ಮೊದಲ ಕಲಾಪದಲ್ಲಿ ನಾರಿಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಪ್ರಧಾನಿ
“ಅಮೃತ ಕಾಲದ ಉದಯದಲ್ಲಿ, ಭಾರತವು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಭವಿಷ್ಯದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ’’
“ಇದು ಸಂಕಲ್ಪಗಳನ್ನು ಸಾಧಿಸಲು ನವೀಕೃತ ಉತ್ಸಾಹ ಮತ್ತು ಶಕ್ತಿಯೊಂದಿಗೆ ಹೊಸ ಪಯಣವನ್ನು ಆರಂಭಿಸುವ ಕಾಲ’’
“ಸೆಂಗೋಲ್ (ರಾಜದಂಡ) ನಮ್ಮ ಹಿಂದಿನ ಅತ್ಯಂತ ಪ್ರಮುಖ ಭಾಗದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ’’
“ಹೊಸ ಸಂಸತ್ ಕಟ್ಟಡದ ಭವ್ಯತೆಯು ಆಧುನಿಕ ಭಾರತವನ್ನು ವೈಭವಿಕರಿಸುತ್ತದೆ. ನಮ್ಮ ಎಂಜಿನಿಯರ್ ಗಳು ಮತ್ತು ಕಾರ್ಮಿಕರ ಶ್ರಮ ಬೆವರು ಇದರಲ್ಲಿ ಸೇರಿದೆ’’
“ನಾರಿಶಕ್ತಿ ವಂದನಾ ಅಧಿನಿಯಮ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತದೆ’’
“ಭವನ (ಕಟ್ಟಡ) ಬದಲಾದಂತೆ, ಭಾವ (ಭಾವನೆ)ಗಳೂ ಕೂಡ ಬದಲಾಗಬೇಕು’’
“ನಾವೆಲ್ಲರೂ ಸಂಸದೀಯ ಪರಂಪರೆಯ ಲಕ್ಷಣರೇಖೆಯನ್ನು ಪಾಲಿಸಬೇಕು’’
“ಸಂಸತ್ತಿನಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. 2023ರ ಸೆಪ್ಟಂಬರ್ 19 ಈ ಐತಿಹಾಸಿಕ ದಿನವು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ’’
“ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಸಂಕಲ್ಪವನ್ನು ಮುಂದುವರಿಸಿಕೊಂಡು ನಮ್ಮ ಸರ್ಕಾರ ಇಂದು ಪ್ರಮುಖ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸುತ್ತಿದೆ. ಈ ಮಸೂದೆಯ ಉದ್ದೇಶ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವಿಸ್ತರಣೆ ಮಾಡುವುದಾಗಿದೆ’’ “ನಾವು ಈ ಮಸೂದೆಯನ್ನು ಶಾಸನವನ್ನಾಗಿ ಮಾಡಲು ಬದ್ಧವಾಗಿದ್ದೇವೆ ಎಂದು ನಾನು ದೇಶದ ಎಲ್ಲ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರಿಗೆ ಭರವಸೆ ನೀಡುತ್ತೇನೆ’’

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಹೊಸ ಕಟ್ಟಡದಲ್ಲಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಹೊಸ ಸಂಸತ್‌ ಭವನದಲ್ಲಿ ಇಂದು ಐತಿಹಾಸಿಕ ಮೊದಲ ಅಧಿವೇಶನ ನಡೆಯುತ್ತಿದೆ, ಅದರ ಅಂಗವಾಗಿ ಎಲ್ಲರಿಗೂ ಶುಭಾಶಯಗಳನ್ನು ಕೋರುವುದಾಗಿ ಹೇಳಿದರು. ಹೊಸ ಸಂಸತ್ ಭವನದಲ್ಲಿ ಮೊದಲ ದಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಅವಕಾಶ ನೀಡಿದ್ದಕ್ಕಾಗಿ ಸ್ಪೀಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಪ್ರಧಾನಿ ಅವರು, ಎಲ್ಲ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.  ಈ ಸಂದರ್ಭದ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಅಮೃತ ಕಾಲದ ಉದಯದಲ್ಲಿ ಭಾರತವು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮೂಲಕ ಭವಿಷ್ಯದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ ಎಂದರು. ದೇಶದ ಇತ್ತೀಚಿನ ಸಾಧನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ವಿಜ್ಞಾನ ವಲಯದಲ್ಲಿ ಚಂದ್ರಯಾನ-3 ರ ಯಶಸ್ಸು ಮತ್ತು ಜಿ-20 ಸಂಘಟನೆ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಪರಿಣಾಮವನ್ನು ಪ್ರಸ್ತಾಪಿಸಿದರು. ಭಾರತಕ್ಕೆ ಒಂದು ಅಪೂರ್ವ ಅವಕಾಶ ಒದಗಿ ಬಂದಿದ್ದು, ಈ ಬೆಳಕಿನಲ್ಲಿ ರಾಷ್ಟ್ರದ ನೂತನ ಸಂಸತ್ ಭವನ ಇಂದು ಕಾರ್ಯಾರಂಭ ಮಾಡುತ್ತಿದೆ ಎಂದು ಹೇಳಿದರು . 

