ಇಂದಿನಿಂದ, ಭಾರತದ ವಿಮಾನಯಾನ ಕ್ಷೇತ್ರವು ಹೊಸ ಎತ್ತರಕ್ಕೆ ಹಾರಲು ಸಜ್ಜಾಗಿದೆ; ʻಸಫ್ರಾನ್ʼನ ಹೊಸ ಘಟಕವು ಜಾಗತಿಕ ʻಎಂಆರ್‌ಒʼ ಕೇಂದ್ರವಾಗಿ ಭಾರತದ ಸ್ಥಾನವನ್ನು ಭದ್ರಪಡಿಸಲು ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
ಇತ್ತೀಚಿನ ವರ್ಷಗಳಲ್ಲಿ, ಭಾರತದ ವಿಮಾನಯಾನ ಕ್ಷೇತ್ರವು ಅಭೂತಪೂರ್ವ ವೇಗದಲ್ಲಿ ಪ್ರಗತಿ ಸಾಧಿಸಿದೆ. ಇಂದು, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶೀಯ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ: ಪ್ರಧಾನಮಂತ್ರಿ
ನಾವು ದೊಡ್ಡ ಕನಸುಗಳನ್ನು ಕಾಣುತ್ತಿದ್ದೇವೆ, ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದೇವೆ: ಪ್ರಧಾನಮಂತ್ರಿ
ಭಾರತದಲ್ಲಿ ಹೂಡಿಕೆ ಮಾಡುವವರನ್ನು ನಾವು ಕೇವಲ ಹೂಡಿಕೆದಾರರನ್ನಾಗಿ ಮಾತ್ರವಲ್ಲದೆ, ಅಭಿವೃದ್ಧಿ ಹೊಂದಿದ ರಾಷ್ಟ್ರದತ್ತ ನಮ್ಮ ಪ್ರಯಾಣದ ಸಹ-ಸೃಷ್ಟಿಕರ್ತರು ಎಂದು ಪರಿಗಣಿಸುತ್ತೇವೆ: ಪ್ರಧಾನಮಂತ್ರಿ

