ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಶಾಟ್ ಪುಟ್-ಎಫ್ 552 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮುತ್ತುರಾಜ ಅವರನ್ನು ಅಭಿನಂದಿಸಿದರು.
ಮುತ್ತುರಾಜ ಅವರ ಶಕ್ತಿ ಮತ್ತು ಸಂಕಲ್ಪವು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಭೆಯನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.
ಈ ಕುರಿತು ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
"ಪುರುಷರ ಶಾಟ್ ಪುಟ್-ಎಫ್ 55 ಸ್ಪರ್ಧೆಯಲ್ಲಿ ಗಮನಾರ್ಹ ಕಂಚಿನ ಪದಕ ಗೆದ್ದ ಮುತ್ತುರಾಜ ಅವರಿಗೆ ಅಭಿನಂದನೆಗಳು. ಅವರ ಶಕ್ತಿ ಮತ್ತು ದೃಢನಿಶ್ಚಯವು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಭೆಯನ್ನು ಪ್ರದರ್ಶಿಸಲು ಕಾರಣವಾಗಿದೆ. ಈ ಗೆಲುವು ಇತರರನ್ನು ಉತ್ಕೃಷ್ಟತೆಯನ್ನು ಮುಂದುವರಿಸಲು ಪ್ರೇರೇಪಿಸಲಿ ಮತ್ತು ಅವರ ಕನಸುಗಳನ್ನು ಎಂದಿಗೂ ಕೈಬಿಡದಿರಲಿ,’’ ಎಂದಿದ್ದಾರೆ.
Congratulations to Muthuraja for his remarkable Bronze in Men's Shot Put-F55 event. His strength and determination have led to showcasing of India's talent on the global stage. May this victory motivate others pursue excellence and never give up on their dreams. pic.twitter.com/Sl2lRg6YJl
— Narendra Modi (@narendramodi) October 26, 2023


