“ನಿರಂತರವಾಗಿ ಪ್ರತಿಯೊಂದು ಪೀಳಿಗೆಯ ವ್ಯಕ್ತಿತ್ವ ನಿರ್ಮಾಣ ಮಾಡುವುದು, ಪ್ರತೀ ಸಮಾಜದ ಕೆಲಸವಾಗಿದೆ”
“ಎಲ್ಲಿಯಾದರೂ ಸಮಸ್ಯೆಗಳಿದ್ದರೆ ಸವಾಲುಗಳಿದ್ದರೆ ಅಲ್ಲಿ ಭಾರತ ಭರವಸೆಯೊಂದಿಗೆ ಇರುತ್ತದೆ, ಸಮಸ್ಯೆಗಳಿದ್ದಲ್ಲಿ ಭಾರತ ಪರಿಹಾರಗಳೊಂದಿಗೆ ಹೊರ ಬರುತ್ತದೆ”
“ಈಗಿನ ಜಗತ್ತಿಗೆ ಭಾರತ ಹೊಸಭರವಸೆಯಾಗಿದೆ”
“ತಂತ್ರಾಂಶದಿಂದ ಬಾಹ್ಯಾಕಾಶದವರೆಗೆ ಹೊಸ ಭವಿಷ್ಯದತ್ತ ಭಾರತ ಮುಂದಡಿ ಇಡುತ್ತಿದೆ”
“ನಮ್ಮನ್ನು ನಾವು ಉನ್ನತೀಕರಿಸಿಕೊಳ‍್ಳೋಣ, ಆದರೆ ನಮ್ಮ ಉನ್ನತಿಯು ಇತರರ ಕಲ್ಯಾಣಕ್ಕೆ ಮಾಧ್ಯಮವಾಗಬೇಕು”
ನಾಗಾಲ್ಯಾಂಡ್ ನ ಬಾಲಕಿಯೊಬ್ಬಳು ಕಾಶಿ ಘಾಟ್ ಗಳಲ್ಲಿ ನಡೆಸುತ್ತಿರುವ ಸ್ವಚ್ಛತಾ ಅಭಿಯಾನ ಉಲ್ಲೇಖ

ವಡೋದರದ ಕರೇಲಿಬಾಗ್ ನಲ್ಲಿ ಆಯೋಜಿಸಲಾದ “ಯುವ ಶಿಬಿರ” ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಕುಂದಲ್ ಧಾಮ್ ನ ಶ್ರೀ ಸ್ವಾಮಿ ನಾರಾಯಣ ದೇವಾಲಯ ಹಾಗೂ ವಡೋದರದ ಕರೇಲಿಬಾಗ್ ನ ಶ್ರೀ ಸ್ವಾಮಿ ನಾರಾಯಣ ದೇವಾಲಯಗಳಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಪ್ರತಿಯೊಂದು ಪೀಳಿಗೆಯಲ್ಲಿ ನಿರಂತರವಾಗಿ ವ್ಯಕ್ತಿತ್ವ ನಿರ್ಮಾಣ ಮಾಡುತ್ತಿರುವುದು, ಪ್ರತಿಯೊಂದು ಸಮಾಜದ  ಕೆಲಸವಾಗಿದೆ ಎಂದು ನಮ್ಮ ಧರ್ಮಗ್ರಂಥ ನಮಗೆ ಕಲಿಸಿದೆ. ಇಂದು ನಡೆಸಲಾಗುತ್ತಿರುವ ಶಿಬಿರ ಯುವಕರಲ್ಲಿ ಉತ್ತಮ ಸಂಸ್ಕಾರವನ್ನು ಮೂಡಿಸುವುದಷ್ಟೇ ಅಲ್ಲದೇ ಇದು ಹೆಮ್ಮೆ, ಸಮಾಜದ ಅಸ್ಮಿತೆ ಮತ್ತು ರಾಷ್ಟ್ರದ ಪುನರುತ್ಥಾನಕ್ಕಾಗಿ ಧಾರ್ಮಿಕ ಹಾಗೂ ನೈಸರ್ಗಿಕವಾಗಿ ಉತ್ತಮ ಅಭಿಯಾನವಾಗಿದೆ ಎಂದು ಒತ್ತಿ ಹೇಳಿದರು.  