ಗಣೇಶ ಚತುರ್ಥಿಯ ಶುಭ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಶ್ರೀ ಗಣೇಶನು ಸಮೃದ್ಧಿ, ಮಂಗಳಕರ, ವಿವೇಚನೆ ಮತ್ತು ಜ್ಞಾನದ ದೇವರು ಎಂದು ಹೇಳಿದರು. "ಇದು ಸಂಕಲ್ಪಗಳನ್ನು ಸಾಧಿಸಲು ಮತ್ತು ನವೀಕೃತ ಉತ್ಸಾಹ ಮತ್ತು ಶಕ್ತಿಯೊಂದಿಗೆ ಹೊಸ ಪಯಣವನ್ನು ಆರಂಭಿಸುವ ಕಾಲ" ಎಂದು ಪ್ರಧಾನಿ ಹೇಳಿದರು. ಗಣೇಶ ಚತುರ್ಥಿ ಮತ್ತು ಹೊಸ ಆರಂಭದ ಸಂದರ್ಭದಲ್ಲಿ ಲೋಕಮಾನ್ಯ ತಿಲಕರನ್ನು ಸ್ಮರಿಸಿದ ಪ್ರಧಾನಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ತಿಲಕರು ಗಣೇಶ ಚತುರ್ಥಿಯನ್ನು ಇಡೀ ದೇಶದಲ್ಲಿ ಸ್ವರಾಜ್ಯದ ಜ್ಯೋತಿಯನ್ನಾಗಿ ಬೆಳಗಿಸುವ ಮಾಧ್ಯಮವನ್ನಾಗಿ ಪರಿವರ್ತಿಸಿದರು ಎಂದು ಹೇಳಿದರು. ಇಂದು ನಾವು ಅದೇ ಸ್ಫೂರ್ತಿಯೊಂದಿಗೆ ಸಾಗುತ್ತಿದ್ದೇವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಇಂದು ಸಂವತ್ಸರಿ ಪರ್ವ, ಕ್ಷಮೆಯ ಹಬ್ಬ ಎಂದು ಪ್ರಧಾನಿ ಉಲ್ಲೇಖಿಸಿದರು, ಈ ಹಬ್ಬವು ಯಾರಿಗಾದರೂ ನೋವುಂಟು ಮಾಡಬಹುದಾದ ಯಾವುದೇ ಉದ್ದೇಶಪೂರ್ವಕ ಮತ್ತು ಉದ್ದೇಶಪೂರ್ವಕವಲ್ಲದ ಕೃತ್ಯಗಳಿಗೆ ಕ್ಷಮೆ ಕೇಳುವುದಾಗಿದೆ ಎಂದು ಪ್ರಧಾನಿ ವಿವರಿಸಿದರು. ಪ್ರಧಾನಮಂತ್ರಿ ಹಬ್ಬದ ಉತ್ಸಾಹದಲ್ಲಿ ಎಲ್ಲರಿಗೂ ಮಿಚ್ಛಾಮಿ ದುಕ್ಕಂಡಂ ಎಂದು ತಿಳಿಸಿದರು ಮತ್ತು ಹಿಂದಿನ ಎಲ್ಲಾ ಕಹಿಗಳನ್ನು ಮರೆತು ಮುನ್ನಡೆಯುವಂತೆ ಅವರು ಮನವಿ ಮಾಡಿದರು.

