ಸಿ ಬಿ ಎಸ್ ಇ 12ನೇ ಮತ್ತು 10ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ. "ಇದು ನಿಮ್ಮ ದೃಢನಿಶ್ಚಯ, ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಇಂದು ಈ ಸಾಧನೆಗೆ ಕಾರಣರಾದ ಪೋಷಕರು, ಶಿಕ್ಷಕರು ಮತ್ತು ಇತರರ ಪಾತ್ರವನ್ನು ಶ್ಲಾಘಿಸುವ ದಿನವಾಗಿದೆ" ಎಂದು ಶ್ರೀ ಮೋದಿ ಹೇಳಿದ್ದಾರೆ.
“ತಮ್ಮ ಅಂಕಗಳ ಬಗ್ಗೆ ಸ್ವಲ್ಪ ನಿರಾಶೆಗೊಂಡವರಿಗೆ, ನಾನು ಹೇಳಬಯಸುವುದೇನೆಂದರೆ: ಒಂದು ಪರೀಕ್ಷೆಯು ನಿಮ್ಮನ್ನು ಎಂದಿಗೂ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಪ್ರಯಾಣವು ತುಂಬಾ ದೊಡ್ಡದಿದೆ ಮತ್ತು ನಿಮ್ಮ ಸಾಮರ್ಥ್ಯಗಳು ಅಂಕಪಟ್ಟಿಯನ್ನು ಮೀರಿವೆ. ಆತ್ಮವಿಶ್ವಾಸದಿಂದಿರಿ, ಕುತೂಹಲದಿಂದಿರಿ, ಏಕೆಂದರೆ ದೊಡ್ಡ ವಿಷಯಗಳು ನಿಮಗಾಗಿ ಕಾಯುತ್ತಿವೆ." ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಮಂತ್ರಿಯವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ;
ಆತ್ಮೀಯ #ExamWarriors,
ಸಿ ಬಿ ಎಸ್ ಇ 12ನೇ ಮತ್ತು 10ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು! ಇದು ನಿಮ್ಮ ದೃಢನಿಶ್ಚಯ, ಶಿಸ್ತು ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಇಂದು ಈ ಸಾಧನೆಗೆ ಕಾರಣರಾದ ಪೋಷಕರು, ಶಿಕ್ಷಕರು ಮತ್ತು ಇತರರ ಪಾತ್ರವನ್ನು ಶ್ಲಾಘಿಸುವ ದಿನವಾಗಿದೆ.
ಪರೀಕ್ಷಾ ಯೋಧರು ಮುಂದಿನ ತಮ್ಮ ಎಲ್ಲಾ ಅವಕಾಶಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ!
Dear #ExamWarriors,
— Narendra Modi (@narendramodi) May 13, 2025
Heartiest congratulations to everyone who has cleared the CBSE Class XII and X examinations! This is the outcome of your determination, discipline and hard work. Today is also a day to acknowledge the role played by parents, teachers and all others who have…
ತಮ್ಮ ಅಂಕಗಳ ಬಗ್ಗೆ ಸ್ವಲ್ಪ ನಿರಾಶೆಗೊಂಡವರಿಗೆ, ನಾನು ಹೇಳಬಯಸುವುದೇನೆಂದರೆ: ಒಂದು ಪರೀಕ್ಷೆಯು ನಿಮ್ಮನ್ನು ಎಂದಿಗೂ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಪ್ರಯಾಣವು ತುಂಬಾ ದೊಡ್ಡದಿದೆ ಮತ್ತು ನಿಮ್ಮ ಸಾಮರ್ಥ್ಯಗಳು ಅಂಕಪಟ್ಟಿಯನ್ನು ಮೀರಿವೆ. ಆತ್ಮವಿಶ್ವಾಸದಿಂದಿರಿ, ಕುತೂಹಲದಿಂದಿರಿ, ಏಕೆಂದರೆ ದೊಡ್ಡ ವಿಷಯಗಳು ನಿಮಗಾಗಿ ಕಾಯುತ್ತಿವೆ. #ExamWarriors
To those who feel slightly dejected at their scores, I want to tell them: one exam can never define you. Your journey is much bigger and your strengths go far beyond the mark sheet. Stay confident, stay curious because great things await. #ExamWarriors
— Narendra Modi (@narendramodi) May 13, 2025