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ʻಜಿಎಂಆರ್ ಏರೋಸ್ಪೇಸ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್ʼ – ವಿಶೇಷ ಆರ್ಥಿಕ ವಲಯದಲ್ಲಿರುವ ʻಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾʼ (ಎಸ್ಎಇಎಸ್ಐ) ಘಟಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, "ಇಂದಿನಿಂದ ಭಾರತದ ವಿಮಾನಯಾನ ಕ್ಷೇತ್ರವು ಹೊಸ ಎತ್ತರಕ್ಕೆ ತಲುಪುತ್ತಿದೆ. ʻಸಫ್ರಾನ್ʼ ಸಂಸ್ಥೆಯ ಹೊಸ ಘಟಕವು ಭಾರತವನ್ನು ಜಾಗತಿಕ ʻನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆʼ(ಎಂಆರ್‌ಒ) ಕೇಂದ್ರವಾಗಿ ನೆಲೆಗೊಳಿಸಲು ಸಹಾಯ ಮಾಡುತ್ತದೆ,ʼʼ ಎಂದು ಹೇಳಿದರು. ಈ ʻಎಂಆರ್‌ಒʼ ಘಟಕವು ಅತ್ಯಾಧುನಿಕ ವಿಮಾನಯಾನ ಕ್ಷೇತ್ರದಲ್ಲಿ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ನವೆಂಬರ್ 24 ರಂದು ʻಸಫ್ರಾನ್ʼ ಆಡಳಿತ ಮಂಡಳಿಯ ಜೊತೆಗಿನ ತಮ್ಮ ಭೇಟಿಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಈ ಹಿಂದೆಯೂ ಆಡಳಿತ ಮಂಡಳಿ ಜೊತೆಗಿನ  ಪ್ರತಿಯೊಂದು ಚರ್ಚೆಯಲ್ಲೂ ಭಾರತದ ಬಗ್ಗೆ ಸಂಸ್ಥೆಯ ವಿಶ್ವಾಸ ಮತ್ತು ಭರವಸೆಯನ್ನು ತಾವು ನೋಡಿರುವುದಾಗಿ ಮೋದಿ ಹೇಳಿದರು. ಭಾರತದಲ್ಲಿ ʻಸಫ್ರಾನ್ʼನ ಹೂಡಿಕೆಯು ಅದೇ ವೇಗದಲ್ಲಿ ಮುಂದುವರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಹೊಸ ಘಟಕದ ಉದ್ಘಾಟನೆಗಾಗಿ ʻಸಫ್ರಾನ್ʼ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ ಮೋದಿ ಅವರು ತಮ್ಮ ಶುಭಾಶಯ ಕೋರಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತದ ವಿಮಾನಯಾನ ಕ್ಷೇತ್ರವು ಅಭೂತಪೂರ್ವ ವೇಗದಲ್ಲಿ ಪ್ರಗತಿ ಸಾಧಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶೀಯ ವಿಮಾನಯಾನ ಮಾರುಕಟ್ಟೆಗಳಲ್ಲಿ ಭಾರತವು ಒಂದಾಗಿದೆ ಎಂದು ಹೇಳಿದರು. ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯು ಈಗ ಜಾಗತಿಕವಾಗಿ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತದ ಜನರ ಆಕಾಂಕ್ಷೆಗಳು ಹೊಸ ಎತ್ತರಕ್ಕೆ ತಲುಪುತ್ತಿವೆ ಮತ್ತು ಇದರ ಪರಿಣಾಮವಾಗಿ ದೇಶದಲ್ಲಿ ವಿಮಾನ ಪ್ರಯಾಣದ ಬೇಡಿಕೆ ಹೆಚ್ಚುತ್ತಲೇ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಬೇಡಿಕೆಯನ್ನು ಪೂರೈಸಲು ವಿಮಾನಯಾನ ಸಂಸ್ಥೆಗಳು ತಮ್ಮ ಸಕ್ರಿಯ ವಿಮಾನಯಾನಗಳನ್ನು ನಿರಂತರವಾಗಿ ವಿಸ್ತರಿಸುತ್ತಿವೆ ಎಂದು ಅವರು ಹೇಳಿದರು. ಭಾರತೀಯ ವಿಮಾನಯಾನ ಕಂಪನಿಗಳು 1,500ಕ್ಕೂ ಹೆಚ್ಚು ಹೊಸ ವಿಮಾನಗಳ ಪೂರೈಕೆಗ ಕಾರ್ಯಾದೇಶ ನೀಡಿವೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಭಾರತದ ವಿಮಾನಯಾನ ಕ್ಷೇತ್ರದ ತ್ವರಿತ ವಿಸ್ತರಣೆಯೊಂದಿಗೆ, ʻಎಂಆರ್‌ಒʼ ಘಟಕಗಳ ಅಗತ್ಯವೂ ಹೆಚ್ಚಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಪ್ರಸ್ತುತ, ಭಾರತದ ಸುಮಾರು 85 ಪ್ರತಿಶತದಷ್ಟು ʻಎಂಆರ್‌ʼ ಕೆಲಸವು ದೇಶದ ಹೊರಗೆ ನಡೆಯುತ್ತಿದೆ. ಇದು ಹೆಚ್ಚಿನ ವೆಚ್ಚಗಳು, ದೀರ್ಘಾವಧಿಯ ಸಮಯ ಮತ್ತು ವಿಸ್ತೃತ ಅವಧಿಗೆ ವಿಮಾನಗಳ ನಿಲುಗಡೆಗೆ ಕಾರಣವಾಗುತ್ತಿದೆ ಎಂದು ಹೇಳಿದರು. ಭಾರತದಂತಹ ವಿಶಾಲವಾದ ವಿಮಾನಯಾನ ಮಾರುಕಟ್ಟೆಗೆ ಇಂತಹ ಪರಿಸ್ಥಿತಿ ಸೂಕ್ತವಲ್ಲ ಎಂದು ಅವರು ಒತ್ತಿಹೇಳಿದರು. ಆದ್ದರಿಂದ, ಇಂದು ಭಾರತ ಸರ್ಕಾರವು ರಾಷ್ಟ್ರವನ್ನು ವಿಶ್ವದ ಪ್ರಮುಖ ʻಎಂಆರ್‌ಒʼ ಕೇಂದ್ರಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ, ಜಾಗತಿಕ ʻಮೂಲ ಸಲಕರಣೆ ತಯಾರಿಕಾ ಸಂಸ್ಥೆʼಯೊಂದು(ಒಇಎಂ) ದೇಶದಲ್ಲಿ ಆಳ ಮಟ್ಟದ ಸೇವಾ ಘಟಕಗಳನ್ನು ಸ್ಥಾಪಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