ಪವಿತ್ರ ಸೆಂಗೋಲ್ನ ಉಪಸ್ಥಿತಿಯನ್ನು ಹಳೆಯ ಮತ್ತು ಹೊಸತನದ ನಡುವಿನ ಸಂಪರ್ಕ ಕೊಂಡಿಯಾಗಿ ಮತ್ತು ಸ್ವಾತಂತ್ರ್ಯದ ಮೊದಲ ಬೆಳಕಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ಪವಿತ್ರ ಸೆಂಗೋಲ್ ಅನ್ನು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಸ್ಪರ್ಶಿಸಿದರು ಎಂದು ಅವರು ಹೇಳಿದರು. ಆದ್ದರಿಂದ, ಸೆಂಗೋಲ್ ನಮ್ಮ ಹಿಂದಿನ ಅತ್ಯಂತ ಪ್ರಮುಖ ಭಾಗದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಹೊಸ ಕಟ್ಟಡದ ವೈಭವವು ಅಮೃತ ಕಾಲವನ್ನು ಲೇಪಿಸುತ್ತದೆ ಮತ್ತು ಸಾಂಕ್ರಾಮಿಕ ಸಮಯದಲ್ಲಿಯೂ ಕಟ್ಟಡಕ್ಕಾಗಿ ನಿರಂತರವಾಗಿ ಕೆಲಸ ಮಾಡಿದ ಕಾರ್ಮಿಕರು ಮತ್ತು ಎಂಜಿನಿಯರುಗಳ ಶ್ರಮವನ್ನು ಎಂದು ಪ್ರಧಾನಿ ಸ್ಮರಿಸಿದರು. ಪ್ರಧಾನಿ ಅವರ ನೇತೃತ್ವದಲ್ಲಿ ಇಡೀ ಸದನ ಶ್ರಮಿಕರು ಮತ್ತು ಎಂಜಿನಿಯರ್‌ಗಳಿಗೆ ಚಪ್ಪಾಳೆ ತಟ್ಟಿದರು. 30 ಸಾವಿರಕ್ಕೂ ಅಧಿಕ ಶ್ರಮಿಕರು ಕಟ್ಟಡಕ್ಕೆ ಕೊಡುಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಶ್ರಮಿಕರ ಸಂಪೂರ್ಣ ವಿವರಗಳನ್ನು ಒಳಗೊಂಡ ಡಿಜಿಟಲ್ ಪುಸ್ತಕದ ಉಪಸ್ಥಿತಿಯನ್ನು ಉಲ್ಲೇಖಿಸಿದರು.

ನಮ್ಮ ಕ್ರಿಯೆಗಳ ಮೇಲೆ ಭಾವನೆಗಳು ಮತ್ತು ಅನಿಸಿಕೆಗಳ ಕುರಿತು ಮಾತನಾಡಿದ ಪ್ರಧಾನಿ, ಇಂದಿನ ನಮ್ಮ ಭಾವನೆಗಳು ನಮ್ಮ ನಡವಳಿಕೆಯಲ್ಲಿ ನಮಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು. “ಭವನ (ಕಟ್ಟಡ) ಬದಲಾಗಿದೆ, ಭಾವ (ಭಾವನೆಗಳು) ಸಹ ಬದಲಾಗಬೇಕು’’ ಎಂದು ಅವರು ಹೇಳಿದರು. 

“ಸಂಸತ್ತು ದೇಶಕ್ಕೆ ಸೇವೆ ಸಲ್ಲಿಸಲು ಅತ್ಯುನ್ನತ ಸ್ಥಾನವಾಗಿದೆ’’ ಎಂದ ಪ್ರಧಾನಿ ಅವರು,  ಸದನವು ಯಾವುದೇ ರಾಜಕೀಯ ಪಕ್ಷದ ಲಾಭಕ್ಕಾಗಿ ಅಲ್ಲ, ಆದರೆ ರಾಷ್ಟ್ರದ ಅಭಿವೃದ್ಧಿಗಾಗಿ ಮಾತ್ರ ಎಂದು ಬಲವಾಗಿ ಪ್ರತಿಪಾದಿಸಿದರು. ಸದಸ್ಯರಾಗಿ, ನಾವು ನಮ್ಮ ಮಾತು, ಆಲೋಚನೆ ಮತ್ತು ಕ್ರಿಯೆಗಳಿಂದ ಸಂವಿಧಾನದ ಸ್ಫೂರ್ತಿಯನ್ನು ಎತ್ತಿಹಿಡಿಯಬೇಕು ಎಂದು ಪ್ರಧಾನಿ ಹೇಳಿದರು. ಪ್ರತಿಯೊಬ್ಬ ಸದಸ್ಯರು ಸ್ಪೀಕರ್ ಸದನದ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ ಮತ್ತು ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಅವರು ಸ್ಪೀಕರ್‌ಗೆ ಭರವಸೆ ನೀಡಿದರು. ಎಲ್ಲಾ ಕಲಾಪಗಳು ಸಾರ್ವಜನಿಕರ ದೃಷ್ಟಿಯಲ್ಲಿ ನಡೆಯುತ್ತಿರುವುದರಿಂದ ಸದನದಲ್ಲಿ ಸದಸ್ಯರ ನಡವಳಿಕೆಯು ಅವರು ಆಡಳಿತ ಅಥವಾ ವಿರೋಧ ಪಕ್ಷದ ಭಾಗವಾಗಬೇಕೆ ಎಂದು ನಿರ್ಧರಿಸುವ ಅಂಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಜನಸಾಮಾನ್ಯರ ಕಲ್ಯಾಣಕ್ಕಾಗಿ ಸಾಮೂಹಿಕ ಸಂವಾದ ಮತ್ತು ಕ್ರಮಗಳ ಅಗತ್ಯವನ್ನು ಒಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು ಗುರಿಗಳ ಏಕತೆಗೆ ಒತ್ತು ನೀಡಿದರು. "ನಾವೆಲ್ಲರೂ ಸಂಸದೀಯ ಸಂಪ್ರದಾಯಗಳ ಲಕ್ಷ್ಮಣ ರೇಖೆಯನ್ನು ಪಾಲಿಸಬೇಕು" ಎಂದು ಪ್ರಧಾನಮಂತ್ರಿ ಹೇಳಿದರು.

