ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 23ರಂದು ಟೋಕಿಯೊದಲ್ಲಿಜಪಾನಿನ ವಾಣಿಜ್ಯ ನಾಯಕರೊಂದಿಗೆ ದುಂಡುಮೇಜಿನ ಸಭೆಯ ಅಧ್ಯಕ್ಷ ತೆ ವಹಿಸಿದ್ದರು.

ಜಪಾನಿನ 34 ಕಂಪನಿಗಳ ಉನ್ನತ ಕಾರ್ಯನಿರ್ವಾಹಕರು ಮತ್ತು ಸಿಐಒಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಂಪನಿಗಳಲ್ಲಿಹೆಚ್ಚಿನವು ಭಾರತದಲ್ಲಿಹೂಡಿಕೆ ಮತ್ತು ಕಾರ್ಯಾಚರಣೆಗಳನ್ನು ಹೊಂದಿದೆ. ಆಟೋಮೊಬೈಲ್, ಡಿಸೀಸ್, ಸೆಮಿಕಂಡಕ್ಟರ್, ಉಕ್ಕು, ತಂತ್ರಜ್ಞಾನ, ವ್ಯಾಪಾರ ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಸೇರಿದಂತೆ ವಿವಿಧ ವಲಯಗಳ ಕಂಪನಿಗಳು ಪ್ರತಿನಿಧಿಸುತ್ತವೆ. ಕೀಡಾನ್‌ರೆನ್‌, ಜಪಾನ್‌ ಬಾಹ್ಯ ವ್ಯಾಪಾರ ಸಂಸ್ಥೆ (ಜೆಟಿಆರ್‌ಒ), ಜಪಾನ್‌ ಇಂಟರ್‌ನ್ಯಾಶನಲ್‌ ಸಹಕಾರ ಸಂಸ್ಥೆ (ಜೆಐಸಿಎ), ಜಪಾನ್‌ ಬ್ಯಾಂಕ್‌ ಫಾರ್‌ ಇಂಟರ್‌ನ್ಯಾಷನಲ್‌ ಕೋಪರೇಶನ್‌ (ಜೆಬಿಐಸಿ), ಜಪಾನ್‌-ಇಂಡಿಯಾ ಬಿಸಿನೆಸ್‌ ಕನ್ಸಲ್ಟೇಟಿವ್‌ ಸಮಿತಿ (ಜೆಐಬಿಸಿ) ಮತ್ತು ಇನ್‌ವೆಸ್ಟ್‌ ಇಂಡಿಯಾದಂತಹ ಪ್ರಮುಖ ವಾಣಿಜ್ಯ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಭಾರತ ಮತ್ತು ಜಪಾನ್‌ ಸ್ವಾಭಾವಿಕ ಪಾಲುದಾರರು ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಭಾರತ-ಜಪಾನ್‌ ಬಾಂಧವ್ಯದ ಅಗಾಧ ಸಾಮರ್ಥ್ಯ‌ದ ಬ್ರಾಂಡ್‌ ಅಂಬಾಸಿಡರ್‌ಗಳಾಗಿ ವಾಣಿಜ್ಯ ಸಮುದಾಯವನ್ನು ಶ್ಲಾಘಿಸಿದರು. 2022ರ ಮಾರ್ಚ್‌ನಲ್ಲಿ ಪ್ರಧಾನಮಂತ್ರಿ ಕಿಶಿಡಾ ಅವರು ಭಾರತಕ್ಕೆ ಭೇಟಿ ನೀಡಿದಾಗ, ಮುಂದಿನ 5 ವರ್ಷಗಳಲ್ಲಿ ಜಪಾನಿನ ಯೆನ್ 5 ಟ್ರಿಲಿಯನ್ ಹೂಡಿಕೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಎರಡು ದೇಶಗಳಿಗೆ ನಿಗದಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ (ಐಜೆಐಸಿಪಿ) ಮತ್ತು ಇಂಧನ ಪಾಲುದಾರಿಕೆಯಂತಹ ಆರ್ಥಿಕ ಸಂಬಂಧಗಳ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಪಿ), ಪೊಡಕ್ಷನ್‌ ಲಿಂಕ್‌ಡಇನ್ಸೆಂಟಿವ್‌ (ಪಿಎಲ್‌ಐ) ಯೋಜನೆ ಮತ್ತು ಅರೆವಾಹಕ ನೀತಿಯಂತಹ ಉಪಕ್ರಮಗಳ ಬಗ್ಗೆ ಅವರು ಮತ್ತು ಭಾರತದ ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆ ಬಗ್ಗೆ ಬಂಬಿಸಿದರು.

