ಕುವೈತ್ ನ ದೊರೆ (ಅಮೀರ್) ಘನತೆವೆತ್ತ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುವೈತ್ ನಲ್ಲಿ ನಡೆದ 26ನೇ ಅರೇಬಿಯನ್ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದಲ್ಲಿ ‘ಗೌರವ ಅತಿಥಿ’ಯಾಗಿ ಭಾಗವಹಿಸಿದರು. ಘನತೆವೆತ್ತ ಕುವೈತ್ ದೊರೆ (ಅಮೀರ್), ಘನತೆವೆತ್ತ ಕುವೈತ್ ಯುವರಾಜ, ಮತ್ತು ಘನತೆವೆತ್ತ ಕುವೈತ್ ಪ್ರಧಾನಮಂತ್ರಿಯವರೊಂದಿಗೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು, ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡರು. ಕುವೈತ್ ನ ಉನ್ನತ ನಾಯಕತ್ವದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅನೌಪಚಾರಿಕ ಸಂವಾದಕ್ಕೆ ಕೂಡಾ ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸಿಕೊಟ್ಟಿತು.

ಜಿಸಿಸಿ ರಾಷ್ಟ್ರಗಳು, ಇರಾಕ್ ಮತ್ತು ಯೆಮೆನ್ ಸೇರಿದಂತೆ ಎಂಟು ಗಲ್ಫ್ ದೇಶಗಳ ಭಾಗವಹಿಸುವಿಕೆಯೊಂದಿಗೆ ಕುವೈತ್ ದ್ವೈವಾರ್ಷಿಕ ಅರೇಬಿಯನ್ ಗಲ್ಫ್ ಕಪ್ ಕ್ರೀಡಾ ಕೂಟವನ್ನು ಅನ್ನು ಆಯೋಜಿಸಲಾಗುತ್ತದೆ. ಈ ಫುಟ್ಬಾಲ್ ಪಂದ್ಯಾವಳಿಯು ಈ ಪ್ರದೇಶದ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾಗಿದೆ.  ಭಾಗವಹಿಸಿದ ದೇಶಗಳಲ್ಲಿ ಕುವೈತ್ ಗರಿಷ್ಠ ಬಾರಿ ಪಂದ್ಯಾವಳಿಯನ್ನು ಗೆದ್ದಿದೆ.  ಭಾಗವಹಿಸಿದ ಎಲ್ಲಾ ದೇಶಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
One of the world’s first canal-top solar projects placed a 750-meter solar array above an Indian irrigation canal, generating clean power while saving an estimated 9 million liters of water each year

Media Coverage

One of the world’s first canal-top solar projects placed a 750-meter solar array above an Indian irrigation canal, generating clean power while saving an estimated 9 million liters of water each year
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಜುಲೈ 2026
July 17, 2026

Green Trains, Private Rockets & Global Partnerships — PM Modi’s New India is Playing to Win