 

ʻಸಫ್ರಾನ್ʼನ ಜಾಗತಿಕ ತರಬೇತಿ, ಜ್ಞಾನ ವರ್ಗಾವಣೆ ಮತ್ತು ಭಾರತೀಯ ಸಂಸ್ಥೆಗಳೊಂದಿಗಿನ ಪಾಲುದಾರಿಕೆಯು ಮುಂಬರುವ ವರ್ಷಗಳಲ್ಲಿ ಇಡೀ ʻಎಂಆರ್‌ಒʼ ಪರಿಸರ ವ್ಯವಸ್ಥೆಗೆ ಹೊಸ ವೇಗ ಮತ್ತು ದಿಕ್ಕನ್ನು ನೀಡುವ ಕಾರ್ಯಪಡೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ಘಟಕವು ದಕ್ಷಿಣ ಭಾರತದ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಒತ್ತಿ ಹೇಳಿದರು. ಭಾರತವು ಕೇವಲ ವಿಮಾನಯಾನ ʻಎಂಆರ್‌ಒʼಗೆ ಮಾತ್ರ ಸೀಮಿತವಾಗಲು ಬಯಸುವುದಿಲ್ಲ ಮತ್ತು ಹಡಗುಗಳಿಗೆ ಸಂಬಂಧಿಸಿದ ʻಎಂಆರ್‌ಒʼ ಪರಿಸರ ವ್ಯವಸ್ಥೆಯಮನ್ನೂ ಅಭಿವೃದ್ಧಿಪಡಿಸಲು ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ "ಭಾರತದಲ್ಲಿ ವಿನ್ಯಾಸ"ವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತದಲ್ಲಿ ವಿಮಾನ ಎಂಜಿನ್ ಮತ್ತು ಬಿಡಿಭಾಗಗಳ ವಿನ್ಯಾಸದ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಅವರು ʻಸಫ್ರಾನ್ʼ ತಂಡವನ್ನು ಒತ್ತಾಯಿಸಿದರು. ಭಾರತದ ವಿಶಾಲವಾದ ʻಎಂಎಸ್ಎಂಇʼ ಜಾಲ ಮತ್ತು ಅದರ ಯುವ ಪ್ರತಿಭೆಗಳು ಈ ಪ್ರಯತ್ನದಲ್ಲಿ ಗಮನಾರ್ಹ ಬೆಂಬಲವನ್ನು ನೀಡುತ್ತವೆ ಎಂದು ಅವರು ಹೇಳಿದರು. ʻಸಫ್ರಾನ್ ಏರೋಸ್ಪೇಸ್ʼ ಸಂಸ್ಥೆಯು ʻಏರೋಸ್ಪೇಸ್ ಪ್ರೊಪಲ್ಷನ್ ಸಿಸ್ಟಮ್‌ʼಗಳಲ್ಲಿ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿ, ಕಂಪನಿಯು ಭಾರತದ ಪ್ರತಿಭೆಯ ಜೊತೆಗೆ ಪ್ರೊಪಲ್ಷನ್ ವಿನ್ಯಾಸ ಮತ್ತು ಉತ್ಪಾದನೆಯ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಇಂದಿನ ಭಾರತವು ದೊಡ್ಡ ಕನಸು ಕಾಣುವುದು ಮಾತ್ರವಲ್ಲದೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಮಹತ್ತರವಾದ ಸಾಧನೆಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿಹೇಳಿದರು. "ನಾವು ದೊಡ್ಡ ಕನಸುಗಳನ್ನು ಕಾಣುತ್ತಿದ್ದೇವೆ, ದೊಡ್ಡ ಮಟ್ಟದಲ್ಲಿ ಕೆಲಸ  ಮಾಡುತ್ತಿದ್ದೇವೆ ಮತ್ತು ಉತ್ತಮ ರೀತಿಯಲ್ಲಿ ಸೇವೆಗಳನ್ನು ನೀಡುತ್ತಿದ್ದೇವೆ," ಎಂದು ಅವರು ಹೇಳಿದರು. ಸುಗಮ ವ್ಯಾಪಾರಕ್ಕೆ ಭಾರತವು ಬಲವಾದ ಒತ್ತು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

