ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೌತ್ ಬ್ಲಾಕ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ತಡೆರಹಿತವಾಗಿ ಸಂಯೋಜಿಸುವ ಮೂಲಕ ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನ ಉತ್ತೇಜಿಸುವ ಗುರಿ ಹೊಂದಿರುವ ಐಸಿಟಿ ಶಕ್ತ, ಬಹು ಮಾದರಿ ವೇದಿಕೆಯಾದ ಪ್ರಗತಿಯ 48ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಪ್ರಧಾನಮಂತ್ರಿ ಅವರು ಗಣಿ, ರೈಲ್ವೆ ಮತ್ತು ಜಲಸಂಪನ್ಮೂಲ ಕ್ಷೇತ್ರಗಳಲ್ಲಿನ ಕೆಲವು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು. ಆರ್ಥಿಕ ಬೆಳವಣಿಗೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಪ್ರಮುಖವಾದ ಈ ಯೋಜನೆಗಳನ್ನು ಕಾಲಮಿತಿಗಳು, ಅಂತರ-ಏಜೆನ್ಸಿ ಸಮನ್ವಯ ಮತ್ತು ಸಮಸ್ಯೆ ಪರಿಹಾರದ ಮೇಲೆ ಕೇಂದ್ರೀಕರಿಸಿ ಪರಿಶೀಲಿಸಲಾಯಿತು.
ಯೋಜನೆಯ ಅನುಷ್ಠಾನದಲ್ಲಿನ ವಿಳಂಬವು ಹಣಕಾಸಿನ ವೆಚ್ಚ ಹೆಚ್ಚಿಸುವ ಮತ್ತು ನಾಗರಿಕರಿಗೆ ಅಗತ್ಯ ಸೇವೆಗಳು ಮತ್ತು ಮೂಲಸೌಕರ್ಯಗಳಿಗೆ ಸಕಾಲದಲ್ಲಿ ಪ್ರವೇಶ ನಿರಾಕರಿಸುವ ದ್ವಂದ್ವ ವೆಚ್ಚದಲ್ಲಿ ಬರುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜೀವನವನ್ನು ಸುಧಾರಿಸಲು ಅವಕಾಶಗಳನ್ನು ಪರಿವರ್ತಿಸಲು ಫಲಿತಾಂಶ-ಚಾಲಿತ ವಿಧಾನ ಅಳವಡಿಸಿಕೊಳ್ಳುವಂತೆ ಅವರು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಪ್ರಧಾನಮಂತ್ರಿ-ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ- ಭೀಮ್) ಪರಾಮರ್ಶೆಯ ಸಂದರ್ಭದಲ್ಲಿ, ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ದೂರದ, ಬುಡಕಟ್ಟು ಮತ್ತು ಗಡಿ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸಿ ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿ ವೇಗಗೊಳಿಸುವಂತೆ ಪ್ರಧಾನಮಂತ್ರಿ ಎಲ್ಲಾ ರಾಜ್ಯಗಳಿಗೆ ತಿಳಿಸಿದರು. ಬಡವರು, ಅಂಚಿನಲ್ಲಿರುವ ಮತ್ತು ಸೌಲಭ್ಯವಂಚಿತ ಜನಸಂಖ್ಯೆಗೆ ಗುಣಮಟ್ಟದ ಆರೋಗ್ಯ ರಕ್ಷ ಣೆಗೆ ಸಮಾನ ಪ್ರವೇಶ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು ಮತ್ತು ಈ ಪ್ರದೇಶಗಳಲ್ಲಿ ನಿರ್ಣಾಯಕ ಆರೋಗ್ಯ ಸೇವೆಗಳಲ್ಲಿ ಅಸ್ತಿತ್ವದಲ್ಲಿರುವ ಅಂತರ ನಿವಾರಿಸಲು ತುರ್ತು ಮತ್ತು ನಿರಂತರ ಪ್ರಯತ್ನಗಳಿಗೆ ಕರೆ ನೀಡಿದರು.
ಗುಣಮಟ್ಟದ ಆರೋಗ್ಯ ರಕ್ಷಣೆ ಮತ್ತು ಸೇವೆ ಒದಗಿಸಲು ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಪ್ರಾಥಮಿಕ, ತೃತೀಯ ಮತ್ತು ವಿಶೇಷ ಆರೋಗ್ಯ ಮೂಲಸೌಕರ್ಯ ಬಲಪಡಿಸಲು ಪಿಎಂ-ಭೀಮ್ ರಾಜ್ಯಗಳಿಗೆ ಸುವರ್ಣಾವಕಾಶ ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿವಿಧ ಸಚಿವಾಲಯಗಳು, ಇಲಾಖೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಉತ್ತೇಜಿಸುವ ಅನುಕರಣೀಯ ಅಭ್ಯಾಸಗಳನ್ನು ಪ್ರಧಾನಿ ಪರಿಶೀಲಿಸಿದರು. ಈ ಉಪಕ್ರಮಗಳ ಕಾರ್ಯತಂತ್ರದ ಮಹತ್ವ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯಾದ್ಯಂತ ನಾವೀನ್ಯತೆ ಉತ್ತೇಜಿಸುವ ಸಾಮರ್ಥ್ಯಕ್ಕಾಗಿ ಅವರು ಶ್ಲಾಘಿಸಿದರು. ಅವುಗಳ ವಿಸ್ತೃತ ಪ್ರಸ್ತುತತೆಯನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ದೇಶೀಯ ಸಾಮರ್ಥ್ಯಗಳೊಂದಿಗೆ ಕಾರ್ಯಗತಗೊಳಿಸಲಾದ ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಗೆ ಪ್ರಬಲ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿದರು.
ಪರಿಸರ ವ್ಯವಸ್ಥೆ ಬಲಪಡಿಸಲು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಕೊಡುಗೆ ನೀಡಲು ರಾಜ್ಯಗಳು ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಧಾನಮಂತ್ರಿ ಬಿಂಬಿಸಿದರು.
Chaired the 48th PRAGATI Session earlier this evening. Infrastructure was a key focus, with sectors like mines, railways and water resources being discussed. Reiterated the need for timely completion of projects. Also discussed aspects relating to Prime Minister-Ayushman Bharat…
— Narendra Modi (@narendramodi) June 25, 2025


