ಶೇರ್
 
Comments
“ಭಾರತದ ಕನಸುಗಳನ್ನು ನನಸು ಮಾಡಲು ಭಾರತದ ಕಾರ್ಮಿಕ ಶಕ್ತಿಯದ್ದು ಬಹುದೊಡ್ಡ ಪಾತ್ರವಿದೆ ಮತ್ತು ಅಮೃತ ಕಾಲದ ನಿರೀಕ್ಷೆಗಳಂತೆ ರಾಷ್ಟ್ರಕಟ್ಟಬೇಕಿದೆ”
ಭಾರತವನ್ನು ಮತ್ತೊಮ್ಮೆ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದ ಕೀರ್ತಿ ನಮ್ಮ ಕಾರ್ಮಿಕರಿಗೆ ಸಲ್ಲುತ್ತದೆ”
“ಕಳೆದ ಎಂಟು ವರ್ಷಗಳಲ್ಲಿ ಗುಲಾಮಗಿರಿ ಮನಸ್ಥಿತಿ ಮತ್ತು ಗುಲಾಮಗಿರಿ ಕಾಲದ ಕಾನೂನುಗಳನ್ನು ತೆಗೆದುಹಾಕಲು ಸರ್ಕಾರ ಹಲವಾರು ಉಪ ಕ್ರಮಗಳನ್ನು ತೆಗೆದುಕೊಂಡಿದೆ”
“2047 ರ ಅಮೃತ ಕಾಲದ ದೃಷ್ಟಿಕೋನವನ್ನು ಕಾರ್ಮಿಕ ಸಚಿವಾಲಯ ಸಿದ್ಧಪಡಿಸುತ್ತಿದೆ”
“ಭವಿಷ್ಯದಲ್ಲಿ ಹೊಂದಿಕೊಳ್ಳುವಂತಹ ಕೆಲಸದ ಸ್ಥಳಗಳು, ಮನೆಯಿಂದಲೇ ಕೆಲಸ ಮಾಡುವ ಪರಿಸರ ವ್ಯವಸ್ಥೆ ಮತ್ತು ಹೊಂದಿಕೆಯಾಗುವಂತೆ ಕೆಲಸದ ಅವಧಿ ಅಗತ್ಯವಾಗಿದೆ”
“ಮಹಿಳಾ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆಗಾಗಿ ಹೊಂದಿಕೊಳ್ಳುವಂತಹ ಕೆಲಸದ ಸ್ಥಳಗಳನ್ನು ಅವಕಾಶವನ್ನಾಗಿ ಬಳಸಿಕೊಳ್ಳಬಹುದಾಗಿದೆ”
“ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ‘ಸೆಸ್’ನ ಸಂಪೂರ್ಣ ಬಳಕೆ ಅಗತ್ಯ. ರಾಜ್ಯಗಳು 38,000 ಕೋಟಿ ರೂಪಾಯಿ ಹಣವನ್ನು ಬಳಸಿಕೊಂಡಿಲ್ಲ”

ಪ್ರಧಾನಮಂತ್ರಿ ಅವರು ತಿರುಪತಿ ಬಾಲಾಜಿಗೆ ನಮಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು. ಭಾರತದ ಕನಸುಗಳನ್ನು ನನಸು ಮಾಡಲು ಭಾರತದ ಕಾರ್ಮಿಕ ಶಕ್ತಿಯದ್ದು ಬಹುದೊಡ್ಡ ಪಾತ್ರವಿದೆ ಮತ್ತು ಅಮೃತ ಕಾಲದ ನಿರೀಕ್ಷೆಗಳಂತೆ ರಾಷ್ಟ್ರಕಟ್ಟಬೇಕಿದೆ. ಈ ಆಲೋಚನೆಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಒತ್ತಿ ಹೇಳಿದರು.Q

ಪ್ರಧಾನಮಂತ್ರಿ ಶ್ರಮ್ – ಯೋಗಿ ಮಾನ್ ಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗಳು ಕಾರ್ಮಿಕರಿಗೆ ಒಂದು ರೀತಿಯ ಸುರಕ್ಷತೆಯನ್ನು ನೀಡಿವೆ. ಈ ಕಾರ್ಯಕ್ರಮಗಳು ಕಾರ್ಮಿಕರ ಕಠಿಣ ಪರಿಶ್ರಮದ ಕೆಲಸ ಮತ್ತು ಕೊಡುಗೆಗೆ ಮಾನ್ಯತೆ ನೀಡುತ್ತದೆ. “ಅಧ್ಯಯನದ ಪ್ರಕಾರ ಸಾಂಕ್ರಾಮಿಕ ಸಂದರ್ಭದಲ್ಲಿ ತುರ್ತು ಸಾಲ ಖಾತರಿ ಯೋಜನೆ 1.5 

