2022ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 125 ಕೆಜಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಮೋಹಿತ್ ಗ್ರೆವಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಅವರು ಟ್ವೀಟ್ ಮಾಡಿದ್ದಾರೆ.ಅದರಲ್ಲಿ
"ನಮ್ಮ ಕುಸ್ತಿಪಟುಗಳು ಅದ್ಭುತ ಫಾರ್ಮ್ ತೋರಿದ್ದಾರೆ. ಪದಕಗಳ ಪಟ್ಟಿಗೆ ಮೋಹಿತ್ ಗ್ರೆವಾಲ್ ಸೇರಿದ್ದಾರೆ. ಅವರು ಕಂಚಿನ ಪದಕವನ್ನು ಗೆದ್ದಿರುವುದರ ಹಿಂದೆ ಅವರ ತೀಕ್ಷ್ಣ ಗಮನದ ಪರಿಶ್ರಮ ಎದ್ದು ಕಾಣುತ್ತದೆ. ಅವರಿಗೆ ಅಭಿನಂದನೆಗಳು. ಅವರು ಮುಂದಿನ ದಿನಗಳಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಏರುತ್ತಾರೆ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.
Incredible form demonstrated by our wrestlers. Adding to the medals tally is Mohit Grewal. His sharp focus stands out as he brings home a Bronze medal. Congratulations to him. I hope he scales new heights of success in the times to come. pic.twitter.com/IPirqSvCLx
— Narendra Modi (@narendramodi) August 6, 2022


