ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೋವಾದ ಜನತೆಗೆ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯ ಕೋರಿದ್ದಾರೆ. "ಗೋವಾದ ವಿಶಿಷ್ಟ ಸಂಸ್ಕೃತಿಯು ಭಾರತದ ಹೆಮ್ಮೆ. ಗೋವಾದ ಜನರು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಛಾಪು ಮೂಡಿಸಿದ್ದಾರೆ. ಈ ರಾಜ್ಯ ಯಾವಾಗಲೂ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತಿದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಗೋವಾದ ನನ್ನ ಸಹೋದರ ಸಹೋದರಿಯರಿಗೆ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು. ಗೋವಾದ ವಿಶಿಷ್ಟ ಸಂಸ್ಕೃತಿಯು ಭಾರತದ ಹೆಮ್ಮೆ. ಗೋವಾದ ಜನರು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಛಾಪು ಮೂಡಿಸಿದ್ದಾರೆ. ಈ ರಾಜ್ಯ ಸದಾ ಕಾಲವೂ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸಿದೆ. ಕಳೆದ ದಶಕದಲ್ಲಿ, ಗೋವಾದ ಪ್ರಗತಿಗೆ ಪೂರಕವಾಗುವ ಕೆಲಸಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯ ಹೊಸ ಎತ್ತರಕ್ಕೇರುವುದು ಮುಂದುವರಿಯಲಿ."
Greetings to my sisters and brothers of Goa on the occasion of their Statehood Day. Goa's unique culture is India's pride. Goan people have made a strong mark in diverse sectors. This state has always been drawing people from all over the world. Over the last decade, a lot of…
— Narendra Modi (@narendramodi) May 30, 2025


