ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ಕಾವಲು ಪಡೆಯ ಸಂಸ್ಥಾಪನಾ ದಿನದಂದು ಅದರ ಎಲ್ಲಾ ಶ್ರೇಣಿಗಳಿಗೆ ಶುಭಾಶಯ ಕೋರಿದ್ದಾರೆ. ಭಾರತೀಯ ಕರಾವಳಿ ಕಾವಲು ಪಡೆ ನಮ್ಮ ತೀರಗಳಲ್ಲಿ ಸ್ಥಿರವಾದ ರಕ್ಷಣಾಕವಚವಾಗಿ ನಿಂತು ಛಾಪು ಮೂಡಿಸಿದೆ ಮತ್ತು ಕಡಲ ಭದ್ರತೆ, ತ್ವರಿತ ವಿಪತ್ತು ಪ್ರತಿಕ್ರಿಯೆ ಮತ್ತು ನಮ್ಮ ಸಾಗರ ಪರಿಸರ ವ್ಯವಸ್ಥೆಯ ರಕ್ಷಣೆಗೆ ಅವರ ಅಚಲ ಬದ್ಧತೆ ಶ್ಲಾಘನೀಯ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ:
"ಭಾರತೀಯ ಕರಾವಳಿ ಕಾವಲು ಪಡೆಯ ಸಂಸ್ಥಾಪನಾ ದಿನದಂದು, ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಶುಭಾಶಯಗಳು. ಅವರು ನಮ್ಮ ತೀರದ ಉದ್ದಕ್ಕೂ ಸ್ಥಿರವಾದ ರಕ್ಷಣಾಕವಚವಾಗಿ ನಿಂತು ಛಾಪು ಮೂಡಿಸಿದ್ದಾರೆ. ಕಡಲ ಭದ್ರತೆ, ತ್ವರಿತ ವಿಪತ್ತು ಪ್ರತಿಕ್ರಿಯೆ ಮತ್ತು ನಮ್ಮ ಸಾಗರ ಪರಿಸರ ವ್ಯವಸ್ಥೆಯ ರಕ್ಷಣೆಗೆ ಅವರ ಅಚಲ ಬದ್ಧತೆ ಶ್ಲಾಘನೀಯವಾಗಿದೆ."
@IndiaCoastGuard
On their Raising Day, greetings to all the ranks of the Indian Coast Guard. They have made a mark for standing as a steadfast shield along our shores. Their unwavering commitment to maritime security, swift disaster response and protection of our marine ecosystem is commendable.… pic.twitter.com/3RwutmiWgW
— Narendra Modi (@narendramodi) February 1, 2026


