Prime Minister Modi felicitates 18 children with National Bravery Awards

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 18 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು. ಈ ಪೈಕಿ ಮೂರು ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಲಾಗಿದೆ.

ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಅವರ ಶೌರ್ಯದ ಕಾರ್ಯಗಳು ವ್ಯಾಪಕವಾಗಿ ಚರ್ಚಿತವಾಗಿವೆಮತ್ತು ಮಾಧ್ಯಮಗಳಲ್ಲಿ ಮುಖ್ಯವಾಗಿ ಪ್ರತಿಬಿಂಬಿತವಾಗಿವೆ ಎಂದರು. ಹೀಗಾಗಿ, ಅವರು ಇತರ ಮಕ್ಕಳಿಗೆ ಸ್ಫೂರ್ತಿ ತುಂಬಿದ್ದಾರೆ ಮತ್ತು ಇತರ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಿದ್ದಾರೆ ಎಂದರು.

 

ಈ ಪ್ರಶಸ್ತಿ ವಿಜೇತರ ಪೈಕಿ ಬಹುತೇಕರು ಗ್ರಾಮೀಣ ಪ್ರದೇಶ ಮತ್ತು ವಿನಮ್ರ ಹಿನ್ನೆಲೆಯವರು ಎಂದು ಪ್ರಧಾನಿ ಹೇಳಿದರು. ಅವರು ತಮ್ಮ ದೈನಂದಿನ ಹೋರಾಟಗಳೇ ಬಹುಶಃ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ನಿಭಾಯಿಸಲು ಅವರಲ್ಲಿ ಚೈತನ್ಯ ತುಂಬಲು ನೆರವಾಗಿರಬಹುದು ಎಂದು ಅವರು ಹೇಳಿದರು.

ಎಲ್ಲ ಪ್ರಶಸ್ತಿ ವಿಜೇತರು, ಅವರ ಪಾಲಕರು ಮತ್ತು ಶಾಲಾ ಶಿಕ್ಷಕರಿಗೂ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ಧೈರ್ಯದ ನಿದರ್ಶನಗಳನ್ನು ದಾಖಲೆ ಮಾಡಿದವರಿಗೂ ಮತ್ತು ಅವರಿಗೆ ಅದಕ್ಕೆ ಗಮನ ಸೆಳೆಯಲು ಸಹಾಯ ಮಾಡಿದವರ ಬಗ್ಗೆ ಕೂಡಾ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂಥ ಮನ್ನಣೆಯ ಬಳಿಕ, ಪ್ರಶಸ್ತಿ ವಿಜೇತರ ಬಗ್ಗೆ ಭವಿಷ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ನಿರೀಕ್ಷೆ ಇರುತ್ತದೆ ಎಂದು ಪ್ರಧಾನಿ ಹೇಳಿದರು. ಅವರ ಭವಿಷ್ಯದ ಪ್ರಯತ್ನಗಳಿಗೆ ಪ್ರಧಾನಿ ಶುಭ ಕೋರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಮೇನಕಾ ಗಾಂಧಿ ಈ ಸಂದರ್ಭದಲ್ಲಿ ಹಾಜರಿದ್ದರು. 

 

 

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Social security cover up from 24% in 2019 to 64%: ILO report

Media Coverage

Social security cover up from 24% in 2019 to 64%: ILO report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಜೂನ್ 2025
June 12, 2025

Building a Viksit Bharat with Innovation and Inclusion under the Leadership of PM Modi