ಶೇರ್
 
Comments
The farmers of Meghalaya have broken the record of five years of production during the year 2015-16, I appreciate them for this: PM Modi
The agricultural sector of our country has shown the path to the whole world in many cases: PM Modi
Our aim is double farmers' income by 2022 as well as address the challenges farmers face: PM Modi
More than 11 crore Health Health Cards have been distributed in the country: PM Modi
Under Pradhan Mantri Krishi Sinchai Yojana, irrigation facilities are being ensured for farms: PM Modi
We have announced Operation Greens in this years budget. Farmers growing Tomato, Onion and Potato have been given TOP priority: PM Modi
We are committed to ensure that benefits of MSP reach the farmers: PM Modi
The government has decided that for the notified crops, the minimum support price, will be declared at least 1.5 times their input cost: PM Modi
Agriculture Marketing Reform is being done at a very large scale in the country for ensuring fair price of crop: PM Modi
The government is promoting the Farmer Producer Organization- FPO: PM Modi
India has immense scope for organic farming. Today there is more than 22 lakh hectares of land in the country under organic farming: PM Modi
I urge the farmers not to burn crop residue. It harms the soil as well as poses threat to environment: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪೂಸಾ ಕ್ಯಾಂಪಸ್ ನ ಐ.ಎ.ಆರ್.ಐ. ಮೇಳಾ ಮೈದಾನದಲ್ಲಿ ನಡೆದ ಕೃಷಿ ಉನ್ನತಿ ಮೇಳಕ್ಕೆ ಭೇಟಿ ನೀಡಿದ್ದರು. ಅವರು ಅಲ್ಲಿ ವಿವಿಧ ವಿಷಯಗಳ ಪೆವಿಲಿಯನ್ ಗಳನ್ನು ಮತ್ತು ಜೈವಿಕ ಮೇಳ ಕುಂಭಕ್ಕೆ ಭೇಟಿ ನೀಡಿದರು. ಅವರು 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಸಾವಯವ ಉತ್ಪನ್ನಗಳ ಕುರಿತ ಇ- ಮಾರುಕಟ್ಟೆ ಪೋರ್ಟಲ್ ಅನ್ನೂ ಉದ್ಘಾಟಿಸಿದರು. ಕೃಷಿ ಕರ್ಮಿ ಪ್ರಶಸ್ತಿ ಮತ್ತು ದೀನ ದಯಾಳ್ ಉಪಾಧ್ಯಾಯ ಕೃಷಿ ಪ್ರೋತ್ಸಾಹನ್ ಪುರಸ್ಕಾರವನ್ನೂ ಅವರು ಪ್ರದಾನ ಮಾಡಿದರು.

ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಇಂಥ ಉನ್ನತಿ ಮೇಳಗಳು ನವ ಭಾರತಕ್ಕೆ ಹಾದಿ ಮಾಡಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಇಂದು ತಮಗೆ ನವ ಭಾರತ – ರೈತರು ಮತ್ತು ವಿಜ್ಞಾನಿಗಳ ಕುರಿತು ಒಂದೇ ದಿನ ಮಾತನಾಡುವ ಅವಕಾಶ ದೊರೆತಿದೆ ಎಂದರು. ಕೃಷಿಯ ಪರಿವರ್ತನೆಗಾಗಿ ರೈತರು ಮತ್ತು ವಿಜ್ಞಾನಿಗಳು ಒಟ್ಟಾಗಿ ದುಡಿಯಬೇಕು ಎಂದರು.

