ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಿ.ಎಂ.ಎ ಸಿ.ಜಿ.ಎಂ (CMA CGM) ನ ಅಧ್ಯಕ್ಷರಾದ ಶ್ರೀ ರೊಡಾಲ್ಫ್ ಸಾದೇ ಅವರೊಂದಿಗೆ ಕಡಲ ಸಂಪರ್ಕ, ಜಾಗತಿಕ ಹಡಗು ಪ್ರವೃತ್ತಿಗಳು ಮತ್ತು ಭಾರತದ ವೇಗವಾಗಿ ಬೆಳೆಯುತ್ತಿರುವ ಕಡಲ ವಲಯದಲ್ಲಿ ಉದಯೋನ್ಮುಖ ಅವಕಾಶಗಳ ಕುರಿತು ಫಲಪ್ರದ ಚರ್ಚೆ ನಡೆಸಿದರು.
ಹಡಗು ನಿರ್ಮಾಣ, ಕಂಟೇನರ್ ತಯಾರಿಕೆ, ಡಿಜಿಟಲ್ ಕಡಲ ನಾವೀನ್ಯತೆ, ಸಾಗಣೆ (ಲಾಜಿಸ್ಟಿಕ್ಸ್) ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಹೆಚ್ಚಿನ ಸಹಯೋಗಕ್ಕಾಗಿ ಮಾರ್ಗಗಳ ಕುರಿತು ಚರ್ಚಿಸಲಾಯಿತು ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.
ಭಾರತದ ವಿಸ್ತರಿಸುತ್ತಿರುವ ಬಂದರು ಮೂಲಸೌಕರ್ಯವು ಜಾಗತಿಕ ಕಡಲ ನಾಯಕರಿಗೆ ಭರವಸೆಯ ಅವಕಾಶಗಳನ್ನು ತೆರೆದಿದೆ ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದ್ದಾರೆ.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ನಲ್ಲಿ ಹೀಗೆ ಹೇಳಿದ್ದಾರೆ:
"ಭಾರತದ ಕ್ಷಿಪ್ರ ಬೆಳವಣಿಗೆಯ ಕಡಲ ವಲಯದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳು, ಜಾಗತಿಕ ನೌಕಾಯಾನ ಪ್ರವೃತ್ತಿಗಳು ಮತ್ತು ಕಡಲ ಸಂಪರ್ಕ ಕುರಿತು ಸಿ.ಎಂ.ಎ ಸಿ.ಜಿ.ಎಂ.ನ ಶ್ರೀ ರೊಡಾಲ್ಫ್ ಸಾದೆ ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದೆ.
ಹಡಗು ನಿರ್ಮಾಣ, ಕಂಟೇನರ್ ತಯಾರಿಕೆ, ಡಿಜಿಟಲ್ ಕಡಲ ನಾವೀನ್ಯತೆ, ಸಾಗಣೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಹೆಚ್ಚಿನ ಸಹಯೋಗಕ್ಕಾಗಿ ಮಾರ್ಗಗಳ ಬಗ್ಗೆ ಚರ್ಚಿಸಿದೆವು.
ಭಾರತದ ವಿಸ್ತರಿಸುತ್ತಿರುವ ಬಂದರು ಮೂಲಸೌಕರ್ಯವು ಜಾಗತಿಕ ಕಡಲ ನಾಯಕರಿಗೆ ಭರವಸೆಯ ಅವಕಾಶಗಳನ್ನು ನೀಡಿದೆ.
@cmacgm"
Had a fruitful discussion with Mr. Rodolphe Saadé of CMA CGM on maritime connectivity, global shipping trends and emerging opportunities in India’s rapidly growing maritime sector.
— Narendra Modi (@narendramodi) June 18, 2026
Discussed avenues for greater collaboration in shipbuilding, container manufacturing, digital… pic.twitter.com/k3vrCH3IiD


