ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ 2025 ರಲ್ಲಿ 57 ಕೆಜಿ ತೂಕ ವಿಭಾಗದಲ್ಲಿ ಅದ್ಭುತ ರೀತಿಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಭಾರತೀಯ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಎಕ್ಸ್ ತಾಣದ ಖಾತೆಯಲ್ಲಿ ಮಾಡಿದ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ 2025ರಲ್ಲಿ 57 ಕೆಜಿ ತೂಕ ವಿಭಾಗದಲ್ಲಿ ಜಯ ಸಾಧಿಸಿದ್ದಕ್ಕಾಗಿ @BoxerJaismine ಅವರಿಗೆ ಹಾರ್ದಿಕ ಅಭಿನಂದನೆಗಳು! ಅವರ ಅದ್ಭುತ ಕ್ರೀಡಾ ಪ್ರದರ್ಶನವು ಮುಂಬರುವ ದಿನಗಳಲ್ಲಿ ಅಸಂಖ್ಯಾತ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು.”
Congratulations to @BoxerJaismine for her triumph at the World Boxing Championships 2025 in the 57kg weight category! Her stupendous performance will inspire countless athletes in the times to come. Best wishes for her future endeavours. pic.twitter.com/l2AeeSRL1M
— Narendra Modi (@narendramodi) September 14, 2025


