The Prime Minister Shri Narendra Modi will visit Chhattisgarh on Thursday, 14th June.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜೂನ್ 14ರ ಗುರುವಾರ ಛತ್ತೀಸಗಢಕ್ಕೆ ಭೇಟಿ ನೀಡಲಿದ್ದಾರೆ.

ಬಿಲಾಯ್ ನಲ್ಲಿ ಪ್ರಧಾನಿ, ಆಧುನಿಕ ಮತ್ತು ವಿಸ್ತರಿತ ಬಿಲಾಯ್ ಉಕ್ಕು ಘಟಕವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಆಧುನೀಕರಣವು ಉತ್ಪಾದಕತೆ, ಇಳುವರಿ, ಗುಣಮಟ್ಟ, ವೆಚ್ಚ, ಸ್ಪರ್ಧಾತ್ಮಕತೆ, ಇಂಧನ ದಕ್ಷತೆ ಮತ್ತು ಪರಿಸರ ಸಂರಕ್ಷಣೆ ಸುಧಾರಣೆಯ ಅತ್ಯುಧುನಿಕ ಉನ್ನತ ತಂತ್ರಜ್ಞಾನದ ಅಳವಡಿಕೆಯನ್ನೂ ಒಳಗೊಂಡಿದೆ.

ಇದೇ ಕಾರ್ಯಕ್ರಮದಲ್ಲಿ ಶ್ರೀ ನರೇಂದ್ರ ಮೋದಿ ಅವರು, ಬಿಲಾಯ್ ನ ಐಐಟಿಯ ಶಾಶ್ವತ ಕ್ಯಾಂಪಸ್ ಶಿಲಾನ್ಯಾಸ ಮಾಡಲಿದ್ದಾರೆ. ಭಾರತ್ ನೆಟ್ 2ನೇ ಹಂತದ ಆರಂಭದ ಅಂಗವಾಗಿ ಫಲಕವನ್ನೂ ಅನಾವರಣ ಮಾಡಲಿದ್ದಾರೆ. ಭಾರತ್ ನೆಟ್ ಯೋಜನೆಯು ಆಪ್ಟಿಕಲ್ ಫೈಬ್ ಜಾಲದ ಮೂಲಕ ಗ್ರಾಮ ಪಂಚಾಯ್ತಿಗಳನ್ನು ಸಂಪರ್ಕಿಸಲು ಅನುವಾಗುತ್ತದೆ.

ಪ್ರಧಾನಿಯವರು ಜಗದಾಲ್ಪುರ್ ಮತ್ತು ರಾಯ್ ಪುರ್ ನಡುವೆ ವಾಯುಯಾನ ಸೇವೆಯನ್ನೂ ಉದ್ಘಾಟಿಸಲಿದ್ದಾರೆ. ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ಲ್ಯಾಪ್ ಟಾಪ್, ಚೆಕ್ ಮತ್ತು ಪ್ರಮಾಣ ಪತ್ರಗಳನ್ನೂ ಅವರು ವಿತರಿಸಲಿದ್ದಾರೆ. ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬಿಲಾಯ್  ಗೆ ಆಗಮಿಸುವ ಮುನ್ನ, ಪ್ರಧಾನಮಂತ್ರಿಯವರು, ನಯಾ ರಾಯ್ಪುರ್ ಸ್ಮಾರ್ಟ್ ಸಿಟಿಗೂ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು, ನಗರದ ಸಮಗ್ರ ನಿಯಂತ್ರಣ ಕೇಂದ್ರವನ್ನೂ ಉದ್ಘಾಟಿಸಲಿದ್ದಾರೆ.

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Railways takes up 764 km of new lines to boost connectivity in Bihar’s Seemanchal region

Media Coverage

Indian Railways takes up 764 km of new lines to boost connectivity in Bihar’s Seemanchal region
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 07 ಆಗಸ್ಟ್ 2026
August 07, 2026

Viksit Bharat Accelerating: 4x Data Centres, Record EV Sales, Ethanol Validation & Northeast Connectivity Under PM Modi’s Watch