ಮೇಘಾಲಯ ರಾಜ್ಯವನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿದ ಪ್ರಧಾನಿ, ಆ ರಾಜ್ಯ ಅವಲೋಕನದ ಹಾದಿಯಲ್ಲಿದ್ದು, ಕೃಷಿಯಲ್ಲಿನ ತನ್ನ ಸಾಧನೆಗಾಗಿ ಪ್ರಶಸ್ತಿಯನ್ನೂ ಪಡೆದಿದೆ,

ಸ್ವಾತಂತ್ರ್ಯ ಬಂದ ಕಾಲದಿಂದ ಕೃಷಿಯಲ್ಲಿ ಸಾಧನೆ ಮಾಡಿದ ನಮ್ಮ ರೈತರ ಕಠಿಣ ಶ್ರಮ ಮತ್ತು ಸ್ಫೂರ್ತಿಗೆ ಮೆಚ್ಚುಗೆ ಸೂಚಿಸಿದರು. ಇಂದು ಆಹಾರಧಾನ್ಯ, ಬೇಳೆ ಕಾಳುಗಳು, ಹಣ್ಣು ಮತ್ತು ತರಕಾರಿ ಹಾಗೂ ಹಾಲಿನ ದಾಖಲೆಯ ಉತ್ಪಾದನೆ ಆಗುತ್ತಿದೆ ಎಂದು ಹೇಳಿದರು. ಇಂದು ಕೃಷಿಯಲ್ಲಿ ಮಹತ್ವದ ಸವಾಲುಗಳಿವೆ, ಇದು ರೈತರ ಆದಾಯವನ್ನು ತಗ್ಗಿಸುತ್ತಿದೆ ಮತ್ತು ಅವರ ನಷ್ಟ ಮತ್ತು ವೆಚ್ಚವನ್ನು ಹೆಚ್ಚಿಸುತ್ತಿದೆ ಎಂದೂ ಹೇಳಿದರು. ಈ ಸವಾಲುಗಳನ್ನು ಎದುರಿಸಲು ಸರ್ಕಾರ ಸಮಗ್ರ ದೃಷ್ಟಿಕೋನದೊಂದಿಗೆ ಕಾರ್ಯೋನ್ಮುಖವಾಗಿದೆ ಎಂದರು. ರೈತರ ಬದುಕನ್ನು ಸುಗಮಗೊಳಿಸಲು ಅವರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿ ಮುಂದುವರಿದಿದೆ ಎಂದರು.

ಈ ನಿರ್ಧಾರಕ್ಕೆ ಸಂಬಂಧಿಸಿದ ಪ್ರಗತಿಯನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ, ಈವರೆಗೆ 11 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಯೂರಿಯಾಗೆ ಶೇ.100ರಷ್ಟು ಬೇವು ಲೇಪನ ಮಾಡಿದ ಫಲವಾಗಿ ಗೊಬ್ಬರದ ವೆಚ್ಚ ಕಡಿಮೆಯಾಗಿದೆ ಮತ್ತು ಉತ್ಪಾದನೆ ಹೆಚ್ಚಳವಾಗಿದೆ ಎಂದರು.

ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಮೂಲಕ, ವಿಮಾ ಕಂತನ್ನು ತಗ್ಗಿಸಲಾಗಿದೆ, ವಿಮೆ ಮೇಲಿನ ಮಿತಿಯನ್ನು ತೆಗೆಯಲಾಗಿದೆ ಮತ್ತು ರೈತರಿಗೆ ವಿತರಿಸಲುವ ಕ್ಲೇಮ್ ಮೊತ್ತ ಹೆಚ್ಚಳವಾಗಿದೆ ಎಂದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಎಲ್ಲ ಜಮೀನಿಗೂ ನೀರಿನ ಕಲ್ಪನೆ ಮೂಡಿಸಿದೆ. 80 ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ವೆಚ್ಚ ಮಾಡಲಾಗಿದೆ ಎಂದರು.