 

ಜಾಗತಿಕ ಹೂಡಿಕೆ ಮತ್ತು ಜಾಗತಿಕ ಉದ್ಯಮಗಳನ್ನು ಆಕರ್ಷಿಸಲು, ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿದೊಡ್ಡ ದೊಡ್ಡವೆನಿಸಿದ ಕೆಲವು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಒತ್ತಿಹೇಳಿದರು. ಮೊದಲು ಆರ್ಥಿಕತೆಯ ಬಾಗಿಲುಗಳನ್ನು ತೆರೆಯಲಾಯಿತು ಎಂದು ಶ್ರೀ ಮೋದಿ ಹೇಳಿದರು. ಎರಡನೆಯದಾಗಿ, ರಾಷ್ಟ್ರದ ಆರ್ಥಿಕ ಮೂಲಾಂಶಗಳನ್ನು ಮತ್ತಷ್ಟು ಬಲಪಡಿಸಲಾಯಿತು; ಮತ್ತು ಮೂರನೆಯದಾಗಿ, ಸುಗಮ ವ್ಯಾಪಾರವನ್ನು ಬಲಪಡಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.

ಇಂದು ಬಹುತೇಕ ವಲಯಗಳಲ್ಲಿ ಸ್ವಯಂಚಾಲಿತ ಮಾರ್ಗಗಳ ಮೂಲಕ ಶೇ.100ರಷ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹಿಂದೆ ಖಾಸಗಿ ವಲಯಕ್ಕೆ ಸ್ಥಳಾವಕಾಶವಿಲ್ಲದ ರಕ್ಷಣೆಯಂತಹ ಕ್ಷೇತ್ರಗಳಲ್ಲಿಯೂ ಸಹ ಈಗ ಸ್ವಯಂಚಾಲಿತ ಮಾರ್ಗಗಳ ಮೂಲಕ ಶೇಕಡಾ 74 ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ಮುಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಪ್ರಮುಖ ಕ್ರಾಂತಿಕಾರಿ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಕ್ರಮಗಳು - "ಭಾರತ ಹೂಡಿಕೆಯನ್ನು ಸ್ವಾಗತಿಸುತ್ತದೆ, ಭಾರತ ನಾವಿನ್ಯತೆಯನ್ನು ಸ್ವಾಗತಿಸುತ್ತದೆ" ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ಪಾದನೆ ಆಧಾರಿತ ಪ್ರೋತ್ಸಾಹಕಧನ ಯೋಜನೆಗಳು ಜಾಗತಿಕ ತಯಾರಕರನ್ನು ʻಮೇಕ್ ಇನ್ ಇಂಡಿಯಾʼದತ್ತ ಆಕರ್ಷಿಸಿವೆ ಎಂದು ಅವರು ಹೇಳಿದರು.

