ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಐಐಟಿ ದೆಹಲಿ-ಅಬುಧಾಬಿ ಕ್ಯಾಂಪಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದು ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಹಯೋಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವುದಲ್ಲದೆ, ಎರಡೂ ದೇಶಗಳ ಯುವಕರನ್ನು ಒಗ್ಗೂಡಿಸಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಯುಎಇಯಲ್ಲಿ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕ್ಯಾಂಪಸ್ ಅನ್ನು ತೆರೆಯುವ ಕಲ್ಪನೆಯನ್ನು ಉಭಯ ದೇಶಗಳ ನಾಯಕರು ಫೆಬ್ರವರಿ 2022ರಲ್ಲಿ ರೂಪಿಸಿದ್ದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದೆಹಲಿ (ಐಐಟಿ-ಡಿ) ಮತ್ತು ಅಬುಧಾಬಿ ಶಿಕ್ಷಣ ಮತ್ತು ಜ್ಞಾನ ಇಲಾಖೆ (ಎಡಿಇಕೆ) ನಡುವಿನ ಜಂಟಿ ಸಹಯೋಗದ ಈ ಯೋಜನೆಯು ಜಾಗತಿಕವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಪಾಲ್ಗೊಳ್ಳುವಿಕೆ ಮತ್ತು ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ. ಪ್ರಪ್ರಥಮವಾಗಿ ಈ ಶೈಕ್ಷಣಿಕ ವರ್ಷದಲ್ಲಿ - ಮಾಸ್ಟರ್ಸ್ ಇನ್ ಎನರ್ಜಿ ಟ್ರಾನ್ಸಿಷನ್ ಅಂಡ್ ಸಸ್ಟೈನಬಿಲಿಟಿ - ಎಂಬ ಕಾರ್ಯಕ್ರಮವು ಈ ಜನವರಿಯಲ್ಲಿ ಪ್ರಾರಂಭವಾಯಿತು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India emerges as a global mobile manufacturing powerhouse, says CDS study

Media Coverage

India emerges as a global mobile manufacturing powerhouse, says CDS study
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಜುಲೈ 2025
July 24, 2025

Global Pride- How PM Modi’s Leadership Unites India and the World