ಕಿಸಾನ್ ಸಂಪದ ಯೋಜನೆ ಜಮೀನಿನಿಂದ ಮಾರುಕಟ್ಟೆವರೆಗಿನ ಪೂರೈಕೆ ಸರಪಳಿಯನ್ನು ಬಲಪಡಿಸಲು ನೆರವಾಗಿದೆ ಮತ್ತು ಆಧುನಿಕ ಕೃಷಿ ಮೂಲಸೌಕರ್ಯಗಳನ್ನು ಸೃಷ್ಟಿಸಿದೆ. ಇತ್ತೀಚಿನ ಬಜೆಟ್ ನಲ್ಲಿ ಪ್ರಕಟಿಸಲಾದ ಹಸಿರು ಕಾರ್ಯಾಚರಣೆ ಹಣ್ಣು ಮತ್ತು ತರಕಾರಿ ಅದರಲ್ಲೂ ಟೊಮೇಟೋ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಯುವ ರೈತರಿಗೆ ಲಾಭದಾಯಕವಾಗಿದೆ.

ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಹಲವು ಮಾದರಿ ಕಾಯಿದೆಗಳನ್ನು ರೂಪಿಸಲಾಗಿದ್ದು, ಅವುಗಳನ್ನು ಅನುಷ್ಠಾನಗೊಳಿಸುವಂತೆ ರಾಜ್ಯಗಳಿಗೆ ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದರು.

ರೈತರಿಗೆ ಆಧುನಿಕ ಬಿತ್ತನೆ ಬೀಜ, ಅಗತ್ಯ ವಿದ್ಯುತ್ ಪೂರೈಕೆ ಮತ್ತು ಸುಗಮ ಮಾರುಕಟ್ಟೆ ಪ್ರವೇಶದ ಖಾತ್ರಿ ಒದಗಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ. ಎಲ್ಲ ಅಧಿಸೂಚಿತ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕನಿಷ್ಠ ವೆಚ್ಚದ ಒಂದೂವರೆ ಪಟ್ಟು ಇರಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು. ಈ ಉದ್ದೇಶಕ್ಕಾಗಿ ಕಾರ್ಮಿಕರು, ಯಂತ್ರಗಳ ಬಾಡಿಗೆ, ಬೀಜ ಮತ್ತು ಗೊಬ್ಬರದ ವೆಚ್ಚ, ರಾಜ್ಯ ಸರ್ಕಾರಗಳಿಗೆ ನೀಡಲಾಗುವ ಕಂದಾಯ, ಬಂಡವಾಳದ ಮೇಲಿನ ಬಡ್ಡಿ ಮತ್ತು ಗುತ್ತಿಗೆ ಜಮೀನಿನ ಬಾಡಿಗೆಯೂ ಈ ವೆಚ್ಚದಲ್ಲಿ ಸೇರುತ್ತದೆ ಎಂದರು.

ಕೃಷಿ ಮಾರುಕಟ್ಟೆ ಸುಧಾರಣೆಗಾಗಿ ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಗ್ರಾಮೀಣ ಚಿಲ್ಲರೆ ಮಾರುಕಟ್ಟೆಗಳನ್ನು ಸಗಟು ಹಾಗೂ ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವುದು ಮಹತ್ವವಾಗಿದೆ ಎಂದರು. ಇತ್ತೀಚಿನ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣ ಚಿಲ್ಲರೆ ಕೃಷಿ ಮಾರುಕಟ್ಟೆಗಳ ಕಲ್ಪನೆ ನೀಡಲಾಗಿದೆ ಎಂದರು. 22000 ಗ್ರಾಮೀಣ ಹಟ್ ಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಎಪಿಎಂಸಿ ಮತ್ತು ಇ-ನಾಮ್ ವೇದಿಕೆಯೊಂದಿಗೆ ಸಂಯೋಜಿಸಲಾಗುವುದು ಎಂದರು.

ರೈತರ ಉತ್ವಾದನೆ ಸಂಘಟನೆಗಳ ಮಹತ್ವವನ್ನೂ ಅವರು ಪ್ರತಿಪಾದಿಸಿದರು. ರೈತ ಉತ್ಪಾದನೆ ಸಂಸ್ಥೆಗಳಿಗೆ ಸಹಕಾರ ಸಂಘಗಳ ರೀತಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಸಾವಯವ ಉತ್ಪನ್ನಗಳಿಗಾಗಿ ಇ ಮಾರುಕಟ್ಟೆ ಪೋರ್ಟಲ್ ನೊಂದಿಗೆ ಕೃಷಿ ಮಾರುಕಟ್ಟೆ ಸುಧಾರಣೆಗೆ ಹೊಸ ಅಧ್ಯಾಯ ಬರೆಯಲಾಗಿದೆ ಎಂದರು.