ಜಾಗತಿಕ ಎಫ್‌ಡಿಐ ಮಂದಗತಿಯ, ಭಾರತವು ಹಿಂದಿನ ಹಣಕಾಸು ವರ್ಷದ ದಾಖಲೆಯ 84 ಶತಕೋಟಿ ಡಾಲರ್‌ ಎಫ್‌ಡಿಐಅನ್ನು ಆಕರ್ಷಿಸಿದೆ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಆರ್ಥಿಕ ಸಾಮರ್ಥ್ಯದ ವಿಶ್ವಾಸಮತ ಎಂದು ಅವರು ಬಣ್ಣಿಸಿದರು. ಭಾರತದಲ್ಲಿಜಪಾನಿನ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಆಹ್ವಾನಿಸಿದರು ಮತ್ತು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿಜಪಾನ್‌ನ ಕೊಡುಗೆಯನ್ನು ‘ಜಪಾನ್‌ ಸಪ್ತಾಹ’ದ ರೂಪದಲ್ಲಿ ಆಚರಿಸಲು ಪ್ರಸ್ತಾಪಿಸಿದರು.

ಈ ಕೆಳಗಿನ ವ್ಯವಹಾರ ನಾಯಕರು ಬಿಸಿನೆಸ್ ಫೋರಂನಲ್ಲಿ ಭಾಗವಹಿಸಿದ್ದರು:

ಹೆಸರು

ಪದನಾಮ

ಸಂಸ್ಥೆ

ಶ್ರೀ ಸೀಜಿ ಖುರೈಶಿ     

ಅಧ್ಯಕ್ಷ ರು ಮತ್ತು ನಿರ್ದೇಶಕರು    

ಹೋಂಡಾ ಮೋಟಾರ್‌ ಕಂಪನಿ, ಲಿ.    

ಶ್ರೀ ಮಾಕೊಟೊ ಉಚಿಡಾ    

ಪ್ರತಿನಿಧಿ ಕಾರ್ಯನಿರ್ವಾಹಕ ಅಧಿಕಾರಿ, ಅಧ್ಯಕ್ಷ ರು ಮತ್ತು ಸಿಇಒ    

ನಿಸ್ಸಾನ್‌ ಮೋಟಾರ್‌ ಕಾರ್ಪೊರೇಷನ್‌

ಶ್ರೀ ಅಕಿಯೊ ಟೊಯೊಡಾ        

ನಿರ್ದೇಶಕರ ಮಂಡಳಿಯ ಅಧ್ಯಕ್ಷ ರು ಮತ್ತು ಸದಸ್ಯರು    

ಟೊಯೊಟಾ ಮೋಟಾರ್‌ ಕಾರ್ಪೊರೇಷನ್‌

ಶ್ರೀ ಯೋಶಿಹಿರೋ ಹಿಡಾಕಾ     

ಅಧ್ಯಕ್ಷರು, ಸಿಇಒ ಮತ್ತು ಪ್ರಾತಿನಿಧಿಕ ನಿರ್ದೇಶಕರು      

ಯಮಹಾ ಮೋಟಾರ್‌ ಕಾರ್ಪೊರೇಷನ್‌

ಶ್ರೀ ತೋಶಿಹಿರೊ ಸುಜುಕಿ        

ಅಧ್ಯಕ್ಷರು ಮತ್ತು ಪ್ರತಿನಿಧಿ ನಿರ್ದೇಶಕರು     

ಸುಜುಕಿ ಮೋಟಾರ್‌ ಕಾರ್ಪೊರೇಷನ್‌

ಶ್ರೀ ಸೀಜಿ ಇಮೈ     

ಮಿಜುಹೊ ಫೈನಾನ್ಶಿಯಲ್‌ ಗ್ರೂಪ್‌ ನ ಅಧ್ಯಕ್ಷ     

ಮಿಜುಹೊ ಬ್ಯಾಂಕ್‌ ಲಿ.    

ಶ್ರೀ ಹಿರೋಕಿ ಫುಜಿಸು    

ಸಲಹೆಗಾರ, ಎಂಯುಎಫ್‌ಜಿ ಬ್ಯಾಂಕ್‌ ಲಿಮಿಟೆಡ್‌ ಮತ್ತು ಅಧ್ಯಕ್ಷ ರು ಜೆಐಬಿಸಿಸಿ         

ಎಂಯುಎಫ್‌ಜಿ ಬ್ಯಾಂಕ್‌ ಲಿಮಿಟೆಡ್‌ ಮತ್ತು ಜೆಐಬಿಸಿಸಿ

ಶ್ರೀ ತಕೇಶಿ ಕುಣಿಬೆ    

ಸುಮಿಟೊಮೊ ಮಿಟ್ಸುಯಿ ಫೈನಾನ್ಶಿಯಲ್‌ ಗ್ರೂಪ್‌ (ಎಸ್‌ಎಂಎಫ್‌ಜಿ) ಮತ್ತು ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್‌ ಕಾರ್ಪೊರೇಷನ್‌ (ಎಸ್‌ಎಂಬಿಸಿ) ಎರಡರ ಮಂಡಳಿಯ ಅಧ್ಯಕ್ಷ ರು        

ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್‌ ಕಾರ್ಪೊರೇಷನ್‌

ಶ್ರೀ ಕೋಜಿ ನಾಗೈ    

ಅಧ್ಯಕ್ಷರು     

ನೊಮುರಾ ಸೆಕ್ಯುರಿಟೀಸ್‌ ಕಂಪನಿ, ಲಿಮಿಟೆಡ್‌.    