ಕೋಟಿ ಉದ್ಯೋಗಗಳನ್ನು ರಕ್ಷಿಸಿದೆ” “ಕಾರ್ಮಿಕರಿಗೆ ಅಗತ್ಯವಾಗಿರುವ ಸಂದರ್ಭದಲ್ಲಿ ದೇಶ ಅವರಿಗೆ ಬೆಂಬಲ ನೀಡಿದೆ, ಇದೇ ರೀತಿಯಲ್ಲಿ ಕಾರ್ಮಿಕರು ಸಾಂಕ್ರಾಮಿಕದಿಂದ ಹೊರ ಬರಲು ತಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿದ್ದಾರೆ” ಎಂದು ಹೇಳಿದರು. ಭಾರತವನ್ನು ಮತ್ತೊಮ್ಮೆ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದ ಕೀರ್ತಿ ನಮ್ಮ ಕಾರ್ಮಿಕರಿಗೆ ಸಲ್ಲುತ್ತದೆ” ಎಂದರು.  

ಇ-ಶ್ರಮ್ ಪೋರ್ಟಲ್ ಕಾರ್ಮಿಕ ಶಕ್ತಿಯನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರುವ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಒಂದು ವರ್ಷದಲ್ಲಿ ಪೋರ್ಟಲ್ ನಲ್ಲಿ 400 ವಿವಿಧ ವಲಯಗಳಲ್ಲಿ ಸುಮಾರು 28 ಕೋಟಿ ಕಾರ್ಮಿಕರು ನೋಂದಣಿಯಾಗಿದ್ದಾರೆ. ಇದರಿಂದ ವಿಶೇಷವಾಗಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಮನೆಗೆಲಸದವರಿಗೆ ಲಾಭವಾಗಿದೆ. ಇದಕ್ಕಾಗಿ ರಾಜ್ಯ ಪೋರ್ಟಲ್ ಗಳನ್ನು ಇ-ಶ್ರಮ್ ಪೋರ್ಟಲ್ ನೊಂದಿಗೆ ಸಂಯೋಜಿಸುವಂತೆ ಅವರು ಎಲ್ಲಾ ಸಚಿವರಿಗೆ ಮನವಿ ಮಾಡಿದರು.

ಕಳೆದ ಎಂಟು ವರ್ಷಗಳಲ್ಲಿ ಗುಲಾಮಗಿರಿ ಮನಸ್ಥಿತಿ ಮತ್ತು ಗುಲಾಮಗಿರಿ ಕಾಲದ ಕಾನೂನುಗಳನ್ನು ತೆಗೆದುಹಾಕಲು ಸರ್ಕಾರ ಹಲವಾರು ಉಪ ಕ್ರಮಗಳನ್ನು ತೆಗೆದುಕೊಂಡಿದೆ. “ಇಂತಹ ಕಾರ್ಮಿಕ ಕಾನೂನುಗಳನ್ನು ದೇಶ ಇಂದು ಬದಲಿಸುತ್ತಿದೆ, ಸುಧಾರಣೆ ತರುತ್ತಿದೆ, ಸರಳೀಕರಣಗೊಳಿಸುತ್ತಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಇದೇ ಮನಸ್ಥಿತಿಯಿಂದ 29 ಕಾರ್ಮಿಕ ಕಾನೂನುಗಳನ್ನು 4 ಸರಳ ಕಾರ್ಮಿಕ ಸಂಹಿತೆಗಳನ್ನಾಗಿ ಪರಿವರ್ತಿಸಲಾಗಿದೆ”. ಇದರಿಂದ ಕನಿಷ್ಠ ವೇತನ, ಉದ್ಯೋಗ ಖಾತರಿ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಯ ಮೂಲಕ ಕಾರ್ಮಿಕರ ಸಬಲೀಕರಣವನ್ನು ಖಾತರಿಪಡಿಸಲಾಗುತ್ತಿದೆ ಎಂದು ಹೇಳಿದರು.  

ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಯ ಅಗತ್ಯವನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೂ ಅವುಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಮೂಲಕ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸಂಪೂರ್ಣ ಪ್ರಯೋಜನವನ್ನು ಪಡೆಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಗಿಗ್ ಆರ್ಥಿಕತೆ ಮತ್ತು ಆನ್ ಲೈನ್ ವೇದಿಕೆಯ ಸೌಕರ್ಯಗಳಡಿ ಬೆಳವಣಿಗೆ ಕಾಣುತ್ತಿರುವ ಆಯಾಮಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. “ಸೂಕ್ತ ನೀತಿಗಳು ಮತ್ತು ಪ್ರಯತ್ನಗಳಿಂದಾಗಿ ಈ ವಲಯದಲ್ಲಿ ಭಾರತ ಜಾಗತಿಕ ನಾಯಕನಾಗುವತ್ತ ಸಾಗಿದೆ” ಎಂದರು.