ಕಳೆದ 11 ವರ್ಷಗಳಲ್ಲಿ, 40,000ಕ್ಕೂ ಹೆಚ್ಚು ಕಂಪನಿ ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತವು ನೂರಾರು ವ್ಯಾಪಾರ ಸಂಬಂಧಿತ ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಿದೆ ಎಂದು ಅವರು ಮಾಹಿತಿ ನೀಡಿದರು. ʻರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆʼಯು ಒಂದೇ ವೇದಿಕೆಯಲ್ಲಿ ಹಲವಾರು ಅನುಮೋದನೆಗಳನ್ನು ಒಟ್ಟುಗೂಡಿಸಿದೆ ಎಂದು ಅವರು ಒತ್ತಿ ಹೇಳಿದರು. ʻಜಿಎಸ್‌ಟಿʼ ಸುಧಾರಣೆಗಳು, ಮುಖಾಮುಖಿ ರಹಿತ ತೆರಿಗೆ ಮೌಲ್ಯಮಾಪನ, ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ದಿವಾಳಿತನ ಸಂಹಿತೆ ಎಲ್ಲವೂ ಆಡಳಿತವನ್ನು ಹಿಂದೆಂದಿಗಿಂತಲೂ ಸರಳ ಮತ್ತು ಪಾರದರ್ಶಕಗೊಳಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರಯತ್ನಗಳಿಂದಾಗಿ, ಭಾರತವನ್ನು ಈಗ ವಿಶ್ವಾಸಾರ್ಹ ಪಾಲುದಾರ, ಪ್ರಮುಖ ಮಾರುಕಟ್ಟೆ ಮತ್ತು ಬೆಳೆಯುತ್ತಿರುವ ಉತ್ಪಾದನಾ ಕೇಂದ್ರವಾಗಿ ನೋಡಲಾಗುತ್ತಿದೆ ಎಂದು ಅವರು ಹೇಳಿದರು.

 

ಭಾರತವು ಇಂದು ಕ್ಷಿಪ್ರ ಬೆಳವಣಿಗೆ, ಸ್ಥಿರ ಸರ್ಕಾರ, ಸುಧಾರಣೆ ಆಧಾರಿತ ಮನಸ್ಥಿತಿ, ಅಗಾಧವಾದ ಯುವ ಪ್ರತಿಭೆಗಳ ಭಂಡಾರ ಮತ್ತು ದೊಡ್ಡ ದೇಶೀಯ ಮಾರುಕಟ್ಟೆಯನ್ನು ಹೊಂದಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದಲ್ಲಿ ಹೂಡಿಕೆ ಮಾಡುವವರನ್ನು, ದೇಶವು ಕೇವಲ ಹೂಡಿಕೆದಾರರಾಗಿ ಮಾತ್ರ ನೋಡುವುದಿಲ್ಲ. ಅವರನ್ನು ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣದಲ್ಲಿ ಸಹ-ಸೃಷ್ಟಿಕರ್ತರು, ಮತ್ತು ಪಾಲುದಾರರನ್ನಾಗಿ ಪರಿಗಣಿಸುತ್ತದೆ ಎಂದು ಹೇಳಿದರು. "ಭಾರತದ ಮೇಲೆ ವಿಶ್ವಾಸ ಇರಿಸುವುದು ಈ ದಶಕದ ಅತ್ಯಂತ ಬುದ್ಧಿವಂತ ವ್ಯವಹಾರ ನಿರ್ಧಾರ ಎಂಬುದನ್ನು ಭಾರತವು ಸಾಬೀತುಪಡಿಸುತ್ತಿದೆ" ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಈ ಆಧುನಿಕ ʻಎಂಆರ್‌ಒʼ ಘಟಕವನ್ನು ಸ್ಥಾಪಿಸಿದ್ದಕ್ಕಾಗಿ ಅವರು ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ತೆಲಂಗಾಣದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ, ಕೇಂದ್ರ ಸಚಿವ ಶ್ರೀ ಕೆ ರಾಮ್ ಮೋಹನ್ ನಾಯ್ಡು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ʻಸಫ್ರಾನ್ ಏರ್ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾ‌ʼ(ಎಸ್‌ಎಇಎಸ್‌ಐ) -  ಇದು ʻಏರ್‌ಬಸ್ ಎ320 ನಿಯೋʼ ಮತ್ತು ʻಬೋಯಿಂಗ್ 737 ಮ್ಯಾಕ್ಸ್ʼ ವಿಮಾನಗಳಲ್ಲಿ ಅಳವಡಿಸಿರುವ ʻಲೀಪ್ʼ (ಲೀಡಿಂಗ್ ಎಡ್ಜ್ ಏವಿಯೇಷನ್ ಪ್ರೊಪಲ್ಶನ್) ಎಂಜಿನ್‌ಗಳ ʻನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆʼಗಾಗಿ(ಎಂಆರ್‌ಒ) ʻಸಫ್ರಾನ್‌ʼ ಸಂಸ್ಥೆಯ ಸ್ಥಾಪಿಸಿರುವ ವಿಶೇಷ ಘಟಕವಾಗಿದೆ.  ಈ ಘಟಕದ ಸ್ಥಾಪನೆಯು ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಏಕೆಂದರೆ ಇದು ಅತಿದೊಡ್ಡ ಜಾಗತಿಕ ವಿಮಾನ ಎಂಜಿನ್ ʻಎಂಆರ್‌ಒʼ ಘಟಕಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ, ಮೊದಲ ಬಾರಿಗೆ, ಜಾಗತಿಕ ಎಂಜಿನ್ ಮೂಲ ಸಲಕರಣೆ ತಯಾರಕ ಸಂಸ್ಥೆಯೊಂದು (ಒಇಎಂ) ಭಾರತದಲ್ಲಿ ʻಎಂಆರ್‌ಒʼ ಕಾರ್ಯಾಚರಣೆಯನ್ನು ಆರಂಭಿಸಿದೆ.

