ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಆಕ್ಲೆಂಡ್‌ನ ಸರ್ಕಾರಿ ಭವನದಲ್ಲಿಂದು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸರ್ಕಾರಿ ಭವನಕ್ಕೆ ಆಗಮಿಸಿದಾಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಮಾವೊರಿ ಸ್ವಾಗತ ನೀಡಲಾಯಿತು. ಸಮಾರಂಭದಲ್ಲಿ ಶಾಂತಿ, ಗೌರವ ಮತ್ತು ಸ್ವಾಗತವನ್ನು ಸಂಕೇತಿಸುವ ಸಾಂಪ್ರದಾಯಿಕ ಮಾವೊರಿ ಆಚರಣೆಗಳು ಒಳಗೊಂಡಿದ್ದವು. ಸಾಂಪ್ರದಾಯಿಕ ಸ್ವಾಗತದ ನಂತರ, ಪ್ರಧಾನಮಂತ್ರಿಯವರು ಗೌರವ ರಕ್ಷೆ (ಗಾರ್ಡ್ ಆಫ್ ಆನರ್ ) ಸ್ವೀಕರಿಸಿದರು.

 

ಉಭಯ ಪ್ರಧಾನಮಂತ್ರಿಗಳು ನಿರ್ದಿಷ್ಟ ಮತ್ತು ನಿಯೋಗ ಮಟ್ಟದ ಸ್ವರೂಪಗಳಲ್ಲಿ ವ್ಯಾಪಕವಾದ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು. ಅವರ ಮಾತುಕತೆಗಳು ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಕೃಷಿ-ತಂತ್ರಜ್ಞಾನ, ಕ್ರೀಡೆ, ಶಿಕ್ಷಣ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಆಯಾಮಗಳನ್ನು ಒಳಗೊಂಡಿತ್ತು. ಭಾರತ-ನ್ಯೂಜಿಲೆಂಡ್ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಗುರುತಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಪರಸ್ಪರ ಆಸಕ್ತಿಯ ವಲಯಗಳಲ್ಲಿ ಸಹಕಾರವನ್ನು ವೃದ್ಧಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದದ ಆರಂಭಿಕ ಅನುಷ್ಠಾನದ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ನಿಗದಿಪಡಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ನಾಯಕರು ವಿಚಾರ ವಿನಿಮಯ ಮಾಡಿಕೊಂಡರು ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

 

ಮಾತುಕತೆಯ ನಂತರ ಇಬ್ಬರೂ ಪ್ರಧಾನಮಂತ್ರಿಗಳು, ರಕ್ಷಣೆ ಮತ್ತು ಸಾಗರ ಭದ್ರತೆ, ಜಲವಿಜ್ಞಾನ, ಕ್ರೀಡೆ, ವಿಪತ್ತು ನಿರ್ವಹಣೆ, ಡೈರಿ, ಪ್ರವಾಸೋದ್ಯಮ, ಸಾಗರ ಪರಂಪರೆ, ಸಂಸ್ಕೃತಿ, ಆಹಾರ ತಂತ್ರಜ್ಞಾನ ಮತ್ತು ಸಾಗರ ಸಂಶೋಧನೆ ಕ್ಷೇತ್ರಗಳಲ್ಲಿ ಹಲವಾರು ತಿಳಿವಳಿಕೆ ಒಪ್ಪಂದಗಳು (ಎಂಒಯುಗಳು) ಮತ್ತು ತಿಳಿವಳಿಕೆಗಳ ವಿನಿಮಯಕ್ಕೆ ಸಾಕ್ಷಿಯಾದರು. ಫಲಿತಾಂಶಗಳ ಪಟ್ಟಿಯನ್ನು ಇಲ್ಲಿ ಕಾಣಬಹುದು[link]. ದ್ವಿಪಕ್ಷೀಯ ಪಾಲುದಾರಿಕೆಯ ಮುಂದಿನ ಹಾದಿಯ ಕುರಿತು ಜಂಟಿ ಹೇಳಿಕೆಯನ್ನು ಇಬ್ಬರು ನಾಯಕರು ಅಂಗೀಕರಿಸಿದರು[Link].

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ಲಕ್ಸನ್ ಅವರ ಆತ್ಮೀಯತೆ ಮತ್ತು ಆತಿಥ್ಯಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಅವರಿಗೆ ಆಹ್ವಾನ ನೀಡಿದರು.

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI completes 10 years, clocks nearly 13,000-fold rise in transaction volume

Media Coverage

UPI completes 10 years, clocks nearly 13,000-fold rise in transaction volume
NM on the go

Nm on the go

Always be the first to hear from the PM. Get the App Now!
...
Prime Minister invites citizens to share their UPI experiences as UPI completes a decade
August 25, 2026

The Prime Minister, Shri Narendra Modi recalled the transformative journey of the Unified Payments Interface (UPI), which was rolled out a decade ago and marked a major turning point in India’s digital payments journey.

Highlighting the scale and reach achieved by UPI over the past ten years, Shri Modi said that its remarkable journey is something every Indian can be proud of. The Prime Minister invited citizens to share their experiences of using UPI and how it has impacted their daily lives.

The Prime Minister posted on X:

A decade ago, UPI was rolled out, marking a major turning point in India’s digital payments journey.

The sheer scale and reach of UPI are something every Indian must be proud of.

Tell me about your UPI experience and how it impacted your life...

#10YearsOfUPI