2047 ರ ಅಮೃತ ಕಾಲದ ದೃಷ್ಟಿಕೋನವನ್ನು ಕಾರ್ಮಿಕ ಸಚಿವಾಲಯ ಸಿದ್ಧಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು. ಭವಿಷ್ಯದಲ್ಲಿ ಹೊಂದಿಕೊಳ್ಳುವಂತಹ ಕೆಲಸದ ಸ್ಥಳಗಳು, ಮನೆಯಿಂದಲೇ ಕೆಲಸ ಮಾಡುವ ಪರಿಸರ ವ್ಯವಸ್ಥೆ ಮತ್ತು ಹೊಂದಿಕೆಯಾಗುವಂತೆ ಕೆಲಸದ ಅವಧಿ ನಿಗದಿಪಡಿಸುವುದು ಅಗತ್ಯವಾಗಿದೆ. ಮಹಿಳಾ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆಗಾಗಿ ಹೊಂದಿಕೊಳ್ಳುವಂತಹ ಕೆಲಸದ ಸ್ಥಳಗಳನ್ನು ಅವಕಾಶವನ್ನಾಗಿಯೂ ಬಳಸಿಕೊಳ್ಳಬಹುದಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕೆಂಪುಕೋಟೆಯ ಮೇಲೆ ಆಗಸ್ಟ್ 15 ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ದೇಶದ ಮಹಿಳಾ ಶಕ್ತಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾಗಿ ತಿಳಿಸಿದರು. “ಮಹಿಳಾ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಭಾರತ ತ್ವರಿತವಾಗಿ ತನ್ನ ಗುರಿಗಳನ್ನು ಸಾಧಿಸಬಹುದು”. ದೇಶದಲ್ಲಿ ಹೊಸದಾಗಿ ಹೊರ ಹೊಮ್ಮುತ್ತಿರುವ ಕ್ಷೇತ್ರಗಳಲ್ಲಿ ಮಹಿಳೆಯರಿಗಾಗಿ ಏನು ಮಾಡಬಹುದು ಎಂಬ ದಿಕ್ಕಿನಲ್ಲಿಯೂ ಆಲೋಚಿಸುವ ಅಗತ್ಯವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಭಾರತದ ಜನಸಂಖ್ಯೆಯ ಲಾಭಗಳ ಬಗ್ಗೆ ಟಿಪ್ಪಣಿ ಮಾಡಿದ ಪ್ರಧಾನಮಂತ್ರಿ ಅವರು, 21 ನೇ ಶತಮಾನದಲ್ಲಿ ಭಾರತದ ಯಶಸ್ಸು ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. “ಜಾಗತಿಕವಾಗಿ ಸೃಷ್ಟಿಯಾಗುತ್ತಿರುವ ಅವಕಾಶಗಳ ಲಾಭವನ್ನು ಪಡೆಯಲು ಅತ್ಯುನ್ನತ ಗುಣಮಟ್ಟದ ಕೌಶಲ್ಯಹೊಂದಿದ ಕಾರ್ಮಿಕಶಕ್ತಿಯನ್ನು ರಚಿಸುವ ಅಗತ್ಯವಿದೆ”. ಜಗತ್ತಿನ ಹಲವು ರಾಷ್ಟ್ರಗಳ ಜೊತೆ ವಲಸೆ ಮತ್ತು ಚಲನಶೀಲತೆ ಕುರಿತ ಸಹಭಾಗಿತ್ವದ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ ಎಂದು ಪ್ರಧಾನಮಂತ್ರಿ ಅವರು ಬೆಳಕು ಚೆಲ್ಲಿದರು ಮತ್ತು ದೇಶದ ಎಲ್ಲಾ ರಾಜ್ಯಗಳು ಇವುಗಳಲ್ಲಿ ಸಿಗುವ ಅವಕಾಶದ ಲಾಭ ಪಡೆಯಬೇಕು ಎಂದು ಒತ್ತಾಯಿಸಿದರು. “ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು, ಒಬ್ಬರಿಂದ ಮತ್ತೊಬ್ಬರು ಕಲಿಯಬೇಕು” ಎಂದು ಹೇಳಿದರು.

