ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಸಚಿನ್ ಸಜೆರಾವ್ ಖಿಲಾರಿ ಅವರನ್ನು ಅಭಿನಂದಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನ ಮಂತ್ರಿಯವರು ಹೀಗೆ ಬರೆದಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಸಚಿನ್ ಸಜೆರಾವ್ ಖಿಲಾರಿ ಅವರಿಂದ ಭಾರತಕ್ಕೆ ಭವ್ಯವಾದ ಚಿನ್ನದ ಪದಕ!
ಈ ಅದ್ಭುತ ಗೆಲುವಿಗಾಗಿ ಸಚಿನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ಶಕ್ತಿ ಅದ್ಭುತವಾಗಿ ಮಿಂಚಿದವು .
Magnificent Gold for India by Sachin Sajerao Khilari in the Men's Shot Put-F46 event at the Asian Para Games!
— Narendra Modi (@narendramodi) October 26, 2023
Huge congratulations to Sachin, on this remarkable victory. His dedication and strength have shone brilliantly. pic.twitter.com/d4NVCGldVd