ʻಜಿಎಂಆರ್ ಏರೋಸ್ಪೇಸ್ ಮತ್ತು ಇಂಡಸ್ಟ್ರಿಯಲ್ ಪಾರ್ಕ್ ʼ– ವಿಶೇಷ ಆರ್ಥಿಕ ವಲಯದಲ್ಲಿ 45,000 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಅತ್ಯಾಧುನಿಕ ಘಟಕವನ್ನು ಸುಮಾರು 1,300 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ವಾರ್ಷಿಕವಾಗಿ 300 ಲೀಪ್ ಎಂಜಿನ್‌ಗಳಿಗೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾದ ʻಎಸ್ಎಇಎಸ್ಐʼ ಘಟಕವು 2035ರ ವೇಳೆಗೆ ಸಂಪೂರ್ಣ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಾಧಿಸಿದ ನಂತರ 1,000 ಕ್ಕೂ ಹೆಚ್ಚು ನುರಿತ ಭಾರತೀಯ ತಂತ್ರಜ್ಞರು ಮತ್ತು ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುತ್ತದೆ. ಈ ಘಟಕವು ವಿಶ್ವದರ್ಜೆಯ ಎಂಜಿನ್ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ಒದಗಿಸಲು ಸುಧಾರಿತ ಪ್ರಕ್ರಿಯೆ ಸಾಧನಗಳನ್ನು ಹೊಂದಿರುತ್ತದೆ.

ʻಎಂಆರ್‌ಒʼ ಘಟಕವು ವಾಯುಯಾನ ಕ್ಷೇತ್ರದಲ್ಲಿ ʻಆತ್ಮನಿರ್ಭರತೆʼಯ ಗುರಿಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ʻಎಂಆರ್‌ಒʼ ಕಾರ್ಯಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರಿಂದ ವಿದೇಶಿ ವಿನಿಮಯದ ಹೊರಹರಿವು ಕಡಿಮೆಯಾಗುತ್ತದೆ, ಹೆಚ್ಚಿನ ಮೌಲ್ಯದ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಪೂರೈಕೆ-ಸರಪಳಿ ಸ್ಥಿತಿಸ್ಥಾಪಕತ್ವ ಬಲವಾಗುತ್ತದೆ ಜೊತೆಗೆ ಜಾಗತಿಕ ವಾಯುಯಾನ ಕೇಂದ್ರವಾಗಿ ಭಾರತದ ಸ್ಥಾನ  ಭದ್ರವಾಗುತ್ತದೆ. ವಲಯದ ತ್ವರಿತ ಬೆಳವಣಿಗೆಯನ್ನು ಬೆಂಬಲಿಸಲು ದೃಢವಾದ ʻಎಂಆರ್‌ಒʼ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತ ಸರ್ಕಾರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ 2024ರಲ್ಲಿ ʻಜಿಎಸ್‌ಟಿʼ ಸುಧಾರಣೆಗಳು, ʻಎಂಆರ್‌ಒ ಮಾರ್ಗಸೂಚಿಗಳು-2021ʼ ಮತ್ತು ʻರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ-2016ʼ ಸೇರಿದಂತೆ ಸರ್ಕಾರದ ಪ್ರಮುಖ ನೀತಿ ಉಪಕ್ರಮಗಳು ಕೈಗೊಂಡಿದೆ. ಈ ಕ್ರಮಗಳು ತೆರಿಗೆ ರಚನೆಗಳನ್ನು ತರ್ಕಬದ್ಧಗೊಳಿಸುವ ಮತ್ತು ರಾಯಧನ ಹೊರೆಯನ್ನು ಕಡಿಮೆ ಮಾಡುವ ಮೂಲಕ ʻಎಂಆರ್‌ಒʼ ಸೇವಾ ಪೂರೈಕೆದಾರರ ಕಾರ್ಯಾಚರಣೆಗಳನ್ನು ಸರಳಗೊಳಿಸಿವೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's pace of economic growth shows that its Viksit Bharat dream is not out of reach