ಕಟ್ಟಡ ಮತ್ತು ನಿರ್ಮಾಣ ವಲಯದ ಕಾರ್ಮಿಕರು ನಮ್ಮ ಕಾರ್ಯಶಕ್ತಿಯ ಅವಿಭಾಜ್ಯ ಅಂಗ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಂದರ್ಭದಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗಾಗಿ ಇರುವ ‘ಸೆಸ್’ನ ಸಂಪೂರ್ಣ ಬಳಕೆ ಅಗತ್ಯ ಎಂಬುದನ್ನು ಮನಗಾಣಬೇಕು. ರಾಜ್ಯಗಳು 38,000 ಕೋಟಿ ರೂಪಾಯಿ ಸೆಸ್ ಹಣವನ್ನು ಬಳಸಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯ ಜೊತೆಗೆ ಇಎಸ್ಐಸಿ ಯನ್ನು ಹೇಗೆ ಹೆಚ್ಚು ಹೆಚ್ಚು ಕಾರ್ಮಿಕರು ಬಳಸಿಕೊಂಡು ಪ್ರಯೋಜನ ಪಡೆಯಬಹುದು ಎಂಬ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಒತ್ತಾಯಿಸಿದರು. ನಮ್ಮ ಈ ಸಾಮೂಹಿಕ ಪ್ರಯತ್ನಗಳು ದೇಶದ ನಿಜವಾದ ಸಾಮರ್ಥ್ಯವನ್ನು ನಿರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಎಲ್ಲರಿಗೂ ವಾಗ್ದಾನ ನೀಡುವ ಮೂಲಕ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಗಿಸಿದರು.

ಹಿನ್ನೆಲೆ

ಆಂಧ್ರಪ್ರದೇಶದ ತಿರುಪತಿಯಲ್ಲಿ 2022, ಆಗಸ್ಟ್ 25-26 ರಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಎರಡು ದಿನಗಳ ಸಮ್ಮೇಳನ ಆಯೋಜಿಸಿದೆ. ಪ್ರಮುಖ ಕಾರ್ಮಿಕ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಿಂದ ಸಮ್ಮೇಳನ ಆಯೋಜಿಸಲಾಗಿದೆ. ಉತ್ತಮ ನೀತಿಗಳನ್ನು ರೂಪಿಸಲು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಮತ್ತಷ್ಟು ಸಂಯೋಜನೆಯನ್ನು ಸೃಷ್ಟಿಸಲು ಸಮ್ಮೇಳನ ನೆರವಾಗಲಿದೆ.

ಸಾಮಾಜಿಕ ಸುರಕ್ಷತೆಯನ್ನು ಸಾರ್ವತ್ರೀಕರಣಗೊಳಿಸಲು ಸಾಮಾಜಿಕ ಭದ್ರತಾ ಯೋಜನೆಗಳ ಜಾರಿ, ಇ – ಶ್ರಮ್ ಪೋರ್ಟಲ್ ಅನ್ನು ಸಂಯೋಜಿಸುವ ಬಗ್ಗೆ ಸಮ್ಮೇಳನ ನಾಲ್ಕು ವಿಷಯಾಧರಿತ ಗೋಷ್ಠಿಗಳನ್ನು ಹೊಂದಿದೆ. ರಾಜ್ಯ ಸರ್ಕಾರಗಳು ನಡೆಸುವ ಇಎಸ್ಐ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆರೈಕೆಯನ್ನು ಸುಧಾರಿಸಲು ಆರೋಗ್ಯದಿಂದ ಸಮೃದ್ಧಿ ಮತ್ತು ಪಿಎಂಜೆಎವೈನೊಂದಿಗೆ ಸಂಯೋಜನೆ: ಕಾರ್ಮಿಕ ಸಂಹಿತೆಗಳಲ್ಲಿ ನಿಯಮಗಳನ್ನು ರೂಪಿಸುವ ಮತ್ತು ಅವುಗಳ ಅನುಷ್ಠಾನದ ವಿಧಾನಗಳು; ಶ್ರಮೇವ್ ಜಯತೆ@2047 ನ ದೃಷ್ಟಿಕೋನವನ್ನು ಕೇಂದ್ರೀಕರಿಸುವ ಹಾಗೂ ಕೆಲಸದ ಸಮಾನ ಪರಿಸ್ಥಿತಿಗಳು, ಗಿಗ್ ಮತ್ತು ಫ್ಲಾಟ್ ಫಾರ್ಮ್ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ, ಕೆಲಸದಲ್ಲಿ ಲಿಂಗ ಸಮಾನತೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಮ್ಮೇಳನ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
India's services sector PMI expands at second best in 13 years

Media Coverage

India's services sector PMI expands at second best in 13 years
...

Nm on the go

Always be the first to hear from the PM. Get the App Now!
...
PM congratulates Rashtrapati Ji on being conferred highest civilian award of Suriname
June 06, 2023
ಶೇರ್
 
Comments

The Prime Minister, Shri Narendra Modi has congratulated Rashtrapati Ji on being conferred the highest civilian award of Suriname – Grand Order of the Chain of the Yellow Star.

In response to a tweet by the President of India, the Prime Minister said;

"Congratulations to Rashtrapati Ji on being conferred the highest civilian award of Suriname – Grand Order of the Chain of the Yellow Star. This special gesture from the Government and people of Suriname symbolizes the enduring friendship between our countries."