ಘನ ಸರ್ವೋನ್ನತ ನ್ಯಾಯಾಲಯ ಅಯೋಧ್ಯೆ ಕುರಿತಂತೆ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಪ್ರಧಾನಮಂತ್ರಿ ಮೋದಿ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ದೇಶದ ಜನತೆಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ. “ಘನ ಸರ್ವೋನ್ನತ ನ್ಯಾಯಾಲಯ ಅಯೋಧ್ಯೆ ಕುರಿತಂತೆ ತನ್ನ ತೀರ್ಪು ಪ್ರಕಟಿಸಿದೆ. ಈ ತೀರ್ಪನ್ನು ಯಾರೇ ಆದರೂ ಸೋಲು ಅಥವಾ ಗೆಲುವು ಎಂದು ನೋಡಬಾರದು, ಅದು ರಾಮಭಕ್ತಿಯೇ ಇರಲಿ ಅಥವಾ ರಹೀಮ್ ಭಕ್ತಿಯೇ ಇರಲಿ, ನಾವು ರಾಷ್ಟ್ರಭಕ್ತಿಯ ಸ್ಫೂರ್ತಿಯನ್ನು ಬಲಪಡಿಸುವುದು ಅಗತ್ಯ. ಶಾಂತಿ ಹಾಗೂ ಸೌಹಾರ್ದ ನೆಲೆಸಲಿ! ಎಂದು ಹೇಳಿದ್ದಾರೆ.
 
ಸರ್ವೋನ್ನತ ನ್ಯಾಯಾಲಯದ ತೀರ್ಪು ಗಮನಾರ್ಹವಾದದ್ದು ಏಕೆಂದರೆ: ಯಾವುದೇ ವಿವಾದವನ್ನು ಕಾನೂನಿನ ಸರಿಯಾದ ಪ್ರಕ್ರಿಯೆಯ ಸ್ಫೂರ್ತಿಯಲ್ಲಿ ಸೌಹಾರ್ದಯುತವಾಗಿ ಪರಿಹರಿಸಬಹುದು ಎಂದು ಇದು ತೋರಿಸುತ್ತದೆ. ಇದು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ದೂರದೃಷ್ಟಿಯನ್ನು ಪುನರುಚ್ಚರಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಇದು ಸ್ಪಷ್ಟವಾಗಿ ವಿವರಿಸುತ್ತದೆ. ಎಂದೂ ಪ್ರಧಾನಮಂತ್ರಿ ಹೇಳಿದ್ದಾರೆ.
 
"ದಶಕಗಳಿಂದ ನಡೆಯುತ್ತಿದ್ದ ಪ್ರಕರಣವನ್ನು ನ್ಯಾಯಾಂಗಣ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿದೆ. ಎಲ್ಲ ಕಡೆಯವರಿಗೂ, ಪ್ರತಿ ಅಭಿಪ್ರಾಯದ ಅಂಶಕ್ಕೂ ಸೂಕ್ತ ಸಮಯಾವಕಾಶ ಮತ್ತು ವಿವಿಧ ಅಂಶಗಳ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಗಿದೆ.  ಈ ತೀರ್ಪು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ", ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
 
ಇಂದಿನ ತೀರ್ಪಿನ ಹಿನ್ನೆಲೆಯಲ್ಲಿ 130 ಕೋಟಿ ಭಾರತೀಯರು ಕಾಪಾಡಿಕೊಂಡ ಸಂಯಮ ಮತ್ತು ಶಾಂತಿ ಭಾರತೀಯರಲ್ಲಿ ಅಂತರ್ಗತವಾಗಿರುವ ಶಾಂತಿಯುತ ಸಹಬಾಳ್ವೆಯ ಬದ್ಧತೆಯ ಅಭಿವ್ಯಕ್ತಿಯಾಗಿದೆ. ಈ ಏಕತೆಯ ಸ್ಫೂರ್ತಿ ಮತ್ತು ಒಗ್ಗಟ್ಟಿನ ಶಕ್ತಿ ನಮ್ಮ ದೇಶದ ಅಭಿವೃದ್ಧಿಯ ಫಥವಾಗಿದೆ. ಪ್ರತಿಯೊಬ್ಬ ಭಾರತೀಯರೂ ಸಬಲರಾಗಲಿ.” ಎಂದೂ ಹೇಳಿದ್ದಾರೆ.
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Urea production at 275.75 lakh tons in April-February of FY'26: Government

Media Coverage

Urea production at 275.75 lakh tons in April-February of FY'26: Government
NM on the go

Nm on the go

Always be the first to hear from the PM. Get the App Now!
...
Chief Minister of Rajasthan meets with Prime Minister
March 25, 2026

Chief Minister of Rajasthan, Shri Bhajanlal Sharma met with Prime Minister, Shri Narendra Modi today in New Delhi.

The Prime Minister’s Office said in a X post;

“Chief Minister of Rajasthan, Shri @BhajanlalBjp had a meeting with Prime Minister @narendramodi today.

@RajCMO”