ಶ್ರೀ ಕಜುವೊ ನಿಶಿತಾನಿ        

ಪ್ರಧಾನ ಕಾರ್ಯದರ್ಶಿ    

ಜಪಾನ್‌-ಭಾರತ ವ್ಯಾಪಾರ ಸಹಕಾರ ಸಮಿತಿ

ಶ್ರೀ ಮಸಕಾಜು ಕುಬೋಟಾ         

  ಅಧ್ಯಕ್ಷರು

ಕೀಡಾನ್ರೆನ್‌

ಶ್ರೀ ಕ್ಯೋಹಿ ಹೋಸೊನೊ    

ನಿರ್ದೇಶಕರು ಮತ್ತು ಸಿಒಒ   

ಡ್ರೀಮ್‌ ಇನ್ಕ್ಯುಬೇಟರ್‌ ಇಂಕ್‌.

ಶ್ರೀ ಕೀಚಿ ಇವಾಟಾ        

ಸುಮಿಟೊಮೊ ಕೆಮಿಕಲ್‌ ಕಂಪನಿಯ ಅಧ್ಯಕ್ಷರು, ಲಿಮಿಟೆಡ್‌ ಜಪಾನ್‌ ಪೆಟ್ರೋಕೆಮಿಕಲ್‌ ಇಂಡಸ್ಟ್ರಿ ಅಸೋಸಿಯೇಷನ್‌ ನ ಉಪಾಧ್ಯಕ್ಷ ರು    

ಸುಮಿಟೊಮೊ ಕೆಮಿಕಲ್‌ ಕಂಪನಿ ಲಿ.

ಶ್ರೀ ಸುಗಿಯೊ ಮಿಟ್ಸುವೊಕಾ    

ಮಂಡಳಿಯ ಅಧ್ಯಕ್ಷರು         

ಐಎಚ್‌ಐ ಕಾರ್ಪೊರೇಷನ್‌

ಶ್ರೀ ಯೋಶಿನೋರಿ ಕನೆಹನಾ        

ಮಂಡಳಿಯ ಅಧ್ಯಕ್ಷರು    

ಕವಾಸಕಿ ಹೆವಿ ಇಂಡಸ್ಟ್ರೀಸ್‌, ಲಿ.

ಶ್ರೀ ರಿಕೊ ಹಿರಾ  

    ಅಧ್ಯಕ್ಷರು ಮತ್ತು ಪ್ರತಿನಿಧಿ ನಿರ್ದೇಶಕರು    

ಹೋಟೆಲ್‌ ಮ್ಯಾನೇಜ್ಮೆಂಟ್‌ ಇಂಟರ್‌ನ್ಯಾಷನಲ್‌ ಕಂಪನಿ ಲಿ.   

ಶ್ರೀ ಹಿರೋಕೊ ಒಗಾವಾ        

ಸಿಒ ಮತ್ತು ಸಿಇಒ    

ಬ್ರೂಕ್ಸ್‌ ಕಂಪನಿ ಲಿ.

ಶ್ರೀ ವಿವೇಕ್‌ ಮಹಾಜನ್‌        

ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರು ಸಿಟಿಒ    

ಫ್ಯುಜಿಟ್ಸು ಲಿ.

ಶ್ರೀ ತೋಶಿಯಾ ಮತ್ಸುಕಿ        

ಹಿರಿಯ ಉಪಾಧ್ಯಕ್ಷ ರು     

ಎನ್‌ಇಸಿ ಕಾರ್ಪೊರೇಷನ್‌

ಶ್ರೀ ಕಜುಶಿಗೆ ನೊಬುಟಾನಿ    

ಅಧ್ಯಕ್ಷ         

ಜೆಇಟಿಆರ್‌ಒ

ಶ್ರೀ ಯಮಡಾ ಜುನಿಚಿ    

ಕಾರ್ಯನಿರ್ವಾಹಕ ಹಿರಿಯ ಉಪಾಧ್ಯಕ್ಷ ರು 

    ಜೈಕಾ

ಶ್ರೀ ತದಶಿ ಮೇದಾ        

ರಾಜ್ಯಪಾಲರು    

ಜೆಬಿಐಸಿ

ಶ್ರೀ ಅಜಯ್‌ ಸಿಂಗ್‌    

ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ     

ಮಿಟ್ಸುಯಿ ಒ.ಎಸ್‌.ಕೆ. ಲೈನ್ಸ್‌   

ಶ್ರೀ ತೋಶಿಯಾಕಿ ಹಿಗಾಶಿಹರ        

ನಿರ್ದೇಶಕರು, ಪ್ರತಿನಿಧಿ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯನಿರ್ವಾಹಕ ಅಧ್ಯಕ್ಷ ರು ಮತ್ತು ಸಿಇಒ    

ಹಿಟಾಚಿ ಲಿ.

