ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಜಿಟಲ್ ಪರಿವರ್ತನಾ (ಟ್ರಾನ್ಸ್‌ ಫರ್ಮೇಷನ್) ಪ್ರಶಸ್ತಿ 2025 ಅನ್ನು ಗೆದ್ದಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ ) ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಆರ್ ಬಿ ಐ, ದೇಶೀಯವಾಗಿ ತನ್ನ ಇನ್‌ ಹೌಸ್‌ ಡೆವಲಪರ್‌ ತಂಡದ ಮೂಲಕ ಅಭಿವೃದ್ಧಿಪಡಿಸಿರುವ  ಪ್ರವಾಹ್ ಮತ್ತು ಸಾರಥಿ – ನವೀನ ಡಿಜಿಟಲ್‌ ಉಪಕ್ರಮಗಳನ್ನು ಗುರುತಿಸಿರುವ ಲಂಡನ್ ನಲ್ಲಿರುವ ಯುನೈಟೆಡ್‌ ಕಿಂಗ್ಡಮ್ ನ  ಕೇಂದ್ರ ಬ್ಯಾಂಕ್, ಆರ್ ಬಿ ಐ ಗೆ ಡಿಜಿಟಲ್ ಪರಿವರ್ತನಾ ಪ್ರಶಸ್ತಿ 2025 ನೀಡಿ ಗೌರವಿಸಿದೆ.

ಸಾಧನೆಯನ್ನು ಶ್ಲಾಘಿಸುತ್ತಾ, ಪ್ರಧಾನ ಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

"ಆಡಳಿತದಲ್ಲಿ ನಾವಿನ್ಯತೆ ಮತ್ತು ದಕ್ಷತೆಯೆಡೆಗೆ ಆದ್ಯತೆಯನ್ನು ಪ್ರತಿಬಿಂಬಿಸುವ ಶ್ಲಾಘನೀಯ ಸಾಧನೆ.

ಡಿಜಿಟಲ್ ನಾವಿನ್ಯತೆಯು ಭಾರತದ ಹಣಕಾಸು ಪರಿಸರ ವ್ಯವಸ್ಥೆಯನ್ನು ಸದೃಢಗೊಳಿಸುವುದನ್ನು ಮುಂದುವರಿಸಿದೆ, ಈ ಮೂಲಕ ಅಸಂಖ್ಯಾತ ಜೀವಗಳನ್ನು ಸಬಲೀಕರಣಗೊಳಿಸುತ್ತಿದೆ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Make a GRWM video in handloom': PM Narendra Modi urges Indians to celebrate National Handloom Day in new Instagram reel

Media Coverage

'Make a GRWM video in handloom': PM Narendra Modi urges Indians to celebrate National Handloom Day in new Instagram reel
NM on the go

Nm on the go

Always be the first to hear from the PM. Get the App Now!
...
ನಿಸ್ವಾರ್ಥ ಸೇವೆಯ ಮನೋಭಾವಕ್ಕೆ ಒತ್ತು ನೀಡುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡಿರುವ ಪ್ರಧಾನಮಂತ್ರಿ
August 07, 2026

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿಸ್ವಾರ್ಥ ಸೇವೆಯ ಸದ್ಗುಣ ಮತ್ತು ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಇತರರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಉದಾತ್ತ ಆದರ್ಶವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತಂ ಪುಸ್ತಕವನ್ನು ಹಂಚಿಕೊಂಡಿದ್ದಾರೆ:

"किं चन्द्रमाः प्रत्युपकारलिप्सया करोति गोभिः कुमुदावबोधनम्।

स्वभाव एवोन्नतचेतसां सतां परोपकारव्यसनं हि जीवितम्॥"

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

किं चन्द्रमाः प्रत्युपकारलिप्सया करोति गोभिः कुमुदावबोधनम्।

स्वभाव एवोन्नतचेतसां सतां परोपकारव्यसनं हि जीवितम्॥