ಸಮಾಜದ ಪರಿಣಾಮಕಾರಿ ಪರಿವರ್ತನೆಯಲ್ಲಿ ರಾಜಕೀಯದ ಪಾತ್ರವನ್ನು ಪ್ರಮುಖವಾಗಿ ಉಲ್ಲೇಖಿಸಿದ ಪ್ರಧಾನಿ, ಬಾಹ್ಯಾಕಾಶದಿಂದ ಕ್ರೀಡೆಗಳವರೆಗಿನ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರ ಕೊಡುಗೆಗಳ ಮೇಲೆ ಬೆಳಕು ಚೆಲ್ಲಿದರು. ಜಿ-20 ಅವಧಿಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಪರಿಕಲ್ಪನೆಯನ್ನು ಜಗತ್ತು ಹೇಗೆ ಸ್ವೀಕರಿಸಿತು ಎಂಬುದನ್ನು ಅವರು ನೆನಪಿಸಿಕೊಂಡರು. ಆ ದಿಸೆಯಲ್ಲಿ ಸರ್ಕಾರದ ಕ್ರಮಗಳು ಅರ್ಥಪೂರ್ಣವಾಗಿವೆ ಎಂದು ಹೇಳಿದರು. ಜನ್ ಧನ್ ಯೋಜನೆಯ 50 ಕೋಟಿ ಫಲಾನುಭವಿಗಳ ಪೈಕಿ ಹೆಚ್ಚಿನ ಖಾತೆಗಳು ಮಹಿಳೆಯರಿಗೆ ಸೇರಿದ್ದು ಎಂದು ಹೇಳಿದರು. ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮುಂತಾದ ಯೋಜನೆಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಂದು  ಅವರು ಪ್ರಸ್ತಾಪಿಸಿದರು.

ಯಾವುದೇ ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ಇತಿಹಾಸ ಸೃಷ್ಟಿಯಾಗುವ ಒಂದು ಸಮಯ ಬರುತ್ತದೆ ಎಂದು ತಿಳಿಸಿದ ಪ್ರಧಾನಿ, ಇಂದಿನ ಸಂದರ್ಭವು ಭಾರತವು ತನ್ನ ಅಭಿವೃದ್ಧಿಗಾಥೆಯ ಪಯಣವನ್ನು ಬರೆಯುವ ಐತಿಹಾಸ ಕ್ಷಣವಾಗಿದೆ ಎಂದು ಹೇಳಿದರು. ಮಹಿಳಾ ಮೀಸಲಾತಿ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಗಳು ಮತ್ತು ಚರ್ಚೆಗಳ ಮೇಲೆ ಬೆಳಕು ಚೆಲ್ಲುವ ಪ್ರಧಾನಿ, ಈ ವಿಷಯದ ಬಗ್ಗೆ ಮೊದಲ ಮಸೂದೆಯನ್ನು 1996 ರಲ್ಲಿ ಮೊದಲ ಬಾರಿಗೆ ಮಂಡಿಸಲಾಗಿತ್ತು ಎಂದು ತಿಳಿಸಿದರು. ಅಟಲ್ ಜಿ ಅವರ ಅಧಿಕಾರಾವಧಿಯಲ್ಲಿ ಮಸೂದೆಯನ್ನು ಹಲವಾರು ಬಾರಿ ಸದನದಲ್ಲಿ ಮಂಡಿಸಲಾಗಿತ್ತು, ಆದರೆ ಮಹಿಳೆಯರ ಕನಸುಗಳನ್ನು ನನಸಾಗಿಸಲು ಅಗತ್ಯವಿರುವ ಸಂಖ್ಯೆಯಲ್ಲಿ ಬೆಂಬಲವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು. "ಈ ಕಾರ್ಯವನ್ನು ಮಾಡಲು ದೇವರು ನನ್ನನ್ನು ಆಯ್ಕೆ ಮಾಡಿದ್ದಾನೆಂದು ನಾನು ನಂಬಿದ್ದೇನೆ" ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮತಿ ನೀಡಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು. “2023ರ ಸೆಪ್ಟೆಂಬರ್ 19ರ ಈ ಐತಿಹಾಸಿಕ ದಿನವು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿ ಆಗಲಿದೆ’’ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆಗಳು ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ನೀತಿ ನಿರೂಪಣೆಯಲ್ಲಿ ಹೆಚ್ಚಿನ ಮಹಿಳೆಯರನ್ನು ಸೇರ್ಪಡೆಗೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು, ಇದರಿಂದ ರಾಷ್ಟ್ರಕ್ಕೆ ಅವರ ಕೊಡುಗೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ಐತಿಹಾಸಿಕ ದಿನದಂದು ಮಹಿಳೆಯರಿಗೆ ಅವಕಾಶಗಳ ಬಾಗಿಲು ತೆರೆಯುವಂತೆ ಅವರು ಸದಸ್ಯರಿಗೆ ಕರೆ ನೀಡಿದರು. 