Media Coverage

India's pace of economic growth shows that its Viksit Bharat dream is not out of reach
NM on the go

Nm on the go

Always be the first to hear from the PM. Get the App Now!
...
PM chairs valedictory session of National Departmental Summit on Water
September 02, 2026
This marks the first in a series of Summits envisioned by PM to strengthen spirit of Team India and deepen cooperative federalism
PM stresses adoption of a continuous process of review and follow up to act on actionable and time-bound outcomes
Emphasising Jan Bhagidari, PM calls for promoting Jal Utsav to deepen public awareness on water conservation
PM calls for greater adoption of water-saving technologies and learning from global best practices
PM calls for robust water data governance through effective use of AI
PM suggests structured inter-State Study-visits involving public representatives, officials and farmers on water related issues

Prime Minister Shri Narendra Modi today chaired the valedictory session of the two-day National Departmental Summit on Water, organised by the Ministry of Jal Shakti. The Summit is the first in a series of Departmental Summits envisioned by Prime Minister to strengthen the spirit of Team India, deepen cooperative federalism and foster collective ownership of national priorities through closer collaboration between the Centre and the States. It brought together Ministers and senior officials from States and Union Territories for focused deliberations on various dimensions of India’s water security.

Prime Minister appreciated the intensive two-day deliberations and emphasised that the actionable and time-bound action points emerging from the Summit should be pursued through a continuous process of review and learning. He suggested that the Summit should not remain a one-time exercise and called for a continuous process of review and follow-up.

Prime Minister called for sensitising Urban Local Bodies to the challenges arising from urbanisation, including population growth and future water requirements, and suggested organising similar Chintan Shivirs for Urban Local Bodies. He called for greater adoption of water-saving technologies. He also suggested dedicated exhibitions and workshops, including exposure to global best practices, to enable Indian manufacturers and stakeholders to develop and scale efficient solutions.

Emphasising Jan Bhagidari, Prime Minister suggested promoting “Jal Utsav” to create greater awareness among people. Prime Minister called for making de-silting a regular programme and developing clear criteria and SOPs for de-silting. On dam safety, he stressed rigorous preparedness before every monsoon, adherence to prescribed precautions and creating awareness among school students, including through suitable incorporation in educational curricula.

Prime Minister further called for strengthening knowledge and capacity on water management and governance in universities and higher educational institutions. He suggested structured inter-State study-visits involving public representatives, officials and farmers to facilitate practical learning and replication of successful interventions.

Prime Minister called for robust water data governance, with water-sector data brought together, systematically managed, analysed and effectively utilised. He recommended the use of AI for data collection and analysis through a uniform format. He also stressed anticipatory and integrated planning to address water scarcity through suitable utilisation of treated water for agriculture and industrial purposes.

Drawing upon his experience as Chief Minister of Gujarat, Prime Minister noted that instances of water scarcity could be transformed into opportunities through systematic planning, commitment and deployment of adequate resources and capable officers.

Union Minister for Jal Shakti Shri C. R. Patil highlighted four key outcomes of the summit: accelerated completion of water infrastructure projects; strengthening water conservation as a sustained people’s movement; ensuring long-term sustainability of drinking-water sources; and institutionalising effective operation and maintenance of rural drinking-water schemes.