ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಂಜಿನಿಯರ್ ದಿನದ ಅಂಗವಾಗಿ ಎಲ್ಲ ಶ್ರಮಶೀಲ ಎಂಜಿನಿಯರ್‌ಗಳಿಗೆ ಶುಭ ಕೋರಿದ್ದಾರೆ. ಅಲ್ಲದೆ, ಅವರು ಸರ್ .ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದರು ಮತ್ತು ಅವರ ಸಾಧನೆಗಳನ್ನು ಸ್ಮರಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಎಲ್ಲ ಶ್ರಮಜೀವಿ ಎಂಜಿನಿಯರ್‌ಗಳಿಗೆ ಎಂಜಿನಿಯರ್ ದಿನದ ಶುಭಾಶಯಗಳು. ನಮ್ಮ ಭೂ ಗ್ರಹವನ್ನು ಉತ್ತಮಗೊಳಿಸುವಲ್ಲಿ ಮತ್ತು ತಾಂತ್ರಿಕವಾಗಿ ಮುನ್ನಡೆಸುವಲ್ಲಿ ಅವರು ವಹಿಸಿದ ಮಹತ್ವದ ಪಾತ್ರಕ್ಕಾಗಿ ಧನ್ಯವಾದಗಳನ್ನು ಹೇಳಲು ಪದಗಳೇ ಇಲ್ಲ. ಶ್ರೀ ಎಂ.ವಿಶ್ವೇಶ್ವರಯ್ಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಮತ್ತು ಅವರ ಸಾಧನೆಗಳನ್ನು ಸ್ಮರಿಸುತ್ತೇನೆ.” ಎಂದು ಹೇಳಿದ್ದಾರೆ.
Greetings on #EngineersDay to all hardworking engineers. No words are enough to thank them for their pivotal role in making our planet better and technologically advanced. I pay homage to the remarkable Shri M. Visvesvaraya on his birth anniversary and recall his accomplishments.
— Narendra Modi (@narendramodi) September 15, 2021