“ಮಹಿಳಾ ನೇತೃತ್ವದ ಅಭಿವೃದ್ಧಿಯ ನಿರ್ಣಯವನ್ನು ಮುಂದೆ ಕೊಂಡೊಯ್ಯಲು ನಮ್ಮ ಸರ್ಕಾರವು ಇಂದು ಪ್ರಮುಖ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸುತ್ತಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುವುದು ಈ ಮಸೂದೆಯ ಉದ್ದೇಶ. ನಾರಿಶಕ್ತಿ ವಂದನ ಅಧಿನಿಯಮ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ನಾರಿಶಕ್ತಿ ವಂದನ ಅಧಿನಿಯಮಕ್ಕಾಗಿ ನಾನು ರಾಷ್ಟ್ರದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಅಭಿನಂದಿಸುತ್ತೇನೆ. ಈ ಮಸೂದೆಯನ್ನು ಶಾಸನವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಾನು ರಾಷ್ಟ್ರದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಭರವಸೆ ನೀಡುತ್ತೇನೆ. ಈ ವಿಧೇಯಕವು ಒಮ್ಮತದಿಂದ ಶಾಸನವಾದರೆ ಅದರ ಶಕ್ತಿಯು ಹಲವು ಪಟ್ಟು ಹೆಚ್ಚುತ್ತದೆ ಎಂದು ನಾನು ಈ ಸದನದ ಎಲ್ಲಾ ಸಹೋದ್ಯೋಗಿಗಳಿಗೆ ವಿನಂತಿಸುತ್ತೇನೆ ಮತ್ತು ಆಗ್ರಹಿಸುತ್ತೇನೆ. ಆದ್ದರಿಂದ, ಸಂಪೂರ್ಣ ಸಹಮತದಿಂದ ಮಸೂದೆಯನ್ನು ಅಂಗೀಕರಿಸುವಂತೆ ನಾನು ಉಭಯ ಸದನಗಳಲ್ಲಿ ವಿನಂತಿಸುತ್ತೇನೆ’’ ಎಂದು ಪ್ರಧಾನಿ ಭಾಷಣವನ್ನು ಮುಕ್ತಾಯಗೊಳಿಸಿದರು. 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
How Kibithoo, India’s first village, shows a shift in geostrategic perception of border space

Media Coverage

How Kibithoo, India’s first village, shows a shift in geostrategic perception of border space
NM on the go

Nm on the go

Always be the first to hear from the PM. Get the App Now!
...
PM announces ex-gratia for the victims of Kasganj accident
February 24, 2024

The Prime Minister, Shri Narendra Modi has announced ex-gratia for the victims of Kasganj accident. An ex-gratia of Rs. 2 lakh from PMNRF would be given to the next of kin of each deceased and the injured would be given Rs. 50,000.

The Prime Minister Office posted on X :

"An ex-gratia of Rs. 2 lakh from PMNRF would be given to the next of kin of each deceased in the mishap in Kasganj. The injured would be given Rs. 50,000"