ಲಕ್ನೋವನ್ನು ಯುನೆಸ್ಕೋದ ಕ್ರಿಯೇಟಿವ್ ಸಿಟಿ ಆಫ್ ಗ್ಯಾಸ್ಟ್ರೊನಮಿ ಎಂದು ಹೆಸರಿಸಿದ್ದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಲಕ್ನೋ ಒಂದು ರೋಮಾಂಚಕ ಸಂಸ್ಕೃತಿಯ ಪ್ರತೀಕವಾಗಿದ್ದು, ಅದು ಶ್ರೀಮಂತ ಪಾಕಶಾಲೆಯ ಸಂಪ್ರದಾಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ಯುನೆಸ್ಕೋದ ಮನ್ನಣೆಯು ಲಕ್ನೋ ನಗರದ ಈ ವಿಶಿಷ್ಟ ಅಂಶವನ್ನು ಎತ್ತಿ ತೋರಿಸುತ್ತದೆ. ಪ್ರಪಂಚದಾದ್ಯಂತದ ಜನರು ಲಕ್ನೋಗೆ ಭೇಟಿ ನೀಡಿ ಅದರ ಅನನ್ಯತೆಯನ್ನು ಅನುಭವಿಸುವಂತೆ ಕರೆ ನೀಡಿದ್ದಾರೆ.
ಈ ಬೆಳವಣಿಗೆಯ ಕುರಿತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು, Xನಲ್ಲಿ;
“ಲಕ್ನೋ ಒಂದು ರೋಮಾಂಚಕ ಸಂಸ್ಕೃತಿಯ ಪ್ರತೀಕವಾಗಿದೆ. ಅದಕ್ಕೆ ಒಂದು ಪಾಕಶಾಲೆಯ ಸಂಸ್ಕೃತಿ ಇದೆ. ಯುನೆಸ್ಕೋ ಲಕ್ನೋದ ಈ ಅಂಶವನ್ನು ಗುರುತಿಸಿದೆ ಎಂದು ನನಗೆ ಸಂತೋಷವಾಗಿದೆ. ಪ್ರಪಂಚದಾದ್ಯಂತದ ಜನರು ಲಕ್ನೋಗೆ ಭೇಟಿ ನೀಡಿ ಅದರ ಅನನ್ಯತೆಯನ್ನು ಅನುಭವಿಸುವಂತೆ ನಾನು ಕರೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
Lucknow is synonymous with a vibrant culture, at the core of which is a great culinary culture. I am glad that UNESCO has recognised this aspect of Lucknow and I call upon people from around the world to visit Lucknow and discover its uniqueness. https://t.co/30wles8VyN
— Narendra Modi (@narendramodi) November 1, 2025


