ದಿತ್ವಾ ಚಂಡಮಾರುತದಿಂದ ಉಂಟಾದ ವಿನಾಶದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ. ಎಲ್ಲಾ ದಿತ್ವಾ ಚಂಡಮಾರುತದಿಂದ ಪೀಡಿತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ಅವರು ಪ್ರಾರ್ಥಿಸಿದ್ದಾರೆ.
ಭಾರತದ ಸನಿಹದ ಕಡಲ ನೆರೆಯ ರಾಷ್ಟ್ರದೊಂದಿಗೆ ಒಗ್ಗಟ್ಟಿನ ಬಲವಾದ ಸೂಚನೆಯಾಗಿ, ಭಾರತ ಸರ್ಕಾರವು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಹೆಚ್.ಎ.ಡಿ.ಆರ್.) ಬೆಂಬಲವನ್ನು ತುರ್ತಾಗಿ ಈಗಾಗಲೇ ರವಾನಿಸಿದೆ. ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದಂತೆ ಹೆಚ್ಚುವರಿ ನೆರವು ಮತ್ತು ಸಹಾಯವನ್ನು ಒದಗಿಸಲು ಭಾರತ ಸಿದ್ಧವಾಗಿದೆ.
ಭಾರತದ “ನೆರೆಹೊರೆಯವರು ಮೊದಲು ನೀತಿ” ಹಾಗೂ “ಮಹಾಸಾಗರ ಯೋಜನೆ”ಯ ಪರಿಕಲ್ಪನೆಯ ದೃಷ್ಟಿಕೋನ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಶ್ರೀಲಂಕಾದ ಅತಿಅಗತ್ಯದ ಸಮಯದ ಸಂದರ್ಭದಲ್ಲಿ ಭಾರತವು ಜೊತೆಗೆ ದೃಢವಾಗಿ ನಿಲ್ಲುತ್ತದೆ” ಎಂದು ಪುನರುಚ್ಚರಿಸಿದರು.
ಎಕ್ಸ್ ತಾಣದ ಸಂದೇಶದಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ದಿತ್ವಾ ಚಂಡಮಾರುತದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಎಲ್ಲಾ ಪೀಡಿತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ.
ನಮ್ಮ ಹತ್ತಿರದ ಕಡಲ ನೆರೆಯವರೊಂದಿಗೆ ಒಗ್ಗಟ್ಟಿನಲ್ಲಿ, ಭಾರತವು “ಆಪರೇಷನ್ ಸಾಗರ್ ಬಂಧು ಯೋಜನೆ”ಯಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಹೆಚ್.ಎ.ಡಿ.ಆರ್.) ಬೆಂಬಲವನ್ನು ತುರ್ತಾಗಿ ರವಾನಿಸಿದೆ. ಪರಿಸ್ಥಿತಿ ಅನುಸಾರವಾಗಿ, ಅವಕಾಶ ವಿಕಸನಗೊಳ್ಳುತ್ತಿದ್ದಂತೆ ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ.
ಭಾರತದ “ನೆರೆಹೊರೆಯವರು ಮೊದಲು ನೀತಿ” ಹಾಗೂ “ಮಹಾಸಾಗರ ಯೋಜನೆ”ಯ ಪರಿಕಲ್ಪನೆಯ ದೃಷ್ಟಿಕೋನದಲ್ಲಿ ಭಾರತವು, ಶ್ರೀಲಂಕಾದ ಅಗತ್ಯದ ಸಂದಿಗ್ದ ಸಮಯದಲ್ಲಿ ಜೊತೆಯಲ್ಲಿ ದೃಢವಾಗಿ ನಿಲ್ಲುವುದನ್ನು ಮುಂದುವರೆಸುತ್ತದೆ.
@anuradisanayake”
My heartfelt condolences to the people of Sri Lanka who have lost their loved ones due to Cyclone Ditwah. I pray for the safety, comfort and swift recovery of all affected families.
— Narendra Modi (@narendramodi) November 28, 2025
In solidarity with our closest maritime neighbour, India has urgently dispatched relief…