ಶ್ರೀ ಯೋಶಿಹಿರೊ ಮಿನೆನೊ    

ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮಂಡಳಿಯ ಸದಸ್ಯ     

ಡೈಕಿನ್‌ ಇಂಡಸ್ಟ್ರೀಸ್‌ ಲಿ.

ಶ್ರೀ ಯೋಶಿಹಿಸಾ ಕಿಟಾನೊ    

ಅಧ್ಯಕ್ಷ ರು ಮತ್ತು ಸಿಇಒ    

ಜೆಎಫ್‌ಇಸ್ಟೀಲ್‌ ಕಾರ್ಪೊರೇಷನ್‌

ಶ್ರೀ ಈಜಿ ಹಶಿಮೊಟೊ        

ಪ್ರಾತಿನಿಧಿಕ ನಿರ್ದೇಶಕರು ಮತ್ತು ಅಧ್ಯಕ್ಷ ರು    

ನಿಪ್ಪಾನ್‌ ಸ್ಟೀಲ್‌ ಕಾರ್ಪೊರೇಷನ್‌

ಶ್ರೀ ಅಕಿಹಿರೊ ನಿಕ್ಕಾಕು    

ಮಂಡಳಿಯ ಅಧ್ಯಕ್ಷರು ಮತ್ತು ಪ್ರತಿನಿಧಿ ಸದಸ್ಯರು     

ಟೋರೇ ಇಂಡಸ್ಟ್ರೀಸ್‌, ಇಂಕ್‌.

ಶ್ರೀ ಮೊಟೊಕಿ ಒನ್‌    

ಪ್ರತಿನಿಧಿ ನಿರ್ದೇಶಕರು ಮತ್ತು ಹಿರಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಅಧಿಕಾರಿ    

ಮಿಟ್ಸುಯಿ  ಕಂಪನಿ ಲಿ.

ಶ್ರೀ ಮಸಯೋಶಿ ಫುಜಿಮೊಟೊ    

ಪ್ರಾತಿನಿಧಿಕ ನಿರ್ದೇಶಕರು, ಅಧ್ಯಕ್ಷ ರು ಮತ್ತು ಸಿಇಒ   

ಸೊಜಿತ್ಜ್‌ ಕಾರ್ಪೊರೇಷನ್‌   

ಶ್ರೀ ತೋಶಿಕಾಜು ನಂಬು        

ಕಾರ್ಯನಿರ್ವಾಹಕ ಉಪಾಧ್ಯಕ್ಷ ರು, ಪ್ರಾತಿನಿಧಿಕ ನಿರ್ದೇಶಕರು    

ಸುಮಿಟೊಮೊ ಕಾರ್ಪೊರೇಷನ್‌

ಶ್ರೀ ಇಚಿರೋ ಕಾಶಿತಾನಿ        

ಅಧ್ಯಕ್ಷ      

ಟೊಯೊಟಾ ಸುಶೋ ಕಾರ್ಪೊರೇಷನ್‌

ಶ್ರೀ ಇಚಿರೋ ಟಕಹರಾ    

ಉಪಾಧ್ಯಕ್ಷ ರು, ಮಂಡಳಿಯ ಸದಸ್ಯರು        

ಮರುಬೆನಿ ಕಾರ್ಪೊರೇಷನ್‌

ಶ್ರೀ ಯೋಜಿ ತಗುಚಿ     

ಮಿಟ್ಸುಬಿಷಿ ಕಾರ್ಪೊರೇಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಅಧ್ಯಕ್ಷ   ಮತ್ತು ವ್ಯವಸ್ಥಾಪಕ ನಿರ್ದೇಶಕ

 

ಮಿಟ್ಸುಬಿಷಿ ಕಾರ್ಪೊರೇಷನ್‌  

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How NPS transformed in 2025: 80% withdrawals, 100% equity, and everything else that made it a future ready retirement planning tool

Media Coverage

How NPS transformed in 2025: 80% withdrawals, 100% equity, and everything else that made it a future ready retirement planning tool
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಡಿಸೆಂಬರ್ 2025
December 20, 2025

Empowering Roots, Elevating Horizons: PM Modi's Leadership in Diplomacy, Economy, and Ecology