ಹಸಿರು ಕ್ರಾಂತಿಯ ಮತ್ತು ಶ್ವೇತ ಕ್ರಾಂತಿಯ ಜೊತೆಗೆ ನಾವು, ಸಾವಯವ ಕ್ರಾಂತಿ, ಜಲ ಕ್ರಾಂತಿ, ನೀಲಿ ಕ್ರಾಂತಿ ಮತ್ತು ಸಿಹಿ ಕ್ರಾಂತಿಗೂ ಒತ್ತು ನೀಡಬೇಕು ಎಂದರು. ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ.ಗಳು) ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು.

ರೈತರಿಗೆ ಜೇನು ನೊಣಗಳು ಹೇಗೆ ಹೆಚ್ಚುವರಿ ಆದಾಯದ ಮೂಲವಾಗಿವೆ ಎಂಬುದನ್ನು ಪ್ರಧಾನಿ ವಿವರಿಸಿದರು. ಅದೇ ರೀತಿ, ಸೌರ ಕೃಷಿಯ ಪ್ರಯೋಜನದ ಬಗ್ಗೆಯೂ ಮಾತನಾಡಿದರು. ಕಳೆದ ಮೂರು ವರ್ಷಗಳಲ್ಲಿ 2.75 ಲಕ್ಷ ಸೌರ ಪಂಪ್ ಗಳು ರೈತರನ್ನು ತಲುಪಿವೆ ಎಂದರು. ಜೈವಿಕ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ, ಜೈವಿಕ ಅನಿಲ ಇತ್ಯಾದಿ ಮಾಡುವ ಗೋ ಬರ್ ಧನ್ ಯೋಜನೆಯ ಬಗ್ಗೆಯೂ ಪ್ರಧಾನಿ ಮಾತನಾಡಿದರು.

ಕಳೆ ಸುಡುವುದು ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದ ಪ್ರಧಾನಿ, ಕಳೆ ಸುಡುವ ಬದಲು ಯಂತ್ರಗಳ ಮೂಲಕ ಮತ್ತೆ ಅದನ್ನು ಭೂಮಿಯ ಒಳಗೆ ಸೇರಿಸಿದರೆ ಅದರಿಂದ ಪ್ರಯೋಜನಕಾರಿ ಪರಿಣಾಮ ಆಗುತ್ತದೆ ಎಂದರು.

ಅಗತ್ಯ ಪ್ರಮಾಣದಲ್ಲಿ ಕೃಷಿ ಸಾಲದ ಲಭ್ಯತೆಯ ಖಾತ್ರಿಗೆ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ಹೇಳಿದರು. ಇಂತಹ ಘಟನೆಗಳನ್ನು ದೂರದ ಪ್ರದೇಶಗಳಲ್ಲಿ ನಡೆಸಬೇಕು ಎಂದು ಪ್ರಧಾನಿ ಹೇಳಿದರು. ಇಂತಹ ಘಟನೆಗಳ ಪರಿಣಾಮ ವಿಶ್ಲೇಷಣೆಗೂ ಅವರು ಕರೆ ನೀಡಿದರು.

Click here to read full text speech

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Mann KI Baat Quiz
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
India achieves 40% non-fossil capacity in November

Media Coverage

India achieves 40% non-fossil capacity in November
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಡಿಸೆಂಬರ್ 2021
December 04, 2021
ಶೇರ್
 
Comments

Nation cheers as we achieve the target of installing 40% non fossil capacity.

India expresses support towards the various initiatives of Modi Govt.