ಮಣಿಪುರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಯುಮ್ನಾಮ್ ಖೇಮ್‌ ಚಂದ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀಮತಿ ನೆಮ್ಚಾ ಕಿಪ್ಗೆನ್ ಮತ್ತು ಶ್ರೀ ಲೋಸಿ ದಿಖೋ ಅವರಿಗೂ ಪ್ರಧಾನಮಂತ್ರಿ ಶುಭ ಕೋರಿದ್ದಾರೆ. ಮಣಿಪುರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಕೊಂಥೌಜಮ್ ಗೋವಿಂದಾಸ್ ಸಿಂಗ್ ಮತ್ತು ಶ್ರೀ ಖುರೈಜಮ್ ಲೋಕೆನ್ ಸಿಂಗ್ ಅವರನ್ನು ಸಹ ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ.

ಮಣಿಪುರದ ಸಹೋದರ ಸಹೋದರಿಯರ ಅಭಿವೃದ್ಧಿ ಮತ್ತು ಸಮೃದ್ಧಿ ವರ್ಧನೆಗೆ ಇವರು ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ನೂತನ ನಾಯಕತ್ವಲ್ಲಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಮಣಿಪುರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಶ್ರೀ ಯುಮ್ನಾಮ್ ಖೇಮ್‌ ಚಂದ್ ಸಿಂಗ್ ಅವರಿಗೆ ಅಭಿನಂದನೆಗಳು.

ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀಮತಿ ನೆಮ್ಚಾ ಕಿಪ್ಗೆನ್ ಮತ್ತು ಶ್ರೀ ಲೋಸಿ ದಿಖೋ ಹಾಗೂ ಮಣಿಪುರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಕೊಂಥೌಜಮ್ ಗೋವಿಂದಾಸ್ ಸಿಂಗ್ ಮತ್ತು ಶ್ರೀ ಖುರೈಜಮ್ ಲೋಕೆನ್ ಸಿಂಗ್ ಅವರಿಗೆ ನನ್ನ ಅಭಿನಂದನೆಗಳು.

ಮಣಿಪುರದ ನನ್ನ ಸಹೋದರ ಸಹೋದರಿಯರ ಅಭಿವೃದ್ಧಿ ಮುನ್ನಡೆಸಲು ಮತ್ತು ಸಮೃದ್ಧಿಗಾಗಿ ನೂತನ ನಾಯಕರು ಶ್ರದ್ಧೆಯಿಂದ ಕಾರ್ಯನಿರ್ವಹಿಸುವರು ಎಂದು ನನಗೆ ವಿಶ್ವಾಸವಿದೆ.”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Water conservation in India: The community as custodian

Media Coverage

Water conservation in India: The community as custodian
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಮಾರ್ಚ್ 2026
March 21, 2026

Empowering Bharat Holistically: Health, Finance, Heritage & Export Growth Under the Leadership of PM Modi