ಶಿಲ್ಲಾಂಗ್‌ನ ಲೋಕಸಭಾ ಸದಸ್ಯರಾದ ಡಾ. ರಿಕ್ಕಿ ಎ.ಜೆ. ಸಿಂಗ್‌ಕಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಶ್ರೀ ಮೋದಿಯವರು ಹೀಗೆ ಬರೆದುಕೊಂಡಿದ್ದಾರೆ:
''ಶಿಲ್ಲಾಂಗ್‌ನ ಲೋಕಸಭಾ ಸಂಸದರಾದ ಡಾ. ರಿಕ್ಕಿ ಎ.ಜೆ. ಸಿಂಗ್‌ಕಾನ್ ಅವರ ನಿಧನದಿಂದ ದುಃಖವಾಗಿದೆ. ಮೇಘಾಲಯದ ಜನರಿಗೆ ಸಲ್ಲಿಸಿದ ಅವರ ಸಮರ್ಪಿತ ಸೇವೆಯಿಂದ ಅವರು ಸದಾ ಸ್ಮರಣೀಯರಾಗುತ್ತಾರೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರು, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ.”
Saddened by the passing of Lok Sabha MP from Shillong, Dr. Ricky AJ Syngkon. He will be remembered for his dedicated service to the people of Meghalaya. My thoughts are with his family, friends and supporters during this difficult time. May his soul rest in peace.
— Narendra Modi (@narendramodi) February 20, 2026


