ಇಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. "ಸೃಷ್ಟಿಯ ಶಿಲ್ಪಿಯ ವಿಶೇಷ ಪೂಜೆಯ ಈ ಪವಿತ್ರ ಸಂದರ್ಭದಲ್ಲಿ, ಹೊಸ ಸೃಷ್ಟಿಯಲ್ಲಿ ತೊಡಗಿರುವ ಎಲ್ಲಾ ಕರ್ಮಯೋಗಿಗಳಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು,
"ದೇಶದ ನನ್ನ ಕುಟುಂಬ ಸದಸ್ಯರಿಗೆ ಭಗವಾನ್ ವಿಶ್ವಕರ್ಮ ಜಯಂತಿಯಂದು ಹೃತ್ಪೂರ್ವಕ ಶುಭಾಶಯಗಳು. ಬ್ರಹ್ಮಾಂಡದ ಶಿಲ್ಪಿಯ ವಿಶೇಷ ಪೂಜೆಯ ಈ ಶುಭ ಸಂದರ್ಭದಲ್ಲಿ, ಹೊಸ ಸೃಷ್ಟಿಯಲ್ಲಿ ತೊಡಗಿರುವ ಎಲ್ಲಾ ಕರ್ಮಯೋಗಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಬಲಿಷ್ಠ, ಸಮೃದ್ಧ ಮತ್ತು ಸಮರ್ಥ ಭಾರತವನ್ನು ನಿರ್ಮಿಸುವಲ್ಲಿ ನಿಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮ ಬಹಳ ಮೌಲ್ಯಯುತವಾಗಿದೆ." ಎಂದು ಹೇಳಿದ್ದಾರೆ.
देशभर के अपने परिवारजनों को भगवान विश्वकर्मा जयंती की हार्दिक शुभकामनाएं। सृष्टि के शिल्पकार की विशेष आराधना के इस पावन अवसर पर नवसृजन में जुटे सभी कर्मयोगियों को मेरा हृदय से अभिनंदन। आपकी प्रतिभा और परिश्रम सशक्त, समृद्ध और समर्थ भारतवर्ष के निर्माण में बहुत मूल्यवान है।
— Narendra Modi (@narendramodi) September 17, 2025


