗಿಯೂ ಸ್ಫೂರ್ತಿದಾಯಕವಾಗಿದ್ದು, ಇದೀಗ ಹೊಸ ದಾಖಲೆಗಳನ್ನು ನಿರ್ಮಿಸಬೇಕಾಗಿದೆ ಮತ್ತು ದೇಶ ಮತ್ತು ದೇಶದ ಜನರಿಗೆ ಈಗ ಅತ್ಯುತ್ತಮವಾದ ಕೊಡುಗೆ ನೀಡಬೇಕು ಎಂದು ಹೇಳಿದರು.

ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮುನ್ನ ಕ್ರೀಡಾಪಟುಗಳನ್ನು ಪ್ರೇರೇಪಿಸುವ ಮತ್ತು ನಡೆಸುವ ಸಂವಾದ ಪ್ರಧಾನಮಂತ್ರಿ ಅವರ ನಿರಂತರ ಪ್ರಯತ್ನದ ಒಂದು ಭಾಗವಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ಅವರು ಟೋಕಿಯೋ 2020 ಮತ್ತು ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುವ ಮುನ್ನ ಭಾರತೀಯ ಅಥ್ಲೀಟ್ ಗಳೊಂದಿಗೆ ಸಂವಾದ ನಡೆಸಿದ್ದರು.  

    ಕ್ರೀಡಾಕೂಟಗಳ ಸಮಯದಲ್ಲೂ ಪ್ರಧಾನಮಂತ್ರಿ ಅವರು ಕ್ರೀಡಾಪಟುಗಳ ಪ್ರಗತಿ ಬಗ್ಗೆ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ. ಅನೇಕ ಸಂದರ್ಭದಲ್ಲಿ ಅವರು ವೈಯಕ್ತಿವಾಗಿ ಕ್ರೀಡಾಪಟುಗಳನ್ನು ಮತ್ತು ಅವರ ಯಶಸ್ಸು ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಅಭಿನಂದಿಸಿ ಉತ್ತಮವಾಗಿ ಆಡುವಂತೆ ಪ್ರೇರೇಪಿಸುತ್ತಿದ್ದಾರೆ. ಅಲ್ಲದೇ ಕ್ರೀಡಾಪಟುಗಳು ಸ್ವದೇಶಕ್ಕೆ ಹಿಂತಿರುಗಿದ ನಂತರ ಅವರನ್ನು ಭೇಟಿಯಾಗಿ ಪ್ರಧಾನಮಂತ್ರಿ ಅವರು ಸಂವಾದ ನಡೆಸುತ್ತಿದ್ದಾರೆ.  

   ಕಾಮನ್ ವೆಲ್ತ್ ಕ್ರೀಡಾಕೂಟ 2022 ಬರ್ಮಿಂಗ್ ಹಾಮ್ ನಲ್ಲಿ ಜುಲೈ 28 ರಿಂದ ಪ್ರಾರಂಭವಾಗಿ,. 2022 ರ ಆಗಸ್ಟ್ 8 ರ ವರೆಗೆ ನಡೆಯಲಿದೆ. ಒಟ್ಟು 215 ಕ್ಕೂ ಹೆಚ್ಚು ಅಥ್ಲೀಟ್ ಗಳು 19 ಕ್ರೀಡಾ ವಿಭಾಗಗಳ 141 ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
First batch of Agniveers graduates after four months of training

Media Coverage

First batch of Agniveers graduates after four months of training
...

Nm on the go

Always be the first to hear from the PM. Get the App Now!
...
PM praises float-on - float-off operation of Chennai Port
March 28, 2023
ಶೇರ್
 
Comments

The Prime Minister, Shri Narendra Modi has praised float-on - float-off operation of Chennai Port which is a record and is being seen an achievement to celebrate how a ship has been transported to another country.

Replying to a tweet by Union Minister of State, Shri Shantanu Thakur, the Prime Minister tweeted :

"Great news for our ports and shipping sector."