ನವಭಾರತ ನಿರ್ಮಾಣ ಮಾಡುವ ಪ್ರಯತ್ನಗಳು ಮತ್ತು ಸಾಮೂಹಿಕ ಸಂಕಲ್ಪ ಕೈಗೊಳ್ಳುವಂತೆ ಪ್ರಧಾನಮಂತ್ರಿ ಅವರು ಒತ್ತಾಯಿಸಿದರು. ನವಭಾರತ ಮತ್ತು ಅದರ ಗುರುತು ಹೊಸದಾಗಿದ್ದು, ಪುರಾತನ ಸಂಪ್ರದಾಯಗಳನ್ನು ನಾವು ನೋಡುತ್ತಿದ್ದೇವೆ. ಹೊಸ ಭಾರತ, ಹೊಸ ಚಿಂತನೆ ಮತ್ತು ಪ್ರಾಚೀನ ಸಂಸ್ಕೃತಿ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಇಡೀ ಮನುಕುಲಕ್ಕೆ ಮಾರ್ಗದರ್ಶನ ನೀಡಬೇಕು. “ಎಲ್ಲಿಯಾದರೂ ಸಮಸ್ಯೆಗಳಿದ್ದರೆ ಸವಾಲುಗಳಿದ್ದರೆ ಅಲ್ಲಿ ಭಾರತ ಭರವಸೆಯೊಂದಿಗೆ ಇರುತ್ತದೆ, ಸಮಸ್ಯೆಗಳಿದ್ದಲ್ಲಿ ಭಾರತ ಪರಿಹಾರಗಳೊಂದಿಗೆ ಹೊರ ಬರುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೊರೋನಾ ಬಿಕ್ಕಟ್ಟಿನ ನಡುವೆ ಜಗತ್ತಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ತಲುಪಿಸುವುದರಿಂದ ಹಿಡಿದು ಸ್ವಾವಲಂಬಿ ಭಾರತದ ಭರವಸೆಯವರೆಗೆ, ಜಾಗತಿಕ ಅಶಾಂತಿ ಮತ್ತು ಸಂಘರ್ಷದ ನಡುವೆ ಶಾಂತಿಗಾಗಿ ಭಾರತ ಸಮರ್ಥ ರಾಷ್ಟ್ರದ ಪಾತ್ರವನ್ನು ನಿರ್ವಹಿಸುತ್ತಿದೆ. ಇದು ಪ್ರಪಂಚದ ಹೊಸ ಭರವಸೆಯಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಮಾನವೀಯ ಜಗತ್ತಿಗೆ ನಾವು ಯೋಗದ ಸಂಪೂರ್ಣ ಮಾರ್ಗವನ್ನು ತೋರಿಸಿದ್ದು, ನಾವು ಆಯುರ್ವೇದದ ಶಕ್ತಿಯನ್ನು ಪರಿಚಯಿಸಿದ್ದೇವೆ. ಸರ್ಕಾರದ ಕಾರ್ಯಶೈಲಿ ಮತ್ತು ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗುವ ಮೂಲಕ ಸಮಾಜದ ಚಿಂತನೆಯೂ ಬದಲಾಗಿದೆ ಎಂಬುದನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಇವತ್ತು ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ನವೋದ್ಯಮ ವ್ಯವಸ್ಥೆಯನ್ನು ಹೊಂದಿದ್ದು, ಭಾರತದ ಯುವ ಸಮೂಹ ಇದರ ಸಾರಥ್ಯವನ್ನು ವಹಿಸಿಕೊಂಡಿದೆ.  
“ಈಗಿನ ಜಗತ್ತಿಗೆ ಭಾರತ ನವಭರವಸೆಯಾಗಿದೆ. ತಂತ್ರಾಂಶದಿಂದ ಬಾಹ್ಯಾಕಾಶದವರೆಗೆ ನಾವು ಹೊಸ ಭವಿಷ್ಯದತ್ತ ಮುಂದಡಿ ಇಡುತ್ತಿದೆ. ನಮಗೆ ಸಂಸ್ಕಾರ ಎಂದರೆ ಅದರ ಅರ್ಥ ಶಿಕ್ಷಣ, ಸೇವೆ ಮತ್ತು ಸೂಕ್ಷ್ಮತೆಯಾಗಿದೆ”. “ನಮ್ಮನ್ನು ನಾವು ಉನ್ನತೀಕರಿಸಿಕೊಳ‍್ಳೋಣ, ಆದರೆ ನಮ್ಮ ಉನ್ನತಿಯು ಇತರರ ಕಲ್ಯಾಣಕ್ಕೆ ಮಾಧ್ಯಮವಾಗಬೇಕು” ಎಂದು ಹೇಳಿದರು. ನಾವು ಯಶಸ್ಸಿನ ಉತ್ತುಂಗವನ್ನು ಮುಟ್ಟೋಣ, ಆದರೆ ನಮ್ಮ ಯಶಸ್ಸು ಎಲ್ಲರಿಗೂ ಸೇವೆಯ ಸಾಧನವಾಗಬೇಕು. ಇದು ಭಗವಾನ್ ಸ್ವಾಮಿ ನಾರಾಯಣ್ ಅವರ ಬೋಧನೆಗಳ ಸಾರವಾಗಿದೆ ಮತ್ತು ಇದು ಭಾರತದ ಸ್ವರೂಪವೂ ಆಗಿದೆ ಎಂದರು.     

ವಡೋದರದ ಜೊತೆಗೆ ತಮ್ಮ ಒಡನಾಟವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಈ ಪ್ರದೇಶ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಬದುಕಿನಲ್ಲಿ ಮಹತ್ವದ್ದಾಗಿದೆ. ವಡೋದರದ “ಏಕತಾ ಪ್ರತಿಮೆ” ಇಂದು ಜಾಗತಿಕ ಆಕರ್ಷಣೆಯಾಗಿದೆ. ಇದೇ ಸಂದರ್ಭದಲ್ಲಿ ಪಾವಗಧ್ ದೇವಾಲಯ ಎಲ್ಲೆಡೆಯಿಂದಲೂ ಆಕರ್ಷಣೆಯ ಕೇಂದ್ರವಾಗಿದೆ.  ವಡೋದರ “ಸಂಸ್ಕಾರ್ ನಗರಿ”ಯಾಗಿದ್ದು, ಜಗತ್ತಿನಾದ್ಯಂತ ವಡೋದರದ – ಮೆಟ್ರೋ ರೈಲು ಕೋಚ್ ಗಳನ್ನು ಬಳಸಿಕೊಳ್ಳುತ್ತಿದ್ದು, ಇದು ವಡೋದರದ ಶಕ್ತಿಯೂ ಆಗಿದೆ.  ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಾಧ್ಯವಾಗಲಿಲ್ಲ, ಆದರೆ ಈಗ ನಾವು ದೇಶಕ್ಕಾಗಿ ಬದುಕೋಣ. “2023 ರ ಆಗಸ್ಟ್ 23 ರ ವೇಳೆಗೆ ನಾವು ನಗದು ವಹಿವಾಟುಗಳನ್ನು ನಿಲ್ಲಿಸಬಹುದೇ? ಮತ್ತು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಬಹುದೇ?. ನಿಮ್ಮ ಈ ಸಣ್ಣ ಕೊಡುಗೆ, ಸಣ್ಣ ವ್ಯವಹಾರಗಳು ಮತ್ತು ಮಾರಾಟಗಾರರ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ಕೇಳಿದರು.  ಇದೇ ಸಂದರ್ಭದಲ್ಲಿ ನೆರೆದಿದ್ದವರು ಸ್ವಚ್ಛತೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿಯಂತ್ರಣ ಹಾಗೂ ಅಪೌಷ್ಟಿಕತೆ ತಡೆಗಟ್ಟುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.

ಕಾಶಿಯ ಘಾಟ್ ಗಳಲ್ಲಿ ನಾಗಾಲ್ಯಾಂಡ್ ನ ಬಾಲಕಿ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಕುರಿತು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಈಕೆ ಏಕಾಂಗಿಯಾಗಿ ಇದನ್ನು ಆರಂಭಿಸಿದಳು, ಈಗ ಹಲವರು ಕೈಜೋಡಿಸಿದ್ದಾರೆ. ಇದು ನಿರ್ಣಯದ ಶಕ್ತಿಯನ್ನು ತೋರಿಸುತ್ತದೆ. ಅದೇ ರೀತಿ ದೇಶಕ್ಕೆ ಸಹಾಯ ಮಾಡಲು ವಿದ್ಯುತ್ ಉಳಿತಾಯ ಅಥವಾ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವಂತಹ ಸಣ್ಣ ಕ್ರಮಗಳನ್ನು ಅಭ್ಯಾಸ ಮಾಡುವಂತೆ ಪ್ರಧಾನಮಂತ್ರಿ ಅವರು ಕೋರಿದರು.

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Wed in India’ Initiative Fuels The Rise Of NRI And Expat Destination Weddings In India

Media Coverage

'Wed in India’ Initiative Fuels The Rise Of NRI And Expat Destination Weddings In India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 15 ಡಿಸೆಂಬರ್ 2025
December 15, 2025

Visionary Leadership: PM Modi's Era of Railways, AI, and